ಬೆಂಗಳೂರು: ಸ್ವಾರ್ಥ ರಹಿತ ರಾಜಕಾರಿಣಿ ಕೆಹೆಚ್ ಪಾಟೀಲ ರಾಜಕೀಯ ದೂರದರ್ಶಿತ್ವವುಳ್ಳವರಾಗಿದ್ದರು. ತಮಗಾಗಿ ಮತ್ತು ತಮ್ಮ ಕುಟುಂಬಕ್ಕಾಗಿ ಯಾವುದೇ ಅಸ್ತಿಯನ್ನು ಮಾಡದೇ ಕೇವಲ ಸಮಾಜದ ಅಭಿವೃದ್ಧಿಗೆ ಶ್ರಮಿಸಿದವರು ಎಂದು ತುಮಕೂರು ಸಂಸದ ಜಿ. ಎಸ್ ಬಸವರಾಜ್ ಹೇಳಿದರು.
ದಿವಂಗತ ಕೆಹೆಚ್ ಪಾಟೀಲರ 97ನೇ ಜಯಂತೋತ್ಸವದ ಅಂಗವಾಗಿ ಗಾಂಧೀಭವನದಲ್ಲಿ ಅಭಿಮಾನಿ ಬಳಗದವರು ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.ತಮ್ಮ ಭಾಷಣದುದ್ದಕ್ಕೂ ತಮ್ಮೊಂದಿಗೆ ಕೆಹೆಚ್ ಪಾಟೀಲ ಅವರ ಒಡನಾಟವನ್ನು ಸ್ಮರಿಸಿದ ಬಸವರಾಜ್, ಅವರ ವ್ಯಕ್ತಿತ್ವಕ್ಕೆ ಒಂದು ಶಕ್ತಿ ಇತ್ತು, ಸಾಮರ್ಥ್ಯ ಇತ್ತು . ಇಂದಿರಾ ಗಾಂಧಿ ಅವರು ಚಿಕ್ಕಮಗಳೂರು ಚುನಾವಣೆಯನ್ನು ಸ್ಮರಿಸಿ, ಅಂದು ವೀರೇಂದ್ರ ಪಾಟೀಲರ ಪರವಾಗಿ ಏಕಾಂಗಿಯಾಗಿ ಚುನಾವಣಾ ಪ್ರಚಾರ ಮತ್ತು ಹೋರಾಟ ಮಾಡಿದ್ದನ್ನು ಸ್ಮರಿಸಿಕೊಂಡರು. ಕೆಹೆಚ್ ಪಾಟೀಲರಂತವರು ಮುಖ್ಯಮಂತ್ರಿ ಯಾಗುವುದು ರಾಜಕೀಯ ಕಾರಣಗಳಿಗಾಗಿ ಕೈ ತಪ್ಪಿತು ಎಂದು ತಮ್ಮ ಮನದಾಳದ ಮಾತನ್ನು ಹೇಳಿಕೊಂಡರು.
ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಪಾಲ್ಗೊಂಡಿದ್ದ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ,ಕೆಹೆಚ್ ಪಾಟೀಲರಂತವರು ಸಾವಿರ ಸಾವಿರ ಜನ ಹುಟ್ಟಿಬಂದರೆ ಉತ್ತಮ ಸಮಾಜ ನಿರ್ಮಾಣ ವಾಗುತ್ತದೆ. ಅಪರೂಪದ ವ್ಯಕ್ತಿಯಾಗಿದ್ದ ಕೆಹೆಚ್ ಪಾಟೀಲರ ಸಮಾಜ ಸೇವೆಯನ್ನು ಕೊಂಡಾಡಿದರು.
ಸಮಾರಂಭದಲ್ಲಿ ಮಾಜಿ ಶಾಸಕ ಬಿ. ಆರ್ ಸುದರ್ಶನ್, ಶಾಸಕರಾದ ಅಮರೇಗೌಡ ಬಯ್ಯಾಪುರ, ಮಹಾಂತೇಶ್ ಕೌಜಲಗಿ, ಮಾಜಿ ಉಪ ಮಹಾಪೌರ ಸುಂದರರಾಜುಲು ಮತ್ತು ಇತರ ಹಲವಾರು ಗಣ್ಯರು ಭಾಗವಸಿಸಿದ್ದರು.