ಬೆಂಗಳೂರು: ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಶಿಕ್ಷಕರಿಂದ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಯುತ್ತಿದೆ. 141 ದಿನಗಳ ಹೋರಾಟ ಸುಖಾಂತ್ಯ ಕಾಣದೇ ಮುಂದುವರೆದಿದೆ. ಇಂದು ಸಂಜೆ ಹೊಸ ಪಿಂಚಣಿ ಸೇವೆ ಜಾರಿಗೆ ಆಗ್ರಹಿಸಿ ನಡೆದ ಹೋರಾಟದಲ್ಲಿ ಭಾಗಿಯಾಗಿದ್ದ ಮೂರೂವರೆ ಸಾವಿರ ಶಿಕ್ಷಕರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದರು. ಪೊಲೀಸರು 8 ರಿಂದ 10 ಬಸ್ಗಳಲ್ಲಿ ಅವರನ್ನು ವಶಕ್ಕೆ ಪಡೆದು ರಾತ್ರಿ ಬಿಡುಗಡೆಗೊಳಿಸಿದ್ದಾರೆ.
ಇದೇ ವಿಚಾರವಾಗಿ ನಿನ್ನೆ ವಿಷ ಸೇವಿಸಿದ್ದ ಬಾಗಲಕೋಟೆ ಬೀಳಗಿ ಮೂಲದ ಸಿದ್ದಯ್ಯ (66) ಸಾವಿಗೀಡಾಗಿದ್ದಾರೆ. ನಗರದ ವಿಕ್ಟೋರಿಯಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ಶಿಕ್ಷಕ ವೆಂಕಟರಾಜು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅರೆಬೆತ್ತಲೆ ಪ್ರತಿಭಟನೆ ಅಹೋರಾತ್ರಿ ಹೋರಾಟ ಅಮರಣಾಂತ ಉಪವಾಸ ಸತ್ಯಾಗ್ರಹ ಹೀಗೆ ಹಲವು ರೀತಿಯ ಹೋರಾಟಗಳನ್ನು ಸತ್ಯಾಗ್ರಹದಲ್ಲಿ ಕೈಗೊಳ್ಳಲಾಗಿದೆ. ಪಿಂಚಣಿ ವಂಚಿತ ನೌಕರ ಬೇಡಿಕೆಯನ್ನು ಈಡೇರಿಸದೇ ಸರ್ಕಾರ ರಾಕ್ಷಸ ವರ್ತನೆ ತೋರಿದೆ ಎಂದು ಪಿಂಚಣಿ ವಂಚಿತ ನೌಕರರು ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : 'ಆದರ್ಶ, ಮೌಲ್ಯಗಳು ಕುಸಿಯುತ್ತಿವೆ..': ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭಾವುಕ