ETV Bharat / state

ರಾಜ್ಯದಲ್ಲಿ ಜನಸಂಖ್ಯೆ ನಿಯಂತ್ರಣ ತಂತಾನೇ ಜಾರಿಯಲ್ಲಿದೆ: ವಿಶೇಷ ಕಾರ್ಯಕ್ರಮವೇ ಅನಗತ್ಯ? - ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಪ್ರಮಾಣ

ದೇಶದಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿದೆ. ದೇಶದ ಉತ್ತರ ಭಾಗದ ರಾಜ್ಯಗಳ ಜನಸಂಖ್ಯೆ ಹೆಚ್ಚಳಕ್ಕೆ ಹೋಲಿಸಿದರೆ ಕರ್ನಾಟಕದ ಜನಸಂಖ್ಯೆ ಹೆಚ್ಚಳ ಪ್ರಮಾಣ ತೀರಾ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 1.7ರಷ್ಟು ಕುಸಿದಿರುವ ಟಿಎಫ್​​​​ಆರ್ ದರವನ್ನು 2.1ಕ್ಕೆ ಏರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ.

ಜನಸಂಖ್ಯೆ
population
author img

By

Published : Jul 11, 2021, 3:38 PM IST

ಬೆಂಗಳೂರು: ದೇಶದಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿದ್ದು, ದೇಶದ ಉತ್ತರ ಭಾಗದ ರಾಜ್ಯಗಳ ಜನಸಂಖ್ಯೆ ಹೆಚ್ಚಳಕ್ಕೆ ಹೋಲಿಸಿದರೆ ಕರ್ನಾಟಕದ ಜನಸಂಖ್ಯೆ ಹೆಚ್ಚಳ ಪ್ರಮಾಣ ತೀರಾ ಕಡಿಮೆ ಇದೆ. ಅಂಕಿ-ಅಂಶಗಳ ಪ್ರಕಾರ ದೇಶದ ಜನಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ರಾಷ್ಟ್ರೀಯ ಜನಸಂಖ್ಯಾ ನೀತಿ 2006 ಸಮುದಾಯದ ಒಟ್ಟಾರೆ ಫಲವಂತಿಕೆಯ ದರಕ್ಕಿಂತ ಕರ್ನಾಟಕದ ದರ ಕಡಿಮೆ ಇದೆ ಎನ್ನಲಾಗುತ್ತಿದೆ.

ರಾಷ್ಟ್ರೀಯ ಜನಸಂಖ್ಯಾ ನೀತಿ ಪ್ರಕಾರ ಫಲವಂತಿಕೆ ದರ 2.1 ರಷ್ಟು (ಟೋಟಲ್ ಫರ್ಟಿಲಿಟಿ ರೇಟ್- ಟಿಎಫ್​​​​ಆರ್) ಇರಬೇಕು. ಆದರೆ ಕರ್ನಾಟಕದಲ್ಲಿ ಈ ಪ್ರಮಾಣ 1.7 ರಷ್ಟು ಕುಸಿದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 1.7 ಕುಸಿದಿರುವ ಟಿಎಫ್​​​​ಆರ್ ದರವನ್ನು 2.1ಕ್ಕೆ ಏರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜನಸಂಖ್ಯೆ ಇಳಿಸುವ ಬದಲು ಹೆಚ್ಚಳ ಮಾಡಿ ಎಂಬ ಕೂಗು ಕೇಳಿ ಬರುತ್ತಿದೆ.

ಮೂಲ ನಿವಾಸಿಗಳ ಸಂಖ್ಯೆಯಲ್ಲಿ ಇಳಿಕೆ:

ಉದ್ಯೋಗ ಅರಸಿ ಕರ್ನಾಟಕಕ್ಕೆ ವಲಸೆ ಬರುತ್ತಿರುವವರ ಜನಸಂಖ್ಯೆ ಪ್ರಮಾಣ ಹೆಚ್ಚಳವಾದಂತೆ ಕಾಣುತ್ತಿದೆ. ಕನ್ನಡಿಗರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಸದ್ಯ ರಾಜ್ಯ ಸರ್ಕಾರ ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಹೊಂದಿದ್ದರೂ ಸಹ ಅದರ ಜನಪ್ರಿಯತೆಗೆ ಕಾರ್ಯ ನಿರ್ವಹಿಸುತ್ತಿಲ್ಲ. ನಿರ್ವಹಿಸಬಾರದು ಎಂಬ ಒತ್ತಡವನ್ನು ಸಹ ಕನ್ನಡ ಪರ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಹೇರುತ್ತಿದ್ದಾರೆ. 2000 ಉದ್ದೇಶಿತ ಸಮುದಾಯದ ಒಟ್ಟಾರೆ ಟಿಎಫ್​​​​ಆರ್ ದರ 2.1 ಇದ್ದರೆ, ಕರ್ನಾಟಕದಲ್ಲಿ ಈ ದರ 2017 ರಲ್ಲೇ 1.7 ಕುಸಿದಿದೆ. ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ತನ್ನ ಜನಗಣತಿಯಲ್ಲಿ ಜನನ ಪ್ರಮಾಣ ಕಡಿಮೆಯಾಗುತ್ತಿರುವ ಅಂಶವನ್ನು ಪರಿಗಣಿಸಿ ರಾಷ್ಟ್ರದ ನಾಗರಿಕರು ಮೂರನೇ ಮಕ್ಕಳನ್ನು ಪಡೆಯಬಹುದು ಎಂಬ ಆದೇಶ ಮಾಡಿದೆ. ಜನಸಂಖ್ಯೆಯನ್ನು ಒಂದು ಸಂಪನ್ಮೂಲ ಎಂದು ಪರಿಗಣಿಸುತ್ತಿರುವ ಹಲವು ಅಭಿವೃದ್ಧಿ ರಾಷ್ಟ್ರಗಳ ನಿಲುವು ಹಾಗೂ ನಿರ್ಧಾರಗಳನ್ನು ಗಮನಿಸಿದರೆ ರಾಜ್ಯದಲ್ಲಿ ಜನನ ಪ್ರಮಾಣ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾದ ಯುಪಿ, ಹರಿಯಾಣ:

ಈ ಮಧ್ಯೆ ಉತ್ತರ ಪ್ರದೇಶ ಸರ್ಕಾರ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗಿದ್ದು, ಎರಡು ಮಕ್ಕಳಿಗಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವ ಜನರಿಗೆ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ನೀಡದಿರಲು ಹಾಗೂ ಎರಡು ಮಕ್ಕಳ ನೀತಿಯನ್ನು ಅನುಸರಿಸುವವರಿಗೆ ಪ್ರೋತ್ಸಾಹಕ ಯೋಜನೆ ಪ್ರಸ್ತಾಪಿಸಲು ತೀರ್ಮಾನಿಸಿದೆ. ಹರಿಯಾಣ ರಾಜ್ಯ ಮೂರು ಮಕ್ಕಳನ್ನು ಹೊಂದಿರುವವರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಹ ಸ್ಪರ್ಧಿಸಲು ತಡೆ ಹಾಕಿದೆ. ರಾಜ್ಯದ ಇತಿಹಾಸವನ್ನು ಗಮನಿಸಿದರೆ ವಾರ್ಷಿಕವಾಗಿ ರಾಜ್ಯದಲ್ಲಿ 8.4 ಲಕ್ಷ ಜನಸಂಖ್ಯೆ ಹೆಚ್ಚುವರಿಯಾಗಿ ಸೇರ್ಪಡೆಯಾಗುತ್ತಿದೆ.

ಜನಗಣತಿ ಪ್ರಕಾರ..

1951ರಲ್ಲಿ ಕರ್ನಾಟಕದ ಜನಸಂಖ್ಯೆ 1.66 ಕೋಟಿ ಇತ್ತು. 2011ರ ಜನಗಣತಿ ಪ್ರಕಾರ ಜನಸಂಖ್ಯೆ 6.11 ಕೋಟಿಗೆ ಏರಿಕೆಯಾಗಿದೆ. ಇದರ ಪ್ರಕಾರ ವಾರ್ಷಿಕವಾಗಿ 8.4 ಲಕ್ಷದಷ್ಟು ಜನಸಂಖ್ಯೆ ಹೆಚ್ಚಳ ಆಗುತ್ತಿದೆ ಎಂದು ಅಂದಾಜಿಸಲಾಗಿದೆ. ಇದೇ ಪ್ರಕಾರ ಜನಸಂಖ್ಯೆ ಹೆಚ್ಚಳವಾದರೆ ಮುಂದಿನ 45 ವರ್ಷದಲ್ಲಿ ರಾಜ್ಯದ ಜನಸಂಖ್ಯೆ 12.25 ಕೋಟಿ ಆಗುವ ಸಾಧ್ಯತೆ ಇದೆ. ಬಡತನ ಅಜ್ಞಾನ ಹಾಗೂ ಮಾಹಿತಿ ಕೊರತೆ ಜೊತೆಗೆ ಮೂಢನಂಬಿಕೆಗಳು ಬಾಲ್ಯವಿವಾಹ ಕಡಿಮೆ ಸಾಕ್ಷರತೆ ಪ್ರಮಾಣ ಕಾರಣಗಳಿಂದಾಗಿ ರಾಜ್ಯದ ಕೆಲ ಭಾಗಗಳಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ಪ್ರಜ್ಞಾವಂತರ ಸಂಖ್ಯೆ ಹೆಚ್ಚಳ ಆಗುತ್ತಿದೆ ಜೊತೆಗೆ ಸಂತಾನ ಭಾಗ್ಯದಿಂದ ವಂಚಿತರಾಗುತ್ತಿರುವ ವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಬದಲಾದ ಆಹಾರ ಕ್ರಮ ಹಾಗೂ ಜೀವನಶೈಲಿ ಇದಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.

ಪ್ರತಿ ದಂಪತಿಗೆ ಎರಡು ಮಕ್ಕಳಿಲ್ಲ:

ರಾಜ್ಯದ ಜನಸಂಖ್ಯೆ ನಿಯಂತ್ರಣವಾಗಿದ್ದು, ಪ್ರತಿ ದಂಪತಿಗೆ ಎರಡು ಮಕ್ಕಳು ಸಹ ಸರಾಸರಿ ಸಿಗುತ್ತಿಲ್ಲ. ಜಪಾನ್, ಸ್ವೀಡನ್ ಹಾಗೂ ದಕ್ಷಿಣ ಕೋರಿಯಾದ ರಾಷ್ಟ್ರಗಳು ಜನಸಂಖ್ಯೆ ಕೊರತೆಯನ್ನು ಎದುರಿಸುತ್ತಿದ್ದು, ಸರ್ಕಾರದ ಯೋಜನೆಗಳನ್ನು ಜಾರಿಗೆ ತಂದು ಅದರ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರವೇ ಹೊರುತ್ತಿದೆ. ಇಂತಹ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೆ ತರುವ ಅನಿವಾರ್ಯ ಇಲ್ಲವಾದರೂ ಜನಸಂಖ್ಯೆ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ಕೊಡುವ ಪರಿಸ್ಥಿತಿಯೂ ಇಲ್ಲ ಎಂಬ ಮಾತುಗಳನ್ನು ಕೆಲವರು ಆಡುತ್ತಿದ್ದಾರೆ.

ಜನಸಂಖ್ಯೆ ನಿಯಂತ್ರಣಕ್ಕೆ ದೇಶದಲ್ಲಿ ಹೆಚ್ಚಿನ ಹಣ ವ್ಯಯ:

ಕಳೆದ ಏಳು ವರ್ಷಗಳಿಂದ ದೇಶದಲ್ಲಿ ಅಧಿಕಾರದಲ್ಲಿರುವ ಎನ್​ಡಿಎ ಸರ್ಕಾರ ಕೇವಲ ಐದು ವರ್ಷದಲ್ಲಿ ಜನಸಂಖ್ಯೆ ನಿಯಂತ್ರಣ ಮಾಡುವುದಕ್ಕೆ 150ಕ್ಕೂ ಹೆಚ್ಚು ಮೊತ್ತದ ಹಣವನ್ನು ವೆಚ್ಚ ಮಾಡಿದೆ. 2013-14ರಲ್ಲಿ 29 ಕೋಟಿ ರೂ., 2014-15ರಲ್ಲಿ 27 ಕೋಟಿ ರೂ., 2015-16ರಲ್ಲಿ 26 ಕೋಟಿ ರೂ. ವ್ಯಯ ಮಾಡಲಾಗಿದೆ. ಇನ್ನು ಕಳೆದೆರಡು ವರ್ಷಗಳಲ್ಲಿ ಕೂಡ ಸಂತಾನಹರಣ ಶಸ್ತ್ರಚಿಕಿತ್ಸೆ, ಗರ್ಭ ನಿರೋಧಕ ಸಾಧನ ಅಳವಡಿಕೆ ಸೇರಿದಂತೆ ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹಾಗೂ ಈ ಕಾರ್ಯಕ್ರಮಗಳಿಗೆ ಒಳಗಾಗುವವರಿಗೆ ಪ್ರೋತ್ಸಾಹ ಧನ ನೀಡಲು ಸುಮಾರು 25 ಕೋಟಿ ರೂ.ಗೂ ಹೆಚ್ಚು ಅನುದಾನ ಖರ್ಚು ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಸ್ಥಿತಿ ಹೇಗಿದೆ?

ಟಿಎಫ್‌ಆರ್‌ ಕುಸಿತವಾಗುತ್ತಿರುವ ಕರ್ನಾಟಕ (1.7), ಕೇರಳ (1.7), ತೆಲಂಗಾಣ (1.7), ಪಶ್ಚಿಮ ಬಂಗಾಳ (1.6) ಸೇರಿದಂತೆ ಮತ್ತಿತರ ರಾಜ್ಯಗಳಲ್ಲಿ ಇನ್ಮುಂದೆ ಜನಸಂಖ್ಯೆ ನಿಯಂತ್ರಣ ಕಾರ್ಯಕ್ರಮಗಳನ್ನು ಕೈಬಿಡುವ ಸಾಧ್ಯತೆ ಹೆಚ್ಚಿದೆ. 2011ರ ಜನಗಣತಿ ಪ್ರಕಾರ ದೇಶದ 121 ಕೋಟಿ ಜನಸಂಖ್ಯೆಯಲ್ಲಿ ಹಿಂದಿ ಭಾಷಿಕ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್‌ ಸೇರಿದಂತೆ ಆರೇಳು ರಾಜ್ಯಗಳೇ ದೇಶದ ಶೇ.50ರಷ್ಟುಅಂದರೆ ಸುಮಾರು 60 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿವೆ. ಉಳಿದ ಜನಸಂಖ್ಯೆ ಇನ್ನುಳಿದ 23 ರಾಜ್ಯಗಳಿವೆ. ಅಲ್ಲದೆ ಈ ರಾಜ್ಯಗಳು ದೇಶದ ಒಟ್ಟಾರೆ ಟಿಎಫ್‌ಆರ್‌ ದರ 2.2ಕ್ಕಿಂತ ಮೇಲಿವೆ. ಉತ್ತರ ಪ್ರದೇಶ 3.0, ಬಿಹಾರ 3.2, ಮಧ್ಯಪ್ರದೇಶ 2.7, ರಾಜಸ್ಥಾನ 2.6 ಟಿಎಫ್‌ಆರ್‌ ದರ ಹೊಂದಿವೆ. ಇಂತಹ ಭಾಗಗಳಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದ್ದು, ಕರ್ನಾಟಕಕ್ಕೆ ಕೇಂದ್ರ ಸರ್ಕಾರವೇ ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮಗಳಿಂದ ವಿನಾಯಿತಿ ಘೋಷಿಸುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.