ಬೆಂಗಳೂರು: ಕಾವೇರಿ ವೆಬ್ಸೈಟ್ ತಿರುಚಿದ ಪ್ರಕರಣದಲ್ಲಿ ತಮ್ಮ ಪಾತ್ರವೇನು ಇಲ್ಲ. ಅದೆಲ್ಲಾ ಇಂಜಿನಿಯರ್ಸ್ಗಳದ್ದೇ ತಪ್ಪು ಎಂದು ಪ್ರಕರಣದ ಆರೋಪಿಗಳು ತನಿಖಾಧಿಕಾರಿಗಳ ಮುಂದೆ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಕರಣದ ತನಿಖೆಯನ್ನ ಸಿಸಿಬಿ ಡಿಸಿಪಿ ರವಿಯವರು ಚುರುಕುಗೊಳಿಸಿದ್ದಾರೆ. ಈಗಾಗ್ಲೇ ಪ್ರಕರಣದಲ್ಲಿ ಭಾಗಿಯಾರುವ ಸಬ್ ರಿಜಿಸ್ಟ್ರಾರ್ಗಳು ಬಂಧನ ಭೀತಿಯಲ್ಲಿದ್ದು, ಪ್ರಕರಣಕ್ಕೆ ತಡೆ ನೀಡುವಂತೆ ಹೈಕೋರ್ಟ್ಗೆ ಅರ್ಜಿ ಹಾಕಿದ್ದರು. ಆದರೆ ನ್ಯಾಯಾಲಯ ತನಿಖೆಗೆ ತಡೆ ನೀಡಲು ನಿರಾಕರಣೆ ಮಾಡಿದ ಹಿನ್ನೆಲೆ ಸಬ್ ರಿಜಿಸ್ಟ್ರಾರ್ಗಳು ನಿನ್ನೆ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದರು.
ಈ ವೇಳೆ ಸಬ್ ರಿಜಿಸ್ಟ್ರಾರ್ಗಳಿಗೆ ಸಿಸಿಬಿ ಡಿಸಿಪಿ ರವಿ ಅವರು ಡ್ರಿಲ್ ಮಾಡಿದ್ದಾರೆ. ಈ ವೇಳೆ ತನಿಖಾಧಿಕಾರಿಗಳ ಮುಂದೆ ಸಬ್ ರಿಜಿಸ್ಟ್ರಾರ್ಗಳು ಬಿಕ್ಕಿ ಬಿಕ್ಕಿ ಅತ್ತು, "ನಮ್ಮದೇನು ತಪ್ಪಿಲ್ಲ ಸರ್... ಎಲ್ಲಾ ಇಂಜಿನಿಯರ್ಸ್ಗಳು ಮಾಡಿದ್ದಾರೆ. ನಮಗೆ ಕಂಪ್ಯೂಟರ್ ಅಪರೇಟ್ ಮಾಡಕ್ಕೆ ಬರಲ್ಲ ಸರ್, ನಾವು ಹೇಗೆ ಕಾವೇರಿ ವೈಬ್ ಸೈಟ್ ಅಪರೇಟ್ ಮಾಡಲು ಸಾಧ್ಯ ಸರ್, ಎಲ್ಲಾ ಮಾಡಿದ್ದು ಇಂಜನಿಯರ್ಸ್ಗಳೇ ಸರ್" ಎಂದು ಇಂಜಿಯರ್ಸ್ಗಳ ಮೇಲೆ ಗೂಬೆ ಕೂರಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಸದ್ಯ ಸಬ್ ರಿಜಿಸ್ಟ್ರಾರ್ಗಳು ಮಾಡಿರುವ ತಪ್ಪನ್ನು ದಾಖಲೆ ಸಮೇತ ತೋರಿಸಿದ ಸಿಸಿಬಿ ಪೊಲೀಸರು ಇವತ್ತು ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಏನಿದು ಪ್ರಕರಣ?
ಕಾವೇರಿ ವೆಬ್ಸೈಟ್ನಲ್ಲಿ ನೋಂದಣಿಯಾದ ಸೈಟ್ಗಳನ್ನ ಮತ್ತೆ ಅಕ್ರಮವಾಗಿ ನೋಂದಾಯಿಸಿ ಸರ್ಕಾರಕ್ಕೆ ಬರಬೇಕಾದ ಕೋಟ್ಯಾಂತರ ತೆರಿಗೆ ತಪ್ಪಿಸಿ ಸರಕಾರಕ್ಕೆ ಮೋಸ ಮಾಡಿರುವ ಆರೋಪ ಸಬ್ ರಿಜಿಸ್ಟ್ರಾರ್ಗಳ ಮೇಲಿದೆ.