73 ನೇ ಸ್ವಾತಂತ್ರೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ದೇಶಾದ್ಯಂತ ಸಂಭ್ರಮದ ಈ ದಿನವನ್ನು ಸೆಲೆಬ್ರೇಟ್ ಮಾಡಲು ಸಿದ್ಧತೆ ಜೋರಾಗಿದೆ. ಅದೇ ರೀತಿ ಬಿಗ್ಬಾಸ್ ಖ್ಯಾತಿಯ ನಟಿ ಕಾರುಣ್ಯ ರಾಮ್ ಕೂಡ 73 ನೇ ಸ್ವಾತಂತ್ರ ದಿನವನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಲು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ.
ಸದಾ ಶೂಟಿಂಗ್ ಅಲ್ಲಿ ಬಿಝಿ ಇರ್ತಿದ್ದ ನಟಿ ಕಾರುಣ್ಯ ಕೊರೊನಾದಿಂದ ಶೂಟಿಂಗ್ ಇಲ್ಲದ ಕಾರಣ ಈ ಬಾರಿ ಸ್ವಾತಂತ್ರ ದಿನವನ್ನು ವಿಶೇಷವಾಗಿ ಆಚರಿಸುವ ಸಲುವಾಗಿ ಪ್ಲಾನ್ ಮಾಡಿಕೊಂಡು, ಇದೀಗ ಢಿಫರೆಂಟ್ ಕಾಸ್ಟ್ಯೂಮ್ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಅಲ್ಲದೇ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ಹೋರಾಟಗಾರರಿಗೆ ನಮನ ಸಲ್ಲಿಸಿದ್ದಾರೆ. ಅಲ್ಲದೇ ನಾಡಿನ ಜನತೆಗೆ ಸ್ವಾತಂತ್ರೋತ್ಸವಕ್ಕೆ ಶುಭಕೋರಿದ್ದಾರೆ.
ಇನ್ನು ಈ ಫೋಟೋ ಶೂಟ್ನ ವಿಶೇಷ ಅಂದ್ರೆ ಕಾರುಣ್ಯ ತೊಟ್ಟಿರುವ ಕಾಸ್ಟ್ಯೂಮ್. ಅದೇನಪ್ಪ ಅಂದ್ರೆ ಕಾರುಣ್ಯ ಫೋಟೋ ಶೂಟ್ಗಾಗಿ ಸ್ಪೆಷಲ್ ಕೋಟ್ ತೊಟ್ಟು ಕಂಗೊಳಿಸಿದ್ದಾರೆ. ಸ್ಯಾಂಡಲ್ ವುಡ್ನ ಸ್ಪೆಷಲ್ ಕಾಸ್ಟ್ಯೂಮ್ ಡಿಸೈನರ್ ಆದ ಲಕ್ಷ್ಮೀ ಕೃಷ್ಣ ನಮ್ಮ ನಾಡಿನ ವೀರ ಯೋಧರಿಗೆ ನಮನ ಸಲ್ಲಿಸುವ ನಿಟ್ಟಿನಲ್ಲಿ ಕರ್ನಾಟಕದ ವೀರ ಯೋಧರ ಫೋಟೋಗಳು ಇರುವ ಕೋಟ್ ಡಿಸೈನ್ ಮಾಡಿದ್ದಾರೆ.
ಇನ್ನು ಆ ಕೋಟ್ನಲ್ಲಿ ಕರ್ನಾಟಕದ ವೀರ ಯೋಧರಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಉನ್ನಿ ಕೃಷ್ಣ, ಮೇಜರ್ ಅದಿತಿ ಮೋಹನ್, ಜಿತೇಂದ್ರ ಮೋಹನ್, ಮೇಜರ್ ಶಫೀಕ್ ಗೋರಿ ಸೇರಿದಂತೆ 19 ವೀರ ಯೋಧರ ಭಾವಚಿತ್ರವನ್ನು ಆ ಕೋಟ್ ಮೇಲೆ ಪ್ರಿಂಟ್ ಮಾಡಿಸಿದ್ದಾರೆ. ಇನ್ನು ಆ ಕೋಟ್ ಮೇಲೆ ದೇಶ ಭಕ್ತಿಯ ಬರಹಗಳನ್ನು ಕಾಣಬಹುದಾಗಿದೆ.