ETV Bharat / state

ಕೆಪಿಸಿಸಿ ವಿವಿಧ ಸಮಿತಿಗಳಿಗೆ ಶೀಘ್ರವೇ ಪದಾಧಿಕಾರಿಗಳ ನೇಮಕ: ಸಲೀಂ ಅಹಮ್ಮದ್​​​ - Bangalore city news

ಕೊರೊನಾ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷ ಸ್ಥಾನಗಳಿಗೆ ಪದಗ್ರಹಣ ಕಾರ್ಯಕ್ರಮ ಮುಂದೂಡಲಾಗಿತ್ತು. ಈಗ ಅದು ಕೂಡ ಪೂರ್ಣಗೊಂಡಿದ್ದು, ನನೆಗುದಿಗೆ ಬಿದ್ದಿರುವ ಕೆಪಿಸಿಸಿ ವಿವಿಧ ಸಮಿತಿಗಳ ನೇಮಕ ಪ್ರಕ್ರಿಯೆ ಶೀಘ್ರ ಆರಂಭಿಸಲಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್​​​​​ ಹೇಳಿದರು.

Salim Ahmed, KPCC working president
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್​​​
author img

By

Published : Jul 7, 2020, 4:29 PM IST

ಬೆಂಗಳೂರು: ಕೆಪಿಸಿಸಿಯ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳ ನೇಮಕ ಶೀಘ್ರವೇ ಆಗಲಿದೆ. ಈ ನಿಟ್ಟಿನಲ್ಲಿ ಸಭೆ ಸೇರಿ ಚರ್ಚೆ ಆರಂಭಿಸುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ​​​ತಿಳಿಸಿದರು.

ಈಟಿವಿ ಭಾರತ್​​ಗೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ ಅವರು, ಪಕ್ಷದ ಹೈಕಮಾಂಡ್ ಸೂಚನೆ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿಯ ವಿವಿಧ ಸಮಿತಿಗಳನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದರು. ಆದರೆ ಪದಾಧಿಕಾರಿಗಳ ನೇಮಕವಾಗಿರಲಿಲ್ಲ. ಉಪ ಚುನಾವಣೆಯಲ್ಲಿ ಕಾಂಗ್ರೆಸ್​​ ಹಿನ್ನಡೆ ಅನುಭವಿಸಿದ ಕಾರಣ ದಿನೇಶ್​ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು ಎಂದರು.

ಮೂರು ತಿಂಗಳ ಹಿಂದೆಯೇ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಹಾಗೂ ನಾವು ಕಾರ್ಯಾಧ್ಯಕ್ಷರಾಗಿ ನಿಯೋಜಿತವಾಗಿದ್ದೇವೆ. ಎಲ್ಲಾ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಸಕ್ರಿಯವಾಗಿ ಅಧ್ಯಕ್ಷರ ಜೊತೆ ಸಂಪರ್ಕದಲ್ಲಿದ್ದು, ಕಾರ್ಯನಿರ್ವಹಿಸುತ್ತಿದ್ದಾರೆ. ಆದಷ್ಟು ಬೇಗ ಕೆಪಿಸಿಸಿ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳ ಹಾಗೂ ಅಧ್ಯಕ್ಷರ ನೇಮಕ ಆಗಲಿದೆ. ಸದ್ಯ ಈ ನಿಟ್ಟಿನಲ್ಲಿ ಯಾವುದೇ ಸಭೆ ಇಲ್ಲವೇ ಚರ್ಚೆ ನಡೆದಿಲ್ಲ ಎಂದು ವಿವರಿಸಿದರು.

ಬೂತ್ ಹಾಗೂ ಪಂಚಾಯತ್​ ಕಮಿಟಿಗಳು ಬೇಗ ಆಗಬೇಕು ಎಂಬ ನಿಟ್ಟಿನಲ್ಲಿ ಆದ್ಯತೆ ನೀಡಿ ಕಾರ್ಯನಿರ್ವಹಿಸಲಾಗುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಬರುತ್ತಿದ್ದಂತೆ ಮೊದಲ ಆದ್ಯತೆಯಾಗಿ ಈ ಕಾರ್ಯ ಕೈಗೆತ್ತಿಕೊಳ್ಳಲಿದ್ದೇವೆ. ಅದಾದ ಬಳಿಕ ಕೆಪಿಸಿಸಿ ಸಮಿತಿಗಳಿಗೆ ಅಧ್ಯಕ್ಷರು, ಪದಾಧಿಕಾರಿಗಳ ನೇಮಕ ಆಗಲಿದೆ ಎಂದರು.

ಹಿರಿಯ-ಕಿರಿಯರಿಗೆ ಸಮಾನ ಅವಕಾಶ

ಮುಂದಿನ ದಿನಗಳಲ್ಲಿ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳ ನೇಮಕ ಕುರಿತು ಚರ್ಚಿಸಲಿದ್ದೇವೆ. ಈ ಹಿಂದಿನ ಸಮಿತಿಗಳಲ್ಲಿ 870 ಪದಾಧಿಕಾರಿಗಳು ಇದ್ದರು. ಈಗ ಅಷ್ಟು ದೊಡ್ಡ ಸಮಿತಿ ಇರುವುದಿಲ್ಲ. ಕೆಲ ತಿಂಗಳಲ್ಲಿ ಪಕ್ಷದ ಕಾರ್ಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರ ಪಟ್ಟಿ ತರಿಸಿಕೊಂಡು ಪರಿಶೀಲಿಸಿ ಅಧ್ಯಕ್ಷರು ಆಯ್ಕೆಗೆ ಪರಿಗಣಿಸುತ್ತಾರೆ ಎಂದು ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್​​​​​

ಹಿರಿಯರು ಹಾಗೂ ಯುವಕರು ಎರಡೂ ವಯೋಮಾನದವರಿಗೂ ಸಮಾನ ಅವಕಾಶ ಕಲ್ಪಿಸಲಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿಯೊಬ್ಬ ಪದಾಧಿಕಾರಿಯೂ ಅವರ ಬೂತ್ ಮಟ್ಟದಲ್ಲಿ ಸದಸ್ಯರಾಗಿರಬೇಕು ಎಂಬ ನಿಯಮವನ್ನು ಜಾರಿಗೆ ತರುತ್ತಿದ್ದೇವೆ. ಈ ವಿಚಾರವನ್ನು ಅಧ್ಯಕ್ಷರು ಈಗಾಗಲೇ ತಿಳಿಸಿದ್ದಾರೆ ಎಂದರು.

ಯುವ ಕಾಂಗ್ರೆಸ್​ಗೆ ಪ್ರತ್ಯೇಕ ನಿಯಮ

ಯುವ ಕಾಂಗ್ರೆಸ್ ನೇಮಕಕ್ಕೆ ಪ್ರತ್ಯೇಕ ನಿಯಮಗಳಿವೆ. ಪ್ರತ್ಯೇಕ ಸಮಿತಿ ಇರಲಿದೆ. ಪಕ್ಷದ ವತಿಯಿಂದ ಎಲ್ಲಾ ಕಡೆ ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳಿ ಎಂದು ತಿಳಿಸಿದ್ದೇವೆ. ಸದಸ್ಯತ್ವ ಅಭಿಯಾನ ಆರಂಭವಾಗಬೇಕಿದೆ. ಈ ಸಂಬಂಧ ಎಐಸಿಸಿ ತೀರ್ಮಾನ ಕೈಗೊಳ್ಳಲಿದೆ. ಅದಾದ ನಂತರ ಯುವ ಕಾಂಗ್ರೆಸ್​​ಗೆ ಸದಸ್ಯತ್ವ ನೋಂದಣಿ ಆರಂಭವಾಗಲಿದೆ. ನಂತರ ಯುವ ಕಾಂಗ್ರೆಸ್​​​ಗೆ ನೇಮಕ ಆಗಲಿದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.