ETV Bharat / state

ಉದ್ಯಾನದ ಸೊಬಗು : ಕರ್ನಾಟಕ ಕಲಾ ಸಂಸ್ಕೃತಿಯ ಜೊತೆ ತಂತ್ರಜ್ಞಾನದ ಸಮ್ಮಿಲನ ಟರ್ಮಿನಲ್ 2 - airport terminal 2

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ -2 ಉದ್ಯಾನವನದಂತೆ ಕಂಗೊಳಿಸುತ್ತಿದೆ.

kempegowda-international-airport-terminal-2
ಉದ್ಯಾನವನದ ಸೊಬಗು : ಕರ್ನಾಟಕ ಕಲಾ ಸಂಸ್ಕೃತಿಯ ಜೊತೆ ತಂತ್ರಜ್ಞಾನದ ಸಮ್ಮಿಲನ ಟರ್ಮಿನಲ್ 2
author img

By

Published : Nov 12, 2022, 7:06 PM IST

Updated : Nov 12, 2022, 9:28 PM IST

ದೇವನಹಳ್ಳಿ : ನವೆಂಬರ್ 11 ರಂದು ಪ್ರಧಾನಿ ಮೋದಿಯವರಿಂದ ಉದ್ಘಾಟನೆಗೊಂಡ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ -2 ಉದ್ಯಾನವನದಂತೆ ಸಿಂಗಾರಗೊಂಡಿದೆ. ಈ ಉದ್ಯಾನದಲ್ಲಿ ಸಣ್ಣ ಜಲಪಾತ, ಕರ್ನಾಟಕ ಕಲಾ ಶ್ರೀಮಂತಿಕೆ ಮತ್ತು ಆಧುನಿಕ ತಂತ್ರಜ್ಞಾನದ ಬೆಸುಗೆ ಪ್ರಯಾಣಿಕರನ್ನು ಬೆರಗುಗೊಳಿಸಲಿದೆ.

ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಎರಡನೇ ಅತಿ ದೊಡ್ಡ ವಿಮಾನ ನಿಲ್ದಾಣ ಕೆಐಎಎಲ್. ಸದ್ಯ ಟರ್ಮಿನಲ್ -1 ರಲ್ಲಿ ವಾರ್ಷಿಕವಾಗಿ 1.6 ಕೋಟಿ ಪ್ರಯಾಣಿಕರು ಸಂಚಾರಿಸುತ್ತಾರೆ. ಪ್ರಯಾಣಿಕರ ದಟ್ಟಣೆಯಿಂದಾಗಿ ಎರಡನೇ ಟರ್ಮಿನಲ್ ನಿರ್ಮಾಣವಾಗಿದೆ. ಇದು ವಾರ್ಷಿಕವಾಗಿ 2 ಕೋಟಿಗೆ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಟರ್ಮಿನಲ್-2 ನ ಒಳಗೆ ಗಾರ್ಡನ್, ಸುಸ್ಥಿರತೆ, ತಂತ್ರಜ್ಞಾನ, ಕಲೆ ಮತ್ತು ಸಂಸ್ಕೃತಿ ಎಂಬ 4 ಆಧಾರಸ್ತಂಭಗಳ ಮೇಲೆ ವಿನ್ಯಾಸಗೊಳಿಸಲಾಗಿದೆ.

ವಿಮಾನ ನಿಲ್ದಾಣದ ವಕ್ತಾರರ ಜೊತೆ ಚಿಟ್ ಚಾಟ್

ಟರ್ಮಿನಲ್​ ಒಳಗೆ ಉದ್ಯಾನ : ಬೆಂಗಳೂರು ನಗರ ಗಾರ್ಡನ್ ಸಿಟಿ ಎಂದೇ ಪ್ರಸಿದ್ದಿ ಪಡೆದಿದೆ. ಗಾರ್ಡನ್ ಸಿಟಿಯ ಪ್ರೇರಣೆಯ ಫಲವಾಗಿ ಟರ್ಮಿನಲ್ -2 ನಲ್ಲಿ ಸಸ್ಯ ಸಾಮ್ರಾಜ್ಯವನ್ನು ಸೃಷ್ಟಿ ಮಾಡಲಾಗಿದೆ. 180 ಅಳಿವಿನಂಚಿನಲ್ಲಿರುವ ಸಸ್ಯಗಳು, 600-800 ವರ್ಷದ ಹಳೆಯ ಮರಗಳು, 620 ಸ್ಥಳೀಯ ಸಸಿಗಳು, 150 ಪಾಮ್‌ ಜಾತಿಯ ಸಸ್ಯಗಳು, 7,700 ಕಸಿ ಮಾಡಿದ ಮರಗಳು, 96 ಕಮಲ, 100 ಲಿಲ್ಲಿ ಜಾತಿಯ ಸಸ್ಯಗಳನ್ನು ಇಲ್ಲಿ ನೋಡಬಹುದಾಗಿದೆ. ಸಸ್ಯ ಲೋಕದಲ್ಲಿ ಪುಟ್ಟ ಜಲಪಾತ ಮತ್ತು ಹೊಂಡವನ್ನು ನಿರ್ಮಾಣ ಮಾಡಲಾಗಿದೆ.

kempegowda-international-airport-terminal-2
ಉದ್ಯಾನವನದ ಸೊಬಗು

ಬಿದಿರಿನ ಅರಮನೆ : ಟರ್ಮಿನಲ್ ಒಳಗಿನ ಛಾವಣಿ, ಮೆಟ್ಟಿಲು, ಕಂಬ ಮತ್ತು ರೇಲಿಂಗ್ ನಲ್ಲಿ ವ್ಯಾಪಕವಾಗಿ ಬಿದಿರು ಬಳಸಲಾಗಿದೆ. ಒಟ್ಟು 923 ಕಿ.ಮೀ ಉದ್ದದಷ್ಟು ಬಿದಿರು ಬಳಕೆ ಮಾಡಲಾಗಿದೆ. ಮೊದಲ ಬಾರಿಗೆ ಇಂಜಿನಿಯರ್ಸ್​ ಬಿದಿರು ಬಳಕೆ ಮಾಡಿದ್ದು ಈ ಬಿದಿರು ಅಗ್ನಿ ನಿರೋಧಕ ಮತ್ತು ದೀರ್ಘಕಾಲ ಬಾಳಿಕೆ ಬರುತ್ತದೆ.

ಉದ್ಯಾನದ ಸೊಬಗು : ಕರ್ನಾಟಕ ಕಲಾ ಸಂಸ್ಕೃತಿಯ ಜೊತೆ ತಂತ್ರಜ್ಞಾನದ ಸಮ್ಮಿಲನ ಟರ್ಮಿನಲ್ 2

ಸೂರ್ಯನ ಬೆಳಕು ನೇರವಾಗಿ ಒಳಗೆ ಬರುವಂತೆ ವಿನ್ಯಾಸ : ನೈಸರ್ಗಿಕವಾಗಿ ಬರುವ ಸೂರ್ಯನ ಬೆಳಕನ್ನು ಲೈಟಿಂಗ್ ನಂತೆ ಬಳಸಲಾಗಿದೆ. ಸೌರಫಲಕಗಳನ್ನು ಅಳವಡಿಸಲಾಗಿದ್ದು, ಸೌರ ಫಲಕಗಳು ಮತ್ತು ಸ್ಕೈ ಲೈಟಿಂಗ್‌ ನಿಂದ ಶೇಕಡಾ 24.9 ರಷ್ಟು ವಿದ್ಯುತ್ ಉಳಿತಾಯವಾಗುತ್ತಿದೆ.

ಪ್ರಯಾಣಿಕರ ಮುಖವೇ ಬಯೋ ಮೆಟ್ರಿಕ್ ಟೋಕನ್ ನಂತೆ ಕಾರ್ಯ ನಿರ್ವಹಿಸಲಿದೆ. ಪಾಸ್ ನಂತೆ ಕಾರ್ಯ ನಿರ್ವಹಿಸಲಿದೆ. ಕೇವಲ 5 ನಿಮಿಷದಲ್ಲಿ ಭದ್ರತಾ ತಪಾಸಣೆ, ಸ್ಕ್ರೀನಿಂಗ್ , ಬೋರ್ಡಿಂಗ್ ಪಾಸ್ ಸಿಗಲಿದೆ. ಇದರಿಂದ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಿ ಪ್ರಯಾಣ ಸುಖಕರವಾಗಲಿದೆ.

ಟರ್ಮಿನಲ್ 2

ಕಲೆ ಮತ್ತು ಸಂಸ್ಕೃತಿ : ಟರ್ಮಿನಲ್-2ರಲ್ಲಿ ಕರ್ನಾಟಕ ಶ್ರೀಮಂತ ಪರಂಪರೆಯನ್ನು ಅನಾವರಣ ಮಾಡಲಾಗಿದೆ. ಅನುಪಮಾ ಹೊಸ್ಕೆರೆ ಅವರ ಮರದ ತೊಗಲುಗೊಂಬೆಗಳು, ಕೃಷ್ಣರಾಜ್‌ ಚೋನಾಟ್‌ ಅವರ ಬೋರ್ಡಿಂಗ್‌ ಪಿಯರ್‌ ಕಲಾಕೃತಿ, ಬಿದ್ರಿ ಕ್ರಾಫ್ಟ್‌ ಗಾಥಾ ಮತ್ತು ಎಂ. ಎ. ರೌಫ್‌ ಅವರ ಕಲಾ ಕೃತಿಗಳು, ಚರ್ಮದ ತೊಗಲು ಗೊಂಬೆಗಳು, ಫೋಲಿ ಡಿಸೈನ್‌ ಮತ್ತು ಗುಂಡುರಾಜು ಅವರ ಕಲಾಕೃತಿ ಪ್ರಯಾಣಿಕರ ಗಮನ ಸೆಳೆಯಲಿವೆ.

ಇದನ್ನೂ ಓದಿ : ಕೆಂಪೇಗೌಡ ವಿಮಾನ ನಿಲ್ದಾಣದ ಸೊಬಗು ಹೆಚ್ಚಿಸಿದ ಹೊಸ ಟರ್ಮಿನಲ್ 2: ಮನ ತುಂಬುವ ಸುಂದರ ಫೋಟೋಗಳು

Last Updated : Nov 12, 2022, 9:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.