ETV Bharat / state

ರಾಜ್ಯದಲ್ಲಿ ಮಾದಕ ದ್ರವ್ಯ ಮಾರಾಟ ಜಾಲ ನಿರ್ಮೂಲನೆ ಮಾಡಿ: ಸಲೀಂ ಅಹಮದ್ - Bangaluru latest news

ವಿದ್ಯಾರ್ಥಿಗಳಿಂದ ಹಿಡಿದು ಚಲನಚಿತ್ರ ತಾರೆಯರವರೆಗೆ ಎಲ್ಲ ವರ್ಗದ ಜನರೂ ಡ್ರಗ್ಸ್​ಗೆ ಗ್ರಾಹಕರಾಗಿದ್ದಾರೆ. ಮಾದಕ ವಸ್ತುಗಳ ಲಭ್ಯತೆಯು ರಹಸ್ಯವಾಗಿ ಆದರೂ, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಯುವಕರ ಜೀವನವನ್ನು ಹಾಳುಮಾಡುತ್ತಿದೆ. ಪ್ರತಿಯಾಗಿ ಅವರ ಇಡೀ ಕುಟುಂಬ ತೊಂದರೆಗೆ ಈಡಾಗುತ್ತಿದೆ ಎಂದು ಸಲೀಂ ಅಹಮದ್ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

KPCC working president Saleem Ahmed wrote a letter about drug sales
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ (ಸಂಗ್ರಹ ಚಿತ್ರ)
author img

By

Published : Aug 29, 2020, 9:02 PM IST

ಬೆಂಗಳೂರು: ರಾಜ್ಯದಲ್ಲಿ ಮಾದಕ ದ್ರವ್ಯ ಮಾರಾಟ ಜಾಲವನ್ನು ನಿರ್ಮೂಲನೆ ಮಾಡಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮನವಿ ಮಾಡಿದ್ದಾರೆ.

KPCC working president Saleem Ahmed wrote a letter about drug sales
ಕೇಂದ್ರ ಗೃಹ ಸಚಿವರಿಗೆ ಬರೆದ ಪತ್ರ

ಈ ಸಂಬಂಧ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿರುವ ಅವರು, ಬೆಂಗಳೂರಿನಲ್ಲಿ ಮಾದಕವಸ್ತು ಕಳ್ಳಸಾಗಣೆ ದಂಧೆಯನ್ನು ಕಾನೂನು ಜಾರಿ ಸಂಸ್ಥೆಗಳು ಭೇದಿಸಿರುವುದು ಆಗಲೇ ತಮ್ಮ ಗಮನಕ್ಕೆ ಬಂದಿದೆ ಎಂದು ನಂಬಿದ್ದೇನೆ. ದಂಧೆ ಮತ್ತು ಅದರ ಪ್ರಮಾಣದ ಬಗ್ಗೆ ವರದಿಗಳು ಭಯಾನಕವಾಗಿವೆ. ಮಾದಕ ವಸ್ತುಗಳನ್ನು ವಿದೇಶದಿಂದ ದೇಶಕ್ಕೆ ತರಲಾಗುತ್ತಿದೆ ಮತ್ತು ಬಹಳ ವ್ಯವಸ್ಥಿತವಾಗಿ ದೇಶಾದ್ಯಂತ ವಿತರಿಸಲಾಗುತ್ತಿದೆ. ಆದ್ದರಿಂದ, ದಂಧೆಯಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತು ಮಾರಾಟ ಮಾಫಿಯಾ ಲಿಂಕ್​ಗಳು ಇರಬೇಕು ಎಂಬ ಅನುಮಾನ ತಮ್ಮದು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ವಿದ್ಯಾರ್ಥಿಗಳಿಂದ ಹಿಡಿದು ಚಲನಚಿತ್ರ ತಾರೆಯರವರೆಗೆ ಎಲ್ಲ ವರ್ಗದ ಜನ ಡ್ರಗ್ಸ್​ಗೆ ಗ್ರಾಹಕರಾಗಿದ್ದಾರೆ. ಮಾದಕ ವಸ್ತುಗಳ ಲಭ್ಯತೆಯು ರಹಸ್ಯವಾಗಿ ಆದರೂ, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಯುವಕರ ಜೀವನವನ್ನು ಹಾಳು ಮಾಡುತ್ತಿದೆ. ಪ್ರತಿಯಾಗಿ ಅವರ ಇಡೀ ಕುಟುಂಬ ತೊಂದರೆಗೆ ಈಡಾಗುತ್ತಿದೆ. ವ್ಯಸನಿಗಳು ಮಾದಕ ದ್ರವ್ಯದ ಮಾದಕತೆಯಂತೆ ಸಮಾಜಕ್ಕೆ ಕಂಟಕಪ್ರಾಯರಾಗಿ ಪರಿಣಮಿಸುತ್ತಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ

ಅವರು ತಮ್ಮ ಮನಸ್ಸಿನ ಮೇಲೆ ನಿಯಂತ್ರಣ ಹೊಂದಿರುವುದಿಲ್ಲ ಮತ್ತು ಘೋರ ಅಪರಾಧಗಳು ಸೇರಿದಂತೆ ನಂಬಲಾಗದ ಕೃತ್ಯಗಳಿಗೆ ಮುಂದಾಗುತ್ತಾರೆ. ಒಮ್ಮೆ ಮಾದಕ ವಸ್ತುವಿನ ದಾಸರಾದರೆ ಅವನ್ನು ಸಂಗ್ರಹಿಸಲು ಯಾವುದೇ ಮಟ್ಟಿಗೆ ಹೋಗುತ್ತಾರೆ. ಅವರು ಸಮಾಜ ವಿರೋಧಿ ಮತ್ತು ನಿರ್ಲಜ್ಜ ಅಪರಾಧಿಗಳ ದಾಸರಾಗುತ್ತಾರೆ. ಇದು ಇಡೀ ನಾಗರಿಕ ಸಮಾಜವನ್ನು ಅಪಾಯಕ್ಕೆ ಒಡ್ಡುತ್ತದೆ ಎಂದು ಸಲೀಂ ಅಹಮದ್ ಪತ್ರದಲ್ಲಿ ಹೇಳಿದ್ದಾರೆ.

ಗಂಭೀರವಾಗಿ ಪರಿಗಣಿಸಿ:

ಈ ಅಪಾಯಕಾರಿ ಸನ್ನಿವೇಶದ ದೃಷ್ಟಿಯಿಂದ, ಈ ವಿಷಯವನ್ನು ದಯವಿಟ್ಟು ಗಂಭೀರವಾಗಿ ಪರಿಗಣಿಸಿ. ಈ ಭೀತಿಯನ್ನು ಬೇರುಮಟ್ಟದಿಂದ ನಿರ್ಮೂಲನೆ ಮಾಡಲು ಮುಂದಾಗುವಂತೆ ಮನವಿ ಮಾಡುತ್ತೇನೆ. ಅಗತ್ಯವಿದ್ದರೆ ಅಂತಾರಾಷ್ಟ್ರೀಯ ಕಾನೂನು ಜಾರಿ ಸಂಸ್ಥೆಗಳನ್ನು ಸಹ ಈ ಉದ್ದೇಶಕ್ಕಾಗಿ ಬಳಸಿಕೊಳ್ಳುವುದು ಉತ್ತಮ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.