ಬೆಂಗಳೂರು: ರಾಜಧಾನಿಯ ಹದಗೆಟ್ಟ ರಸ್ತೆಗಳ ಬಗ್ಗೆ ಕಳೆದ ಕೆಲ ದಿನಗಳ ಹಿಂದೆ ಟ್ವೀಟ್ ಮೂಲಕ ಬೇಸರ ಹೊರಹಾಕಿದ್ದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ಇದೀಗ ಮತ್ತೊಮ್ಮೆ ಅದೇ ವಿಚಾರವನ್ನಿಟ್ಟುಕೊಂಡು ಟ್ವೀಟ್ ಮಾಡಿದ್ದಾರೆ.
ಬೆಂಗಳೂರು-ಮೈಸೂರು ನಡುವಿನ ರಸ್ತೆಯ ನೈಸ್ ರಸ್ತೆ ಜಂಕ್ಷನ್ ಸಮೀಪದಲ್ಲಿ ಹತ್ತಾರು ಗುಂಡಿಗಳು ಕಾಣಿಸಿಕೊಂಡಿರುವ ವಿಡಿಯೋ ತುಣುಕನ್ನು ಶ್ರೀರಾಮ್ ಬಿಎನ್ ಎನ್ನುವವರು ಟ್ವೀಟ್ ಮೂಲಕ ಹಂಚಿಕೊಂಡಿದ್ದರು. ಈ ವಿಡಿಯೋವನ್ನು ರಿಟ್ವೀಟ್ ಮಾಡಿರುವ ಷಾ, 'ಇದು ಆಘಾತಕಾರಿ ಮತ್ತು ನಾಚಿಕೆಗೇಡು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
Shocking n shameful https://t.co/0sPkw0tZ1B
— Kiran Mazumdar-Shaw (@kiranshaw) June 8, 2022 " class="align-text-top noRightClick twitterSection" data="
">Shocking n shameful https://t.co/0sPkw0tZ1B
— Kiran Mazumdar-Shaw (@kiranshaw) June 8, 2022Shocking n shameful https://t.co/0sPkw0tZ1B
— Kiran Mazumdar-Shaw (@kiranshaw) June 8, 2022
ಕಳಪೆ ರಸ್ತೆಗಳ ದುಃಸ್ಥಿತಿ ಆನೇಕಲ್ ರಾಜಕಾರಣಿಗಳಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಬಯೋಕಾನ್ ಮುಖ್ಯಸ್ಥೆ, ಸರ್ಜಾಪುರ ಸುತ್ತಮುತ್ತಲಿನ ಕೆಟ್ಟ ರಸ್ತೆಗಳ ಬಗ್ಗೆ ಟ್ವೀಟ್ ಮಾಡಿದ್ದರು. ಆನೇಕಲ್ ತಾಲೂಕಿನ ಹುಸೂರು-ಸರ್ಜಾಪುರ ರಸ್ತೆ ಸಂಚಾರ ಮಾಡದಿರುವಷ್ಟು ಹದಗೆಟ್ಟಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಉತ್ತಮ ರಸ್ತೆ ಸೌಕರ್ಯ ನೀಡಲು ಸಾಧ್ಯವಾಗದಿದ್ದರೆ ಸರ್ಕಾರ ಬಸ್ ಡಿಪೋ, ವಸತಿ ಗೃಹಗಳನ್ನು ಇಲ್ಲಿ ಯಾಕೆ ನಿರ್ಮಿಸಬೇಕಿತ್ತು ಎಂದು ಖಾರವಾಗಿ ಪ್ರಶ್ನಿಸಿದ್ದರು.
ಇದನ್ನೂ ಓದಿ: ಆನೇಕಲ್ ರಾಜಕಾರಣಿಗಳಿಗೆ ನಾಚಿಕೆಯಾಗಬೇಕು: ಬಯೋಕಾನ್ ಮುಖ್ಯಸ್ಥೆ ಕೆಂಡಾಮಂಡಲ