ETV Bharat / state

ರಾಜ್ಯದಲ್ಲಿ ಕೊರೊನಾ ಸ್ಫೋಟ; ಒಂದೇ ದಿನ 918 ಹೊಸ ಕೇಸ್​​ ಪತ್ತೆ, 11 ಮಂದಿ ಬಲಿ - ಕೋವಿಡ್​-19

ಮಹಾಮಾರಿ ಕೊರೊನಾ ವೈರಸ್​ ಅಬ್ಬರ ರಾಜ್ಯದಲ್ಲಿ ಜೋರಾಗಿದೆ. ಇಂದು ಒಂದೇ ದಿನ 918 ಸೋಂಕಿತ ಪ್ರಕರಣ ದಾಖಲಾಗಿದ್ದು, ಮತ್ತಷ್ಟು ಆತಂಕ ಮೂಡಿಸಿದೆ.

COVID19
COVID19
author img

By

Published : Jun 27, 2020, 9:31 PM IST

ಬೆಂಗಳೂರು: ರಾಜ್ಯದಲ್ಲಿಂದು ಮಹಾಮಾರಿ ಕೊರೊನಾ ಸ್ಪೋಟಗೊಂಡಿದ್ದು, ಒಂದೇ ದಿನ ಬರೋಬ್ಬರಿ 918 ಹೊಸ ಸೋಂಕಿತ ಪ್ರಕರಣ ದಾಖಲಾಗಿದ್ದು, 11 ಜನರು ಸಾವನ್ನಪ್ಪಿದ್ದಾರೆ.

ಇಲ್ಲಿಯವರೆಗೆ ರಾಜ್ಯದಲ್ಲಿ ದಾಖಲಾಗಿರುವ ಅತಿ ಗರಿಷ್ಠ ಸಂಖ್ಯೆ ಇದಾಗಿದೆ. ಬೆಂಗಳೂರಿನಲ್ಲೇ ಬರೋಬ್ಬರಿ 596 ಹೊಸ ಪ್ರಕರಣ ಸಿಕ್ಕಿದ್ದು, ಮೂರು ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ನಗರದಲ್ಲಿ 2,531 ಪ್ರಕರಣ ದಾಖಲಾಗಿದ್ದು, 84 ಜನರು ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಇದೀಗ ಒಟ್ಟು 11,923 ಕೋವಿಡ್​ ಪ್ರಕರಣಗಳಿದ್ದು, ಇದರಲ್ಲಿ 4,441 ಆ್ಯಕ್ಟಿವ್​ ಕೇಸ್​ಗಳಿವೆ. ಉಳಿದಂತೆ 7,287 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ. ರಾಜ್ಯದಲ್ಲಿ ಇಂದು 11 ಜನ ಸಾವನ್ನಪ್ಪಿರುವುದು ಹಿಡಿದು ಒಟ್ಟು 191 ಜನರು ಮೃತಪಟ್ಟಿದ್ದು, 197 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು ಬೀದರ್ ಹಾಗೂ ಬೆಂಗಳೂರು ನಗರದಲ್ಲಿ ತಲಾ ಮೂವರು, ಕಲಬುರಗಿಯಲ್ಲಿ ಇಬ್ಬರು, ಧಾರವಾಡ, ಗದಗ ಹಾಗೂ ಬಳ್ಳಾರಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ

ಉಳಿದಂತೆ ದಕ್ಷಿಣ ಕನ್ನಡದಲ್ಲಿ 49 ಕೇಸ್​ ಕಾಣಿಸಿಕೊಂಡಿದ್ದು, ಕಲಬುರಗಿಯಲ್ಲಿ 33, ಬಳ್ಳಾರಿ 24, ಗದಗ 24, ಧಾರವಾಡ 19, ಬೀದರ್​ 17, ಉಡುಪಿ 14, ಹಾಸನ, ಕೋಲಾರ ತಲಾ 14, ಯಾದಗಿರಿ, ಶಿವಮೊಗ್ಗ, ಚಾಮರಾಜನಗರ ಹಾಗೂ ತುಮಕೂರುನಲ್ಲಿ ತಲಾ 13, ಮಂಡ್ಯ, ಮೈಸೂರು ತಲಾ 12, ಕೊಡಗು ಜಿಲ್ಲೆಯಲ್ಲಿ 9, ರಾಯಚೂರು, ದಾವಣಗೆರೆ 6 ಕೇಸ್​ ದಾಖಲಾಗಿವೆ.

ರಾಜ್ಯದಲ್ಲಿ ಈವರೆಗೆ 5,81,635 ಕೊರೊನಾ ಮಾದರಿ ಪರೀಕ್ಷೆ ಮಾಡಿದ್ದು, ಇದರಲ್ಲಿ 5,54,095 ನೆಗೆಟಿವ್ ಬಂದಿದೆ. ಪ್ರಾಥಮಿಕ ಸಂಪರ್ಕದಲ್ಲಿ 22,534 ಮಂದಿ ಹಾಗೂ18,489 ದ್ವಿತೀಯ ಸಂಪರ್ಕದಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.