ಬೆಂಗಳೂರು: ನಾನು ಎಂದೂ ಡಿ ಕೆ ಶಿವಕುಮಾರ್ ಅವರನ್ನು ಕಡು ಭ್ರಷ್ಟ ಅಂತ ಹೇಳಿಲ್ಲ, ನಾನು ಅವರನ್ನು ಕಡು ಭ್ರಷ್ಟ ಅಂತ ಹೇಳಿದ್ದನ್ನು ತೋರಿಸಿದರೆ ರಾಜಕೀಯದಿಂದಲೇ ನಿವೃತ್ತಿ ಆಗ್ತೇನೆ ಎಂದು ಸವಾಲು ಹಾಕಿದ್ದಾರೆ ಮಾಜಿ ಸಂಸದ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ವಿ ಎಸ್ ಉಗ್ರಪ್ಪ.
ಸಚಿವ ಅಶ್ವತ್ಥನಾರಾಯಣ ಸುದ್ದಿಗೋಷ್ಠಿಗೆ ಪ್ರತ್ಯುತ್ತರ ನೀಡಿದ ಅವರು, ಕಾಂಗ್ರೆಸ್ ನಾಯಕರ ಭ್ರಷ್ಟಾಚಾರ ಬಿಚ್ಚಿಡ್ತೀನಿ ಅಂತ ಹೇಳ್ತಿದ್ದಾರೆ. ಬಿಚ್ಚಿಡಿ ಯಾರು ನಿಮನ್ನು ತಡೆದಿದ್ದಾರೆ? ನಿಮ್ಮ ಬಳಿ ದಾಖಲೆ ಇದ್ದರೆ ಪೊಲೀಸರಿಗೆ ಕೊಡಬೇಕಿತ್ತು. ಪೊಲೀಸ್ ಜೀವಂತವಾಗಿದ್ದರೆ ಅಶ್ವತ್ಥ ನಾರಾಯಣಗೆ ನೋಟಿಸ್ ಕೊಟ್ಟು ದಾಖಲೆ ಪಡೆಯಲಿ ಎಂದು ಸವಾಲು ಹಾಕಿದರು.
ನಾನು ಸಂಸತ್ ಸದಸ್ಯ ಆಗಿದ್ದೆ, ವಿಪಕ್ಷ ನಾಯಕ ಆಗಿದ್ದೆ, ನನಗೆ ಏಕ ವಚನ ಪ್ರಯೋಗ ಮಾಡಿದ್ದಾರೆ ಅಂದರೆ ಅವರ ಸಂಸ್ಕೃತಿ ಏನು? ಅವರ ಸಂಸ್ಕಾರ ಏನು ಅಂತ ಗೊತ್ತಾಗುತ್ತೆ. ಅವರ ನಾಲಗೆ ಅವರ ಪ್ರವೃತ್ತಿ ತೋರಿಸುತ್ತೆ ಎಂದು ಹರಿಹಾಯ್ದರು. ಅಶ್ವತ್ಥ ನಾರಾಯಣ ಶಾಸಕರಾಗಿದ್ದಾಗ ಅವರ ಆಸ್ತಿ ಎಷ್ಟಿತ್ತು.? ಈಗ ಎಷ್ಟಿದೆ.? ಪ್ರೋ. ನಾಗರಾಜ್ ಹಾಗೂ ಸೌಮ್ಯ ಬಂಧನ ಬಗ್ಗೆ ಯಾಕೆ ಅಶ್ವತ್ಥ ನಾರಾಯಣ ಬಾಯಿ ಬಿಡ್ತಿಲ್ಲ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಮಹಾ ಆರತಿ ರದ್ದು : ಈದ್ ಹಬ್ಬಕ್ಕೆ ತೊಂದರೆ ಕೊಡಬಾರದು ಎಂದ ರಾಜ್ ಠಾಕ್ರೆ