ETV Bharat / state

ಬೆಂಗಳೂರಲ್ಲಿ 20ಕ್ಕೂ ಹೆಚ್ಚು ಬಾರಿ ಕಲ್ಲಿನಿಂದ ಜಜ್ಜಿ ಕೊಲೆ ಪ್ರಕರಣ: ಪ್ರಮುಖ ಆರೋಪಿ ಬಂಧನ - ಬೆಂಗಳೂರು ಹತ್ಯೆ

ಬೆಂಗಳೂರಲ್ಲಿ ಕಲ್ಲಿನಿಂದ ಜಜ್ಜಿ ಕೊಲೆಗೈದ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಕೆ ಪಿ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಕೊಲೆ
ಬೆಂಗಳೂರು ಕೊಲೆ
author img

By

Published : Dec 30, 2022, 4:45 PM IST

ಬೆಂಗಳೂರು: ರಾಜ್ಯ ರಾಜಧಾನಿಯನ್ನೇ ಬೆಚ್ಚಿ ಬೀಳಿಸಿದ್ದ 20ಕ್ಕೂ ಹೆಚ್ಚು ಬಾರಿ ಕಲ್ಲಿನಿಂದ ಜಜ್ಜಿ ಕೊಲೆಗೈದ ಪ್ರಕರಣದ ಪ್ರಮುಖ ಆರೋಪಿಯನ್ನು ಕೆ.ಪಿ ಅಗ್ರಹಾರ ಠಾಣಾ ಪೊಲೀಸರು ಸೆರೆ ಹಿಡಿದಿದ್ದಾರೆ. ಪ್ರಮುಖ ಆರೋಪಿ ಸರೋಜ (29) ಬಂಧಿತ ಮಹಿಳೆ. ಹತ್ಯೆ ಸಂಬಂಧ ಈಗಾಗಲೇ ಡಿ.6ರಂದು ಪ್ರೇಮವ್ವ, ಅಕ್ಕಮಹಾದೇವಿ, ಮಂಜುನಾಥ್, ಕಿರಣ್, ಚೆನ್ನಪ್ಪ ಹಾಗೂ ಕಾಶಿನಾಥ್ ಎಂಬ ಆರೋಪಿಗಳನ್ನು ಬಂಧಿಸಿದ್ದರು. ಆದ್ರೆ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದ.

ಡಿಸೆಂಬರ್ 4ರಂದು ಮಾತನಾಡುವ ನೆಪದಲ್ಲಿ ಕರೆಸಿ ಮಂಜುನಾಥ್​ನನ್ನು ಆರೋಪಿಗಳು ಕೊಲೆ ಮಾಡಿದ್ದರು. ಆರೋಪಿಗಳ ಬರ್ಬರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ಡಿಸೆಂಬರ್ 6ರಂದು ಆರು ಜನ ಆರೋಪಿಗಳನ್ನು ಬಂಧಿಸಲಾಗಿತ್ತು ಎಂದು ಕೆ.ಪಿ.ಅಗ್ರಹಾರ ಠಾಣಾ ಪೊಲೀಸರು ತಿಳಿಸಿದ್ದಾರೆ.

20ಕ್ಕೂ ಹೆಚ್ಚು ಬಾರಿ ಜಜ್ಜಿ ಕೊಲೆ: ಕೆ ಪಿ ಅಗ್ರಹಾರದಲ್ಲಿ ಡಿ.4 ರಾತ್ರಿ ಆರೋಪಿಗಳು ಮಂಜುನಾಥ್​ ಕೊಲೆ ಮಾಡಿದ್ದರು. ನಡುರಸ್ತೆಯಲ್ಲಿ ಘಟನೆ ನಡೆದಿತ್ತು. ಕೊಲೆಯಾದ ಮಂಜುನಾಥ್ ಬಾಳಪ್ಪ ಜಮಖಂಡಿ ಬಾದಾಮಿ ಮೂಲದವರು.

ಕೆ ಪಿ ಅಗ್ರಹಾರದ 5ನೇ ಕ್ರಾಸ್​ ಬಳಿಯ ಮೆಡಿಕಲ್ಸ್​​ನಲ್ಲಿ ಮೊಬೈಲ್ ​ಅನ್ನು ಮಂಜುನಾಥ್ ಚಾರ್ಜ್​​ಗೆ ಹಾಕಿದ್ದರು. ಚಾರ್ಜ್‌ಗೆ ಹಾಕುವ ವೇಳೆ ಬಾಳಪ್ಪ ಅವರನ್ನು ಆರು ಜನ ಬಂದು ಭೇಟಿಯಾಗಿದ್ದರು. ಅವರಲ್ಲಿ ಮಾತನಾಡಿ ಬರುವುದಾಗಿ ಹೇಳಿ ಮೊಬೈಲ್​ ಬಿಟ್ಟು ಹೋಗಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಅವರ ಮಧ್ಯೆ ಗಲಾಟೆ ಆರಂಭವಾಗಿತ್ತು. ಆರು ಜನರಲ್ಲಿ ಮೂವರು ಮಹಿಳೆಯರು ಮತ್ತು ಮೂವರು ಪುರುಷರು ಇದ್ದರು. ಗಲಾಟೆ ವಿಕೋಪಕ್ಕೆ ತಿರುಗಿ, ಅಲ್ಲೇ ಇದ್ದ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದರು.

ಇದನ್ನೂ ಓದಿ: ಮಹಿಳೆಯರು ಸೇರಿ ಆರು ಮಂದಿಯಿಂದ ಕಲ್ಲಿನಿಂದ ಜಜ್ಜಿ ಯುವಕನ ಕೊಲೆ: ಭಯಾನಕ ಮರ್ಡರ್​ ಕಂಡು ಬೆಂಗಳೂರು ಪೊಲೀಸರಿಗೆ ಶಾಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.