ಬೆಂಗಳೂರು : ವಿಶ್ವಾಸಮತ ನಿರ್ಣಯಕ್ಕೆ ಬಂದರೆ, ನಮ್ಮ ಸರ್ಕಾರ ಜಯಗಳಿಸುತ್ತೆ. ಸಿಎಂ ಮತ್ತು ಸಿದ್ದರಾಮಯ್ಯ ಚರ್ಚೆ ನಡೆಸಿ ಇವತ್ತು ನಿರ್ಣಯ ಆಗತ್ತೆ ಅಂತಾ ಹೇಳಿದ್ದಾರೆ. ಈ ನಡುವೆ ಸುಪ್ರೀಂ ಹೋಗೋ ಅವಶ್ಯಕತೆ ಬಿಜೆಪಿ ಗೆ ಏನಿತ್ತು. ಸಭಾಧ್ಯಕ್ಷರ ಕೆಲಸದಲ್ಲಿ ಹಸ್ತಕ್ಷೇಪ ಮಾಡಲ್ಲ ಅಂತಾ ಸುಪ್ರೀಂ ಹೇಳಿದೆ ಆದರೂ ಅರ್ಜಿ ಸಲ್ಲಿಸಿ ಸುಪ್ರೀಂ ಗೆ ಅಗೌರವ ತೋರಿಸುತ್ತಿದೆ ಎಂದು ಸಚಿವ ಯು ಟಿ ಖಾದರ್ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
ರೆಸಾರ್ಟ್ ನಿಂದ ವಿಧಾನಸೌಧದತ್ತ ತೆರಳುವ ಸಂದರ್ಭದಲ್ಲಿ ಮಾತನಾಡಿ. ವಿಶ್ವಾಸಮತ ಟೈಂ ಅಲ್ಲಿ ಕಾದು ನೋಡಿ. ಸಂವಿಧಾನದ ಒಳಗೆ ನಾವು ಕೆಲಸ ಮಾಡುತ್ತಿದ್ದೇವೆ. ಅತೃಪ್ತರನ್ನು ನಂಬಬೇಡಿ. ಬೆಳಗ್ಗೆ ನಮ್ಮ ಜೊತೆಗಿದ್ದವರು ಮಧ್ಯಾಹ್ನ ವಿಮಾನ ಹತ್ತಿಕೊಂಡು ಹೋಗುತ್ತಾರೆ, ಮತ ಹಾಕಿದ ಜನರಿಗೆ ಅವರು ಮೋಸ ಮಾಡ್ತಿದ್ದಾರೆ ಎಂದು ರೆಬಲ್ ಶಾಸಕರ ವಿರುದ್ಧ ಕಿಡಿಕಾರಿದರು.
ಶ್ರೀಮಂತ ಪಾಟೀಲ್ ಪುತ್ರ ಸಿದ್ದರಾಮಯ್ಯ ಮೇಲೆ ಆರೋಪ ವಿಚಾರ ಕುರಿತಾಗಿ ಪ್ರತಿಕ್ರಿಯಿಸಿ, ಶೀಮಂತ್ ಪಾಟೀಲ್ ಮಗ ಸಿದ್ದರಾಮಯ್ಯ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಈ ರೀತಿ ಆರೋಪ ಮಾಡೋದು ಸರಿಯಲ್ಲ, ನಮ್ಮ ನಾಯಕರ ಮೇಲೆ ನಮಗೆ ನಂಬಿಕೆ ಇದೆ, ಈ ಆರೋಪ ನಮಗೆ ನೋವು ತಂದಿದೆ, ಕೂಡಲೇ ಶ್ರೀಮಂತ ಪಾಟೀಲ್ ಮಗ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಇತ್ತ ಜೆಡಿಎಸ್ ಶಾಸಕರು ವಿಧಾನಸೌಧದಲ್ಲಿ ನಡೆಯಲಿರುವ ವಿಧಾನಸಭೆಗೆ ಹಾಜರಾಗಲು ದೇವನಹಳ್ಳಿ ಬಳಿ ಇರುವ ಗಾಲ್ಫ್ ಶೈರ್ ರೆಸಾರ್ಟ್ ನಿಂದ ಖಾಸಗಿ ಬಸ್ ನಲ್ಲಿ ಹೊರಟಿದ್ದಾರೆ.