ಬೆಂಗಳೂರು/ ಹೈದರಾಬಾದ್: ಆಭರಣ ಪ್ರಿಯರಿಗೆ ಶುಭ ಸುದ್ದಿ, ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಸೋಮವಾರ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ.79,975 ರಷ್ಟಿದ್ದರೆ, ಬುಧವಾರ ರೂ.1,110ರಷ್ಟು ಇಳಿಕೆಯಾಗಿ ರೂ.78,865ಕ್ಕೆ ತಲುಪಿದೆ. ಸೋಮವಾರ ಪ್ರತಿ ಕೆ.ಜಿ ಬೆಳ್ಳಿ ಬೆಲೆ 91,556 ರೂ.ಗಳಾಗಿದ್ದರೆ, ಬುಧವಾರ ಅದು 201 ರೂ.ಕಡಿಮೆ ಆಗಿ 91,355 ರೂ.ಗೆ ವಹಿವಾಟು ನಡೆಸಿತು.
ಬೆಂಗಳೂರು: ಇನ್ನು 24 ಕ್ಯಾರೆಟ್ನ 10 ಗ್ರಾಂ ಬಂಗಾರಕ್ಕೆ 160 ಕಡಿಮೆ ಆಗಿ 77840 ರೂ ಗೆ ವಹಿವಾಟು ನಡೆಸುತ್ತಿದೆ.
ಗ್ರಾಂ | ಇಂದಿನ ಬೆಲೆ | ನಿನ್ನೆಯ ಬೆಲೆ | ಬದಲಾವಣೆ ದರ |
---|---|---|---|
1 | ₹7,784 | ₹7,800 | - ₹16 |
8 | ₹62,272 | ₹62,400 | - ₹128 |
10 | ₹77,840 | ₹78,000 | - ₹160 |
100 | ₹7,78,400 | ₹7,80,000 | - ₹1,600 |
ಬೆಂಗಳೂರಿನಲ್ಲಿ 10 ಗ್ರಾಂ ಆಭರಣ ಚಿನ್ನಕ್ಕೆ (22ಕ್ಯಾರೆಟ್) ಬಂಗಾರಕ್ಕೆ 150 ರೂ ಕಡಿಮೆ ಆಗಿ 71350 ರೂ ದಲ್ಲಿ ವಹಿವಾಟು ನಡೆಸುತ್ತಿದೆ.
1 (22 ಕ್ಯಾರೆಟ್) | ₹7,135 | ₹7,150 | - ₹15 |
8 ಗ್ರಾಂ | ₹57,080 | ₹57,200 | - ₹120 |
10 ಗ್ರಾಂ | ₹71,350 | ₹71,500 | - ₹150 |
100 ಗ್ರಾಂ | ₹7,13,500 | ₹7,15,000 | - ₹1,500 |
ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ: 24 ಕ್ಯಾರೆಟ್ನ ಹತ್ತು ಗ್ರಾಂ ಚಿನ್ನದ ಬೆಲೆ ರೂ.78,865 ಆಗಿದೆ. ಪ್ರತಿ ಕೆಜಿ ಬೆಳ್ಳಿಯ ಇಂದಿನ ಬೆಲೆ 91,355 ರೂ.
ಗಮನಿಸಿ: ಮೇಲೆ ತಿಳಿಸಿದ ದರಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾಗುತ್ತವೆ ಎಂಬುದನ್ನು ಗಮನಿಸಬೇಕಾಗುತ್ತದೆ.
ಸ್ಪಾಟ್ ಗೋಲ್ಡ್ ಬೆಲೆ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಕಡಿಮೆಯಾಗಿವೆ. ಸೋಮವಾರ ಒಂದು ಔನ್ಸ್ ಚಿನ್ನದ ಬೆಲೆ 2,654 ಡಾಲರ್ ಆಗಿದ್ದರೆ, ಬುಧವಾರದ ವೇಳೆಗೆ 8 ಡಾಲರ್ ಇಳಿಕೆಯಾಗಿ 2,646 ಡಾಲರ್ ತಲುಪಿದೆ. ಪ್ರಸ್ತುತ ಒಂದು ಔನ್ಸ್ ಬೆಳ್ಳಿಯ ಬೆಲೆ 30.40 ಡಾಲರ್ ಆಗಿದೆ.
ಸ್ಟಾಕ್ ಮಾರ್ಕೆಟ್ ನ್ಯೂಸ್ : ದೇಶೀಯ ಷೇರು ಮಾರುಕಟ್ಟೆಗಳಾದ ನಿಫ್ಟಿ ಮತ್ತು ಸೆನ್ಸೆಕ್ಸ್ ನಷ್ಟದೊಂದಿಗೆ ವಹಿವಾಟು ಆರಂಭಿಸಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಂದ ಋಣಾತ್ಮಕ ಸಂಕೇತಗಳು ಬರುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಖರೀದಿಗೆ ಹಿಂಜರಿಯುತ್ತಿದ್ದಾರೆ.
ಪ್ರಸ್ತುತ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಆರಂಭದಲ್ಲಿ 144 ಅಂಕ ಕಳೆದುಕೊಂಡು 80,567ರಲ್ಲಿ ವಹಿವಾಟು ನಡೆಸುತ್ತಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಕೂಡಾ ಶುರುವಿನಲ್ಲಿ 43 ಅಂಕ ಕಳೆದುಕೊಂಡು 24,292ರಲ್ಲಿ ಮುಂದುವರೆಸಿತ್ತು.
ಇದನ್ನು ಓದಿ:ಷೇರು ಮಾರುಕಟ್ಟೆಯಲ್ಲಿ ಪತನ: ಸೆನ್ಸೆಕ್ಸ್ 1064 & ನಿಫ್ಟಿ 332 ಅಂಕ ಕುಸಿತ