ETV Bharat / state

ಸಿನಿಮೀಯ ಶೈಲಿಯಲ್ಲಿ ಅಪಹರಣ: ವರ್ತೂರು ಪ್ರಕಾಶ್ ನೀಡಿದ ದೂರಿನ ಸಂಪೂರ್ಣ ಮಾಹಿತಿ.... - kidnap-varthuru-prakash-filed-case Information

ನನ್ನನ್ನು ಹಾಗೂ ನನ್ನ ಚಾಲಕನನ್ನು ದುಷ್ಕರ್ಮಿಗಳು ಹಣಕ್ಕಾಗಿ ಅಪಹರಿಸಿ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಬೆಳ್ಳಂದೂರು ಪೊಲೀಸ್ ಠಾಣೆಗೆ ಮಾಜಿ ಸಚಿವ ವರ್ತೂರ್ ಪ್ರಕಾಶ್ ನೀಡಿರುವ ದೂರಿನ ಸಂಪೂರ್ಣ ಮಾಹಿತಿ.

kidnap-varthuru-prakash-filed-case-information-news
ವರ್ತೂರು ಪ್ರಕಾಶ್ ನೀಡಿದ ದೂರಿನ ಸಂಪೂರ್ಣ ಮಾಹಿತಿ
author img

By

Published : Dec 1, 2020, 9:51 PM IST

Updated : Dec 1, 2020, 10:44 PM IST

ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣ ಸಂಬಂಧ, ಪೊಲೀಸರಿಗೆ ನೀಡಿದ ದೂರಿನ ಪ್ರತಿ ಈಟಿವಿ ಭಾರತಕ್ಕೆ ಲಭ್ಯವಾಗಿದೆ‌. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

ದೂರಿನಲ್ಲಿ ಏನಿದೆ..?

kidnap-varthuru-prakash-filed-case-information-news
ವರ್ತೂರು ಪ್ರಕಾಶ್ ನೀಡಿದ ದೂರಿನ ಸಂಪೂರ್ಣ ಮಾಹಿತಿ

ನ.25 ರಂದು ಸಂಜೆ 07-00 ಗಂಟೆ ಸಮಯದಲ್ಲಿ, ಕೋಲಾರದ ಹೊಸಹಳ್ಳಿ ಗ್ರಾಮದ ಬಳಿ ಇರುವ ನನ್ನ ಫಾರಂ ಹೌಸ್‌ನಿಂದ ನಾನು ನನ್ನ ಚಾಲಕನಾದ ಸುನೀಲ್ ಜೊತೆ ಕೋಲಾರ ನಗರಕ್ಕೆ ನನ್ನ ಫಾರ್ಚೂನರ್ ಕಾರು (ವಾಹನ ಸಂಖ್ಯೆ ಕೆಎ-05-ಎಂ.ವಿ-8775) ರಲ್ಲಿ ಬರುತ್ತಿದ್ದೆವು. ಫಾರಂ ಹೌಸ್‌ನಿಂದ ಒಂದು ಕಿಲೋಮೀಟರ್ ದೂರ ಬಂದ ನಂತರ ಕೆಲ ಅಪರಿಚಿತ ವ್ಯಕ್ತಿಗಳು ಏಕಾಏಕಿ ನನ್ನ ಕಾರನ್ನು ತಡೆಗಟ್ಟಿದ್ದರು. ಇನ್ನೊಂದು ಕಾರನ್ನು ಹಿಂದೆ ನಿಲ್ಲಿಸಿಕೊಂಡು ಏಕಾಏಕಿ ಸುಮಾರು 8 ಜನ ಎರಡು ಕಾರುಗಳಿಂದ ಇಳಿದು, ಲಾಂಗ್‌ ತೋರಿಸಿ, ನನ್ನನ್ನು ಕಾರಿನಿಂದ ಕೆಳಗಡೆ ಇಳಿಯುವಂತೆ ಸೂಚಿಸಿದ್ದರು.

ನಾನು ಇಳಿಯದಿದ್ದಾಗ ನನ್ನನ್ನು ಬಲವಂತವಾಗಿ ಕೆಳಗಡೆ ಎಳೆದು, ಆದೇ ಕಾರಿನ ಹಿಂಬದಿ ಸೀಟಿಗೆ ನನ್ನನ್ನು ಹಿಡಿದು ತಳ್ಳಿ, ಡ್ರೈವರ್ ಸುನೀಲ್ ನನ್ನು ಸಹ ಹಿಂಬದಿ ಸೀಟಿಗೆ ತಳ್ಳಿ, ನಮ್ಮಿಬ್ಬರಿಗೂ ಕಣ್ಣು ಕಾಣದಂತೆ ಕಪ್ಪು ಬಣ್ಣದ ಬಟ್ಟೆಯಿಂದ ಕಟ್ಟಿ ಎಲ್ಲಿಗೋ ಕರೆದುಕೊಂಡು ಹೋಗಿ 30 ಕೋಟಿ ಹಣವನ್ನು ತರಿಸಿ ಕೊಡುವಂತೆ ಬೆದರಿಕೆ ಹಾಕಿದ್ದಾರೆ.

ಇದಕ್ಕೆ ಒಪ್ಪದಿದ್ದಾಗ ನನ್ನ ಎರಡು ತೋಳು ಹಾಗೂ ಕಾಲುಗಳಿಗೆ ಹಗ್ಗದಿಂದ ಕಟ್ಟಿ ಲಾಂಗ್ ಮತ್ತು ರಾಡ್‌ಗಳಿಂದ ಹಲ್ಲೆ ನಡೆಸಿದ್ದಾರೆ. ನನ್ನ ಚಾಲಕನಿಗೂ ಸಹ ನಿಮ್ಮ ಬಾಸ್ ಹಣ ಎಲ್ಲಿಟ್ಟಿದ್ದಾನೆ ತಿಳಿಸು ಎಂದು ಚಿತ್ರ ಹಿಂಸೆ ನೀಡಿದ್ದಾರೆ.

48 ಲಕ್ಷ ರೂಪಾಯಿ ಹಣ ಕೊಟ್ಟರೂ ಬಿಡದ ಅಪಹರಣಕಾರರು:

ನ.26 ರಂದು ಅಪಹರಣಕಾರರ ಹಿಂಸೆ ತಾಳಲಾರದೇ, ನಯಾಜ್ ಎಂಬ ಹುಡುಗನ ಮೂಲಕ ಕೋಲಾರದ ಕಾಫಿ ಡೇ ಶಾಪ್ ಬಳಿ 48 ಲಕ್ಷ ರೂ. ತರಿಸಿಕೊಂಡು ಹಣವನ್ನು ಅಪಹರಣಕಾರರಿಗೆ ಕೊಟ್ಟಿದ್ದೇನೆ. ಹಣ ನೀಡಿದರೂ ಹೆಚ್ಚಿನ ಹಣಕ್ಕಾಗಿ ಪ್ರತಿಕ್ಷಣ ಪೀಡಿಸಿ ಹಿಂಸೆ ಮಾಡಿ ಮತ್ತೆ ಹಣವನ್ನು ನೀಡುವಂತೆ‌ ಒತ್ತಾಯಿಸಿದ್ದಾರೆ‌.

ನ.28 ಮುಂಜಾನೆವರೆಗೂ ಅಪಹರಣಕಾರರ ಕಪಿಮುಷ್ಠಿಯಲ್ಲಿದ್ದೇನೆ. ನನಗೆ ಹಣ ನೀಡಲು ಸಾಧ್ಯವಾಗದೇ ಇದ್ದಾಗ, ನನ್ನ ಚಾಲಕನಿಗೆ ಚಿತ್ರಹಿಂಸೆ ನೀಡಿ ರಾಡ್ ಮತ್ತು ಮಚ್ಚಿನಿಂದ ತಲೆಗೆ ಹೊಡೆದಿದ್ದರಿಂದ ಮೂರ್ಚೆ ತಪ್ಪಿ ಬಿದ್ದಿದ್ದಾರೆ‌. ಚಾಲಕ ಮೃತಪಟ್ಟಿದ್ದಾನೆಂದು ಭಾವಿಸಿ ಸ್ವಲ್ಪ ದೂರದಲ್ಲಿ ಡ್ರಿಂಕ್ಸ್ ಮಾಡುತ್ತಿರುವಾಗ ನನ್ನ ಚಾಲಕ ಜ್ಞಾನ ಬಂದು ಆ ಸ್ಥಳದಿಂದ ಪರಾರಿಯಾಗಿದ್ದ‌.

ಇದನ್ನ ಅರಿತ ಅಪರಿಚಿತರು ಚಾಲಕ ಪೊಲೀಸರಿಗೆ ಮಾಹಿತಿ ನೀಡಬಹುದು ಎಂದು ಭಯಗೊಂಡು, ನನ್ನನ್ನು ಹೊಸಕೋಟೆ ಬಳಿ ಇರುವ ಶಿವನಾಪುರ ಗ್ರಾಮದ ಖಾಲಿ ಮೈದಾನದಲ್ಲಿ ಬೆಳಗಿನ ಜಾವ ಸುಮಾರು 4 ಗಂಟೆಗೆ ಕಾರಿನಿಂದ ತಳ್ಳಿ ನಿನ್ನನ್ನು ಬಿಟ್ಟು ಹೋಗುತ್ತಿದ್ದೇವೆ. ಪೊಲೀಸರಿಗೆ ದೂರು ನೀಡಿದರೆ, ನಿನ್ನ ಮತ್ತು ನಿನ್ನ ಮಕ್ಕಳನ್ನು ಮುಗಿಸುತ್ತೇವೆ ಎಂದು ಬೆದರಿಕೆ ಹಾಕಿ ನನ್ನ ಕಾರಿನ ಸಮೇತ ಪರಾರಿಯಾಗಿದ್ದಾರೆ.

ಸ್ಥಳೀಯರ ನೆರವಿನಿಂದ ಕೆ.ಆರ್‌. ಪುರ ಖಾಸಗಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದುಕೊಂಡು ಮನೆಗೆ ತೆರಳಿದ್ದೆ. ಇಂದು ಕಾರು ಪತ್ತೆಯಾಗಿದ್ದರಿಂದ ಬೆಳ್ಳಂದೂರು ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕಿಡ್ನಾಪ್ ಮಾಡಿ, ಮೂರು ದಿನ ಕೂಡಿ ಹಾಕಿದ್ರು: ದೂರು ದಾಖಲಿಸಿದ ವರ್ತೂರ್ ಪ್ರಕಾಶ್

Last Updated : Dec 1, 2020, 10:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.