ETV Bharat / state

NSUI ಪದಾಧಿಕಾರಿಗಳ ಪದಗ್ರಹಣ: ಬಿಜೆಪಿ ವಿರುದ್ಧ ಸಿದ್ದು ಕಿಡಿ, ವಿದ್ಯಾರ್ಥಿಗಳಿಗೆ ಡಿಕೆಶಿ ಪಕ್ಷ ಪಾಠ..! - ವಿಪಕ್ಷ ನಾಯಕ ಸಿದ್ದರಾಮಯ್ಯ

ರಾಜಧಾನಿ ಬೆಂಗಳೂರಿನಲ್ಲಿ ಇಂದು ಎನ್‌ಎಸ್‌ಯುಐ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಇಡೀ ದೇಶದ ಆಸ್ತಿಯನ್ನು ಮಾರಾಟ ಮಾಡುತ್ತಿರುವ ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ದೇಶ ನಿರ್ಮಾಣದ ಚರಿತ್ರೆಯೇ ಇಲ್ಲ. ಆದ್ದರಿಂದ ವಿದ್ಯಾರ್ಥಿಗಳು ಎಚ್ಚೆತ್ತುಕೊಂಡು ದೇಶದ ಅಭಿವೃದ್ಧಿಗೆ ಮುಂದಾಗಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

karnataka-state-student-congress-oath-program
ಎನ್‌ಎಸ್‌ಯುಐ ಪದಾಧಿಕಾರಿಗಳ ಪದಗ್ರಹಣ:
author img

By

Published : Aug 31, 2021, 9:05 PM IST

ಬೆಂಗಳೂರು: ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರೆ ಮೊದಲು ಈ ದೇಶ ಮಾರಾಟ ಆಗದಂತೆ ತಡೆಯಬೇಕು ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ರಾಜ್ಯ ವಿದ್ಯಾರ್ಥಿ ಕಾಂಗ್ರೆಸ್ (ಎನ್‌ಎಸ್‌ಯುಐ) ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರ ದೇಶವನ್ನೇ ಮಾರಾಟ ಮಾಡುತ್ತಿದೆ. ಈ ದೇಶದಲ್ಲಿ ವಿದ್ಯಾರ್ಥಿಗಳಿಗೂ ಭವಿಷ್ಯವಿದೆ. ಆದ್ದರಿಂದ ಇತಿಹಾಸವನ್ನು ಚೆನ್ನಾಗಿ ಅರಿತು ದೇಶ ಉಳಿಸಲು ಮುಂದಾಗಿ ಎಂಬ ಆತ್ಮವಿಶ್ವಾಸದ ನುಡಿಗಳನ್ನಾಡಿದರು.

ರಾಹುಲ್‌ಗಾಂಧಿ ಅವರು ವಿದ್ಯಾರ್ಥಿ ಕಾಂಗ್ರೆಸ್‌ಗೆ ಕಾನೂನು ಬದ್ದ ಚೌಕಟ್ಟು ನೀಡಿದ್ದಾರೆ. ಹೀಗಾಗಿ ಇಂದು ವಿದ್ಯಾರ್ಥಿ ಸಂಘಟನೆ ಮತ್ತು ವಿದ್ಯಾರ್ಥಿ ಚಳವಳಿ ಇಡಿ ದೇಶಕ್ಕೆ ವ್ಯಾಪಿಸಿದೆ. ಸಾಮಾಜಿಕ ಚಳವಳಿಗಳು ವಿದ್ಯಾರ್ಥಿಗಳು ಸಮಾಜವನ್ನು ಗ್ರಹಿಸಲು, ದೇಶದ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ. ಈ ದಿಕ್ಕಿನಲ್ಲಿ ವಿದ್ಯಾರ್ಥಿ ಸಮೂಹ ತಮ್ಮ ಇತಿಹಾಸ ಪ್ರಜ್ಞೆಯನ್ನು ಹೆಚ್ಚಿಸಿಕೊಂಡು ದೇಶದ ಪ್ರಜಾಪ್ರಭುತ್ವದ ಅಡಿಪಾಯವನ್ನು ಗಟ್ಟಿಗೊಳಿಸಬೇಕು ಎಂದರು.

ಇಡೀ ದೇಶದ ಆಸ್ತಿಯನ್ನು ಮಾರಾಟ ಮಾಡುತ್ತಿರುವ ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ದೇಶ ನಿರ್ಮಾಣದ ಚರಿತ್ರೆಯೇ ಇಲ್ಲ. ಕಳೆದ 75 ವರ್ಷಗಳಿಂದ ಜವಾಹರಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ, ಪಿ.ವಿ.ನರಸಿಂಹರಾವ್, ರಾಜೀವ್‌ಗಾಂಧಿ, ಮನಮೋಹನ್‌ಸಿಂಗ್ ಅವಧಿಯಲ್ಲಿ ದೇಶದ ಜನ ನಿರ್ಮಿಸಿದ ದೇಶದ ಆಸ್ತಿಗಳನ್ನು ಬಿಜೆಪಿ ಮುಲಾಜಿಲ್ಲದೇ ಮಾರಾಟ ಮಾಡುತ್ತಿದೆ ಎಂದು ಗುಡುಗಿದರು.

ಸುಳ್ಳುಗಳ ಮೂಲಕ ಬಿಜೆಪಿ ಯುವ ಜನರ ಹಾದಿ ತಪ್ಪಿಸುತ್ತಿದೆ: ಹಿಂದೂ - ಮುಸ್ಲಿಂ, ಪಾಕಿಸ್ತಾನ - ಚೀನಾ ವಿಚಾರಗಳಲ್ಲಿ ನಿಮ್ಮನ್ನು ಕಟ್ಟಿಹಾಕಿ ಬಿಜೆಪಿಯವರು ನಿಮ್ಮ ಭವಿಷ್ಯವನ್ನೂ ಮಾರಾಟ ಮಾಡುತ್ತಿದ್ದಾರೆ. ಪ್ರತೀ ದಿನ ನಿರಂತರ ಸುಳ್ಳುಗಳ ಮೂಲಕ ವಿದ್ಯಾರ್ಥಿ ಯುವಜನರ ಹಾದಿ ತಪ್ಪಿಸುತ್ತಿದ್ದಾರೆ. ಆದ್ದರಿಂದ ನೀವು ಹಾದಿ ತಪ್ಪಬಾರದು. ನಿಮಗೆ ಸತ್ಯ ಗೊತ್ತಾಗಬೇಕು ಎಂದರೆ ಶಿಕ್ಷಿತರಾಗಬೇಕು ಎಂದು ಹೇಳಿದರು.

ಬಿಜೆಪಿ ಸಂವಿಧಾನ ವಿರೋಧಿ ನಿಲುವು: ಡಾ. ಬಿ. ಆರ್​. ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ್ದಾರೆ. ಆದರೆ, ಕಳೆದ 75 ವರ್ಷಗಳಲ್ಲಿ ದೇಶದಲ್ಲಿ ನಿರ್ಮಾಣ ಆಗಿರುವ ಆಸ್ತಿಗಳನ್ನು ಮಾರಾಟ ಮಾಡಲು ಅನುಕೂಲ ಆಗುವಂತೆ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಸಂವಿಧಾನ ವಿರೋಧಿ ನಿಲುವುಗಳನ್ನು ತೆಗೆದುಕೊಳ್ಳುತ್ತಿದೆ. ರಾಜ್ಯಗಳ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ. ಶಿಕ್ಷಣ ಮತ್ತು ಕೃಷಿ ಸಂವಿಧಾನದ ಸಮವರ್ತಿ ಮತ್ತು ರಾಜ್ಯ ಪಟ್ಟಿಯಲ್ಲಿ ಬರುತ್ತವೆ ಎಂದರು.

ಒಂದು ಸಾವಿರ ಸದಸ್ಯತ್ವ ಮಾಡಿಸಲಿಲ್ಲ ಅಂದ್ರೆ ನೀವು ನಾಯಕರಾಗಲ್ಲ : ಡಿಕೆಶಿ

ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​, ಒಬ್ಬ ನಾಯಕ 1 ಸಾವಿರ ಸದಸ್ಯತ್ವ ಮಾಡಿಸಲಿಲ್ಲ ಎಂದರೆ ನೀವು ನಾಯಕರಾಗಲು ಸಾಧ್ಯವಿಲ್ಲ. ಒಬ್ಬೊಬ್ಬರು ಒಂದೊಂದು ಕಾಲೇಜು ಉಸ್ತುವಾರಿ ವಹಿಸಿಕೊಳ್ಳಲಿ. ಎನ್​ಎಸ್​ಯುಐ ನಮ್ಮ ಬೇರು. ಮುಂದೆ ಫಲ ಅನುಭವಿಸಬೇಕು ಎಂದರೆ ನಮ್ಮ ಬೇರು ಗಟ್ಟಿಗೊಳಿಸಬೇಕು.

ನೀವು ಮೊದಲು ಕನಸು ಕಾಣಬೇಕು, ಆ ಕನಸು ಇಷ್ಟಪಡಬೇಕು. ಅದನ್ನು ಸಾಕಾರಗೊಳಿಸಲು ನಿರ್ಧರಿಸಬೇಕು. ಜತೆಗೆ ಶಿಸ್ತು ಬೆಳೆಸಿಕೊಳ್ಳಬೇಕು. ನೀವು ಸಾವಿರ ಸದಸ್ಯತ್ವ ಮಾಡಿಕೊಂಡು ಬನ್ನಿ, ನಿಮ್ಮನ್ನು ಆಹ್ವಾನ ಕೊಟ್ಟು ನಾನೇ ಕರೆಯುತ್ತೇನೆ ಎಂದರು.

ಇಂದಿರಾಗಾಂಧಿ, ರಾಜೀವ್​ ಗಾಂಧಿ ಇಲ್ಲದೇ ಬ್ಯಾನರ್ ಇರಬಾರದು: ಎನ್​ಎಸ್​ಯುಐ ಆರಂಭಿಸಿದ್ದು, ಇಂದಿರಾಗಾಂಧಿ ಅವರು, ಯುವಕರಿಗೆ ಆದ್ಯತೆ ಕೊಟ್ಟಿದ್ದು ರಾಜೀವ್ ಗಾಂಧಿ. ಇವರಿಬ್ಬರು ಇಲ್ಲದೇ ಎನ್​ಎಸ್​ಯುಐ ಬ್ಯಾನರ್ ಇರಬಾರದು. ಪಕ್ಷದ ಪೋಸ್ಟರ್​ಗಳಲ್ಲಿ ಯಾರ ಫೋಟೋ ಇರಬೇಕು, ಇರಬಾರದು ಎಂಬ ನಿಯಮ ಸಿದ್ಧಪಡಿಸುತ್ತಿದ್ದೇವೆ. ನಿಮ್ಮ ಹೋರಾಟದ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟವಾಗಿ ಬರಬೇಕು. ಅಂತಹ ಹೋರಾಟಗಳನ್ನು ರೂಪಿಸಬೇಕು ಎಂದು ಹೇಳಿದರು.

ಪದವಿ ವಾಪಸ್​ ಅಭಿಯಾನ: ಕೇಂದ್ರ ಸರ್ಕಾರ 2 ಕೋಟಿ ಕೆಲಸ ಕೊಡ್ತೀವಿ ಅಂತು. ಯಾರೆಲ್ಲಾ ಕೆಲಸ ಕಳೆದುಕೊಂಡಿದ್ದಾರೋ ಅವರ ಪದವಿಯನ್ನು ವಾಪಸ್ ತೆಗೆದುಕೊಳ್ಳಿ ಎಂದು ಸರಕಾರವನ್ನು ಆಗ್ರಹಿಸಿ ಹೋರಾಟ ಆರಂಭಿಸಿದ್ದಾರೆ. ನಾನು ಈ ಹೋರಾಟ ಬೆಂಬಲಿಸುತ್ತೇನೆ ಎಂದರು. ನೀವು ಕೆಲಸ ಕಳೆದು ಕೊಂಡವರ ಪದವಿ ಪ್ರಮಾಣಪತ್ರ 3 ಪ್ರತಿ ಮಾಡಿಸಿ, ಪ್ರಧಾನಿಗಳಿಗೆ, ಮುಖ್ಯಮಂತ್ರಿಗಳಿಗೆ ಹಾಗೂ ನಮಗೆ ಕಳುಹಿಸಿಕೊಡಿ ಎಂದು ಹೇಳಿದರು.

ದೊಡ್ಡ ದೊಡ್ಡ ವ್ಯಕ್ತಿಗಳು ಅತ್ಯಾಚಾರ ಮಾಡುತ್ತಿದ್ದಾರೆ: ಬಿಜೆಪಿ ಸರ್ಕಾರ ಬಂದ ನಂತರ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ದೊಡ್ಡ, ದೊಡ್ಡ ವ್ಯಕ್ತಿಗಳು ಅತ್ಯಾಚಾರ ಮಾಡುತ್ತಿದ್ದಾರೆ. ಮೈಸೂರು ವಿವಿಯ ಕುಲಸಚಿವರು ಹೆಣ್ಣು ಮಕ್ಕಳು ಸಂಜೆ 6.30ರ ನಂತರ ವಿವಿ ಆವರಣದಲ್ಲಿ ಓಡಾಡಬಾರದು ಅಂತಾ ಆದೇಶ ಹೊರಡಿಸಿದ್ದಾರೆ.

ಅವರಿಗೆ ಹೊಸ ಡಾಕ್ಟರೇಟ್ ಕೊಡಬೇಕು. ಇದರ ವಿರುದ್ಧ ನೀವು ಹೋರಾಟ ಮಾಡಬೇಕು. ನೀವು ವಿದ್ಯಾರ್ಥಿಗಳ ಸಮಸ್ಯೆಯ ಧ್ವನಿ ಆಗಿ. ಈ ದೇಶದಲ್ಲಿ ಬದಲಾವಣೆ ಆಗಬೇಕಾದರೆ ಅದು ವಿದ್ಯಾರ್ಥಿಗಳು, ಯುವಕರು ಹಾಗೂ ಮಹಿಳೆಯರಿಂದ ಸಾಧ್ಯ ಎಂದರು.

ಎಂದಿಗೂ ಪಕ್ಷವನ್ನು ಬದಲಿಸಬೇಡಿ: ಪಕ್ಷದ ಪ್ರಣಾಳಿಕೆಯಲ್ಲಿ ವಿದ್ಯಾರ್ಥಿ ಮತ್ತು ಪಕ್ಷದ ಧ್ವನಿ ಇರಲಿದೆ. ರಾಹುಲ್ ಗಾಂಧಿ ಅವರು ರಾಷ್ಟ್ರ ಧ್ವಜ ನನ್ನ ಧರ್ಮ ಎಂದರು. ಈ ರೀತಿ ಬಿಜೆಪಿಯ ಯಾರಾದರೂ ಒಬ್ಬ ನಾಯಕ ಹೇಳಿದ್ದಾನಾ? ಇದು ಕಾಂಗ್ರೆಸ್ ಇತಿಹಾಸ ಹಾಗೂ ಸಂಸ್ಕೃತಿ. ಧಾರವಾಡದಲ್ಲಿ ರಾಷ್ಟ್ರ ಧ್ವಜ ತಯಾರು ಮಾಡುತ್ತಾರೆ.

ಅಂತಹ ತ್ರಿವರ್ಣ ಧ್ವಜ ನಿಮ್ಮ ಮೈಮೇಲಿದೆ. ಇದನ್ನು ಬಿಟ್ಟುಕೊಡಬೇಡಿ, ಎಂದಿಗೂ ಪಕ್ಷವನ್ನು ಬದಲಿಸದೆ, ಈ ದೇಶ, ರಾಜ್ಯದ ಅಭಿವೃದ್ದಿಗಾಗಿ ಗಟ್ಟಿಯಾಗಿ ಎಂದು ವಿವರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.