ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನ ನೇಮಕ ವಿಚಾರವನ್ನು ಹೈಕಮಾಂಡ್ ತೀರ್ಮಾನಿಸುತ್ತೆ. ಯಾರು ಏನೂ ಆತಂಕ ಪಡುವುದು ಬೇಡ ಎಂದು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು , ಸೋನಿಯಾಜಿ ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ತಾರೆ. ಯಾರೂ ಪಕ್ಷಕ್ಕಿಂತ ಮೇಲಿಲ್ಲ. ಸೂಕ್ತ ಸಂದರ್ಭದಲ್ಲಿ ಹೈಕಮಾಂಡ್ ನಿರ್ಧರಿಸುತ್ತೆ. ಇಲ್ಲಿ ಬೇರೆ ಯಾವ ಚರ್ಚೆಯೂ ಅನ್ವಯವಾಗಲ್ಲ ಎಂದರು. ನಿನ್ನೆ ಸಿದ್ದರಾಮಯ್ಯ ಜೊತೆ ಹೊಟೇಲ್ನಲ್ಲಿ ಉಪಹಾರ ಸೇವಿಸಿ ಚರ್ಚಿಸಿದ ವಿಚಾರ ಮಾತನಾಡಿ, ಮಾಧ್ಯಮಗಳೇ ಏನೇನೋ ಕಲ್ಪನೆ ಮಾಡಿಕೊಂಡು ಸುದ್ದಿ ಮಾಡ್ತೀರ. ವಾಸ್ತವ ನೋಡಿಕೊಂಡು ಸುದ್ದಿ ಮಾಡಬೇಕು. ಜನಾರ್ಧನ ಹೋಟೆಲ್ಗೆ ಭೇಟಿ ನೀಡ್ತೇವೆ. ಕೇರಳ ಹೋಟೆಲ್ ಮತ್ತೊಂದು ಹೋಟೆಲ್ಗೂ ಹೋಗ್ತೇವೆ. ನಿನ್ನೆ ಸಿದ್ದರಾಮಯ್ಯನವರೂ ಜೊತೆಯಾಗಿದ್ರು ಅಷ್ಟೇ. ನಾವು ಅಲ್ಲಿ ಏನೇನೂ ಮಾತನಾಡಿಲ್ಲ. ಸುಮ್ಮನೆ ಸುದ್ದಿ ಮಾಡಿದರೆ ಬೇರೆ ಅರ್ಥ ಬರುತ್ತೆ. ನಮ್ಮ ನಮ್ಮಲ್ಲೇ ಮಿಸ್ ಅಂಡರ್ಸ್ಟಾಂಡಿಂಗ್ ಆಗುತ್ತೆ. ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಸಿದ್ದರಾಮಯ್ಯ ಭೇಟಿಗೆ ವಿಶೇಷ ಅರ್ಥ ಬೇಕಿಲ್ಲ ಎಂದರು.
ಆಂಧ್ರದಲ್ಲಿ ಮಕ್ಕಳಾಟವಾಗಿದೆ: ಆಂಧ್ರದಲ್ಲಿ ಮೇಲ್ಮನೆ ರದ್ಧು ಮಾಡುವ ನಿರ್ಧಾರ ವಿಚಾರ ಮಾತನಾಡಿ, ಮೇಲ್ಮನೆ ರದ್ಧು ಪಡಿಸೋ ಅಧಿಕಾರ ರಾಜ್ಯಕ್ಕಿದೆ. ಆದರೆ ಆಂಧ್ರದಲ್ಲಿ ಮಕ್ಕಳಾಟವಾಗಿದೆ. ಒಮ್ಮೆ ತೆಗೆದು ಹಾಕಿದ್ರು. ಮತ್ತೆ ಅದನ್ನ ತಂದ್ರು. ಈಗ ಮತ್ತೆ ಮೇಲ್ಮನೆ ತೆಗೆದು ಹಾಕ್ತಿದ್ದಾರೆ. ರಾಜ್ಯದಲ್ಲಿ ಸಂಸ್ಥೆಯನ್ನ ಮಾಡಿದರೆ ಸದಾಕಾಲ ಇರಬೇಕು. ಮೇಲ್ಮನೆ ಸೀಟು ಸಿಗದವರಿಗೆ ಅವಕಾಶ ನೀಡುವುದಕ್ಕೆ ಇರಲ್ಲ. ಮೇಲ್ಮನೆ ಇರೋದು ಬಿಲ್ ಚರ್ಚೆಗೆ ಒತ್ತು ನೀಡೋಕೆ. ಪ್ರೂಪ್ ರೀಡರ್ ಇದ್ದಂಗೆ. ತಪ್ಪುಗಳಿದ್ದರೆ ಸರಿಪಡಿಸೋಕೆ. ಕೆಲವು ಬಿಲ್ ಗಳನ್ನ ಕೆಳಮನೆಯಲ್ಲಿ ಪ್ರಸ್ತಾಪ ಮಾಡ್ತಾರೆ. ಇವತ್ತು ತರಾತುರಿಯಲ್ಲಿ ಕೆಲವು ಕಾನೂನು ಬರ್ತಿವೆ. ಕಾನೂನು ತರುವಾಗ ಸೀರಿಯಸ್ ನೆಸ್ ಬೇಕಾಗುತ್ತದೆ. ಇಂತ ವೇಳೆ ಮೇಲ್ಮನೆಯಲ್ಲಿ ಸಲಹೆ ಕೊಡೋಕೆ ಸಾಧ್ಯವಾಗುತ್ತೆ. ತರಾಯುರಿಯಲ್ಲಿ ತೆಗೆದರೆ ಒಳ್ಳೆಯ ಸಂದೇಶ ಹೋಗಲ್ಲ. ಆದರೆ, ಇದನ್ನ ತೆಗೆಯೋದು ಸರಿಯಲ್ಲ. ರದ್ಧುಪಡಿಸೋದು, ತೆಗೆಯೋದು ಮಕ್ಕಳಾಟವಾದಂತೆ ಎಂದರು.