ETV Bharat / state

'ಕಾವೇರಿ ಕೂಗು ಅಭಿಯಾನ' ಹಣ ಸಂಗ್ರಹ; ಅಮಿಕಸ್ ಕ್ಯೂರಿ ಆಗಿ ವಿದ್ಯುಲ್ಲತಾ ನೇಮಕ - ವಕೀಲೆ ಬಿವಿ ವಿದ್ಯುಲ್ಲತಾ ಅವರನ್ನು ಅಮಿಕಸ್ ಕ್ಯೂರಿ

ಈಶ ಫೌಂಡೇಶನ್ ಕಾವೇರಿ ನದಿ ತಪ್ಪಲು ಪ್ರದೇಶದಲ್ಲಿ ಗಿಡಗಳನ್ನು ನೆಡಲು ಸಾರ್ವಜನಿಕರಿಂದ ಪ್ರತಿ ಸಸಿಗೆ 42 ರೂಪಾಯಿಯಂತೆ ಹಣ ಸಂಗ್ರಹಿಸುತ್ತಿದೆ. ಸಾರ್ವಜನಿಕರಿಂದ ಹೀಗೆ ಹಣ ಸಂಗ್ರಹಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿ ವಕೀಲ ಅಮರನಾಥ ಪಿಐಎಲ್ ಅರ್ಜಿ ಸಲ್ಲಿಸಿದ್ದರು.

Kaveri Shout Money Raising Case Amicus Curie oppinted vidyulatha
ಅಮಿಕಸ್ ಕ್ಯೂರಿ ಆಗಿ ವಿದ್ಯುಲ್ಲತಾ ನೇಮಕ
author img

By

Published : Nov 4, 2020, 11:06 PM IST

ಬೆಂಗಳೂರು: ಕಾವೇರಿ ಕೂಗು ಅಭಿಯಾನ ಯೋಜನೆ ಅಡಿ ಸದ್ಗುರು ಜಗ್ಗಿ ವಾಸುದೇವ್ ಅವರ ಈಶ ಫೌಂಡೇಶನ್ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವುದನ್ನು ಆಕ್ಷೇಪಿಸಿ ಸಲ್ಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲೆ ಬಿವಿ ವಿದ್ಯುಲ್ಲತಾ ಅವರನ್ನು ಅಮಿಕಸ್ ಕ್ಯೂರಿ ಆಗಿ ಹೈಕೋರ್ಟ್ ನೇಮಕ ಮಾಡಿದೆ.

ಈಶ ಫೌಂಡೇಶನ್ ಹಣ ಸಂಗ್ರಹಿಸುತ್ತಿರುವುದನ್ನು ಪ್ರಶ್ನಿಸಿ ವಕೀಲ ಎವಿ ಅಮರನಾಥನ್ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಹೈಕೋರ್ಟ್ ಹಿಂದಿನ ವಿಚಾರಣೆ ವೇಳೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿವರ್ತಿಸಿಕೊಂಡಿದೆ. ಈ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗಿಯ ಪೀಠ, ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಅಗತ್ಯ ಸಲಹೆಗಳನ್ನು ನೀಡಲು‌ ಅಮಿಕಸ್ ಕ್ಯೂರಿ ಆಗಿ ವಕೀಲೆ ಬಿವಿ ವಿದ್ಯುಲ್ಲತಾ ಅವರನ್ನು ನೇಮಿಸಿ ಆದೇಶಿಸಿತು.

ಪ್ರಕರಣದ ಹಿನ್ನೆಲೆ:

ಈಶ ಫೌಂಡೇಶನ್ ಕಾವೇರಿ ನದಿ ತಪ್ಪಲು ಪ್ರದೇಶದಲ್ಲಿ ಗಿಡಗಳನ್ನು ನೆಡಲು ಸಾರ್ವಜನಿಕರಿಂದ ಪ್ರತಿ ಸಸಿಗೆ 42 ರೂಪಾಯಿಯಂತೆ ಹಣ ಸಂಗ್ರಹಿಸುತ್ತಿದೆ. ಸಾರ್ವಜನಿಕರಿಂದ ಹೀಗೆ ಹಣ ಸಂಗ್ರಹಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿ ವಕೀಲ ಅಮರನಾಥ ಪಿಐಎಲ್ ಅರ್ಜಿ ಸಲ್ಲಿಸಿದ್ದರು. ಆದರೆ, ‌ಕಾವೇರಿ ಕೂಗು ಅಭಿಯಾನಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮ ಪ್ರಸಾರ ಮಾಡಲು ಮುಂದಾಗಿದ್ದ ಅಂತರ್​ರಾಷ್ಟ್ರೀಯ ವಾಹಿನಿಗೆ ನೋಟಿಸ್ ಜಾರಿ ಮಾಡಿದ್ದರು.

ನೋಟಿಸ್ ನಲ್ಲಿ ಕಾರ್ಯಕ್ರಮ ಪ್ರಸಾರ ಮಾಡಿದರೆ ನ್ಯಾಯಾಂಗ ನಿಂದನೆಯಾಗಲಿದೆ ಎಂದು ಎಚ್ಚರಿಸಿದ್ದರು. ಈ ನೋಟಿಸ್ ನೀಡಿದ ಕ್ರಮ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದ ಪೀಠ ಅರ್ಜಿದಾರರಿಂದ ವಿವರಣೆ ಕೇಳಿತ್ತು. ಆದರೆ ಅರ್ಜಿದಾರ ವಕೀಲರು ಸೂಕ್ತ ವಿವರಣೆ ನೀಡದ ಹಿನ್ನೆಲೆಯಲ್ಲಿ ಪ್ರಕರಣದಿಂದ ಅವರನ್ನು ಬಿಡುಗಡೆಗೊಳಿಸಿ ಸ್ವಯಂ ಪ್ರೇರಿತ ಅರ್ಜಿಯನ್ನಾಗಿ ಪರಿವರ್ತಿಸಿಕೊಂಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.