ETV Bharat / state

ಕೊಡವ ಕುಟುಂಬದ ಹಾಕಿ ಜನಕ ಪಾಂಡಂಡ ಕುಟ್ಟಪ್ಪ ಇನ್ನಿಲ್ಲ

ಕೊಡಗಿನಲ್ಲಿ ಹಾಕಿಗೆ ಕಾಯಕಲ್ಪ ನೀಡಲು ಕೊಡವ ಕುಟುಂಬಗಳ ನಡುವೆ ಹಾಕಿ ಪಂದ್ಯಾಟವನ್ನು ಆಯೋಜಿಸಿದ್ದ ಖ್ಯಾತಿ ಕುಟ್ಟಪ್ಪ ಅವರದು. ಕರಡದಲ್ಲಿ 1997 ರಲ್ಲಿ ಮೊದಲ ಪಂದ್ಯಾಟ ನಡೆದಿತ್ತು.

Pandanda Kuttappa
ಪಾಂಡಂಡ ಕುಟ್ಟಪ್ಪ
author img

By

Published : May 7, 2020, 1:17 PM IST

ಬೆಂಗಳೂರು: ಕೊಡವ ಕುಟುಂಬದ ಹಾಕಿ ಜನಕ ಪಾಂಡಂಡ ಕುಟ್ಟಪ್ಪ (86)ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಸ್ವಗೖಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನು ಕುಟ್ಟಪ್ಪ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

ಇನ್ನು ಕೊಡಗಿನಲ್ಲಿ ಹಾಕಿ ಪಂದ್ಯಾಟಕ್ಕೆ ಕಾಯಕಲ್ಪ ನೀಡಲು ಕೊಡವ ಕುಟುಂಬಗಳ ನಡುವೆ ಹಾಕಿ ಪಂದ್ಯಾಟವನ್ನು ಆಯೋಜಿಸಿದ್ದ ಖ್ಯಾತಿ ಕುಟ್ಟಪ್ಪ ಅವರದು. ಕರಡದಲ್ಲಿ 1997 ರಲ್ಲಿ ಮೊದಲ ಪಂದ್ಯಾಟ ನಡೆದಿತ್ತು. ಒಲಿಂಪಿಕ್ಸ್ ಮಾದರಿಯಲ್ಲಿಯೇ ಕೊಡವ ಕೌಟುಂಬಿಕ ಹಾಕಿ ವಿಶ್ವದಾದ್ಯಂತ ಗಮನಸೆಳೆದಿತ್ತು. ಅಂದಿನಿಂದ ಪ್ರತೀ ವಷ೯ ಕೊಡಗಿನಲ್ಲಿ 1 ತಿಂಗಳ ಕಾಲ ಕೊಡವ ಹಾಕಿ ಹಬ್ಬ ನಡೆದುಕೊಂಡು ಬರಯತ್ತಿದೆ.

ಕುಟ್ಟಪ್ಪನವರ ಆಶಯದಂತೆ ಯಶಸ್ವಿಯಾಗಿ ನಡೆಯುತ್ತಿದ್ದ ಕೌಟುಂಬಿಕ ಹಾಕಿ ಹಬ್ಬ. ಕಳೆದ ವರ್ಷ ಮಹಾಮಳೆ ಮತ್ತು ಈ ವರ್ಷದ ಕೊರೊನಾದಿಂದಾಗಿ ಹಾಕಿ ಹಬ್ಬ ನಡೆಯಲಿಲ್ಲ.‌ ಕಳೆದ 22 ವರ್ಷಗಳೂ ಹಾಕಿ ಹಬ್ಬಕ್ಕೆ ಮಾಗ೯ದರ್ಶನ ನೀಡುತ್ತಿದ್ದ ಕುಟ್ಟಪ್ಪ ಎಸ್​ಬಿಐನ ನಿವೃತ್ತ ಮ್ಯಾನೇಜರ್ ಆಗಿದ್ದರು. ಕೊಡವ ಹಾಕಿ ಪಂದ್ಯಾವಳಿ ಆಯೋಜನೆಗಾಗಿ ಪಾಂಡಂಡ ಕುಟ್ಟಪ್ಪ ಅವರು ಲಿಮ್ಕಾ ಬುಕ್ ಆಫ್ ರೆಕಾರ್ಡ್​ನಲ್ಲಿಯೂ ಸ್ಥಾನ ಪಡೆದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.