ಬೆಂಗಳೂರು: ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಕ್ಷಯಮುಕ್ತ ರಾಜ್ಯ ಆಗಬೇಕಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ಇಂದು ವಿಶ್ವ ಕ್ಷಯರೋಗ ದಿನಾಚರಣೆ ಹಿನ್ನೆಲೆ, ಆರೋಗ್ಯ ಇಲಾಖೆಯಿಂದ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮ ಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆರೋಗ್ಯ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಡಾ.ಕೆ. ಸುಧಾಕರ್, ಆರೋಗ್ಯ ಇಲಾಖೆ ಆಯುಕ್ತ ತ್ರಿಲೋಕ ಚಂದ್ರ ಹಾಗೂ ತಾಂತ್ರಿಕ ಸಲಹೆ ಸಮಿತಿ ಅಧ್ಯಕ್ಷ ಸುದರ್ಶನ್ ಸೇರಿ ಹಲವರು ಭಾಗಿಯಾಗಿದ್ದರು.
ಕ್ಷಯರೋಗ ನಿರ್ಮೂಲನಾ ದಿನ:
ಉದ್ಘಾಟನೆ ಬಳಿಕ ಮಾತನಾಡಿದ ಆರೋಗ್ಯ ಸಚಿವರು, ಇಡೀ ವಿಶ್ವದಲ್ಲಿ ಕ್ಷಯರೋಗ ನಿರ್ಮೂಲನ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿ 22 ಸೆಕೆಂಡ್ಗೆ ಓರ್ವರು ಕ್ಷಯ ರೋಗದಿಂದ ಸಾವನ್ನಪ್ಪುತ್ತಿದ್ದಾರೆ. ಒಂದು ತಿಂಗಳಲ್ಲಿ 1,20,000 ಜನರು ಕ್ಷಯ ರೋಗಕ್ಕೆ ಬಲಿ ಆಗುತ್ತಿದ್ದಾರೆ.
ಇದನ್ನೂ ಓದಿ: ಕ್ಷಯರೋಗ ನಿಯಂತ್ರಣದಲ್ಲಿ ದೇಶಕ್ಕೆ ಮಾದರಿಯಾದ ಕೊಪ್ಪಳ ಜಿಲ್ಲೆ
ನಮ್ಮ ರಾಜ್ಯದಲ್ಲಿ ಎಲ್ಲೆಲ್ಲಿ ಟಿಬಿ ಇದೆ ಆ ಪ್ರದೇಶವನ್ನು ಟಿಬಿ ಮುಕ್ತ ಗ್ರಾಮವನ್ನಾಗಿ ಮಾಡಬೇಕಿದೆ. ಗ್ರಾಮದಿಂದ ಹಿಡಿದು ನಗರ ಪ್ರದೇಶದವರೆಗೆ ಕ್ಷಯ ಮುಕ್ತವಾಗಬೇಕಿದೆ. ಮುಖ್ಯಮಂತ್ರಿಗಳು ಸಹ ಆರೋಗ್ಯ ಕರ್ನಾಟಕ ಮಾಡಬೇಕು ಎಂದಿದ್ದಾರೆ. ಪ್ರಧಾನಮಂತ್ರಿಗಳು ಕೂಡಾ ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿದ್ದಾರೆ ಎಂದು ತಿಳಿಸಿದರು.
ಕೋವಿಡ್ ಲಸಿಕೆ ಕೊರತೆಯಿಲ್ಲ:
ಕೊರೊನಾ ಎರಡನೇ ಅಲೆಯು ದಿನೇ-ದಿನೆ ಹೆಚ್ಚಾಗುತ್ತಿದ್ದು, ಎಲ್ಲರಿಗೂ ಇದರ ಹೊಣೆಗಾರಿಕೆ ಇದೆ. ನಿನ್ನೆ ಕೂಡಾ ಕೇಂದ್ರ ಸರ್ಕಾರ ಆದೇಶ ಮಾಡಿದ್ದು, 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಕೊಡಬೇಕು ಅಂತ ತಿಳಿಸಿದ್ದು, ಇದು ಸ್ವಾಗತಾರ್ಹ. ಎಲ್ಲರೂ ಇದಕ್ಕೆ ಸಹಕರಿಸಬೇಕು. ಇನ್ನು ಲಸಿಕೆ ಕೊರತೆಯಿಲ್ಲ, ಈ ಸಂಬಂಧ ಕೇಂದ್ರದ ಬಳಿ ಮಾತನಾಡಿದ್ದೇನೆ. ಈ ವಾರದಲ್ಲಿ 12 ಲಕ್ಷ ಡೋಸ್ ವ್ಯಾಕ್ಸಿನ್ ಕಳಿಸುವುದಾಗಿ ಹೇಳಿದ್ದಾರೆ. ಅದರಲ್ಲಿ 4 ಲಕ್ಷ ಡೋಸ್‌ಗಳನ್ನು ಇಂದೇ ವಿಮಾನದಲ್ಲಿ ಕಳಿಸಿ ಕೊಡುತ್ತಿದ್ದಾರೆ ಎಂದು ತಿಳಿಸಿದರು.