ಬೆಂಗಳೂರು: ಪರಿಷ್ಕೃತ ಪಠ್ಯ ಪುಸ್ತಕದ ಪ್ರತಿಯನ್ನು ಹರಿದು ಹಾಕಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮಹಾಕವಿ ಕುವೆಂಪು ಹೋರಾಟ ಸಮಿತಿ ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಿದ್ದ ಪರಿಷ್ಕೃತ ಪಠ್ಯ ಪುಸ್ತಕ ವಿರೋಧಿ ಬೃಹತ್ ಪ್ರತಿಭಟನಾ ಸಮ್ಮೇಳನದಲ್ಲಿ ಪರಿಷ್ಕೃತ ಪಠ್ಯ ಪುಸ್ತಕದ ಪ್ರತಿಯನ್ನು ಹರಿದು ಹಾಕಿದರು.
ಈ ವೇಳೆ ಮಾತನಾಡಿದ ಡಿಕೆಶಿ, ಸರ್ಕಾರ ಈ ಪಠ್ಯಪುಸ್ತಕವನ್ನು ಹಿಂದಕ್ಕೆ ಪಡೆಯಬೇಕು. ಪಡೆಯದೇ ಇದ್ದರೆ ಕೇವಲ 12 ತಿಂಗಳಿನಲ್ಲಿ ನಮ್ಮದೇಯಾದ ಸರ್ಕಾರ ತಂದು ಕಿತ್ತೆಸೆಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು. ನಾರಾಯಣ ಗುರು, ಶಂಕರಾಚಾರ್ಯರು ಸೇರಿದಂತೆ ಹಲವರಿಗೆ ಅವಮಾನ ಆಗಿದೆ. ಕೆಲವು ಸ್ವಾಮೀಜಿಗಳು ಮೈಮೇಲೆ ಎಣ್ಣೆ ಹಾಕಿಕೊಂಡು ಕೂತಿದ್ದಾರೆ. ಮಹಾಭಾರತ ನೆನಪಾಗುತ್ತದೆ, ದ್ರೌಪದಿ ವಸ್ತ್ರಾಪಹರಣ ಆಗುವಾಗ ನೋಡುತ್ತಿದ್ರು. ಹಾಗೆ ಸ್ವಾಮೀಜಿಗಳು ಮೈಗೆ ಎಣ್ಣೆ ಹಾಕಿಕೊಂಡು ಕೂತಿದ್ದಾರೆ. ಸಂವಿಧಾನ ನಮಗೆ ಬೈಬಲ್, ಮಹಾಭಾರತ, ಕುರಾನ್ ಆಗಿದೆ ಎಂದರು.
ನಾನು ನಿಮ್ಮ ಜೊತೆ ಅಂತಾ ಹೇಳಲು ಬಂದಿದ್ದೇನೆ. ಡಿ.ಕೆ ಶಿವಕುಮಾರ್ ಆಗಿ ಇಲ್ಲಿಗೆ ಬಂದಿಲ್ಲ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷದ ಅಧ್ಯಕ್ಷನಾಗಿ ಇಲ್ಲಿಗೆ ಬಂದಿದ್ದೇನೆ. ನಮ್ಮ ಪಕ್ಷ ನಿಮ್ಮ ಹೋರಾಟಕ್ಕೆ ಸದಾ ಬೆಂಬಲ ನೀಡಲಿದೆ. ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯ ಅವರ ಸ್ವತ್ತಲ್ಲ. ಅದು ರಾಜ್ಯದ ಸ್ವತ್ತಾಗಿತ್ತು ಎಂದು ತಿಳಿಸಿದರು.
ಇದನ್ನೂ ಓದಿ: ಲೋಕಸಭೆ ಸದಸ್ಯನನ್ನಾಗಿ ಮಾಡಬೇಕೆಂದು ಜಗ್ಗೇಶ್ ಕಂಡಿಷನ್ ಹಾಕಿದ್ದರು: ಸಚಿವ ಆರ್ ಅಶೋಕ್