ETV Bharat / state

ಮತ್ತಷ್ಟು ಸ್ಮಾರ್ಟ್​ ಆದ ಪೊಲೀಸ್​ ಇಲಾಖೆ : ಈ ನೂತನ ಬೆರಳಚ್ಚು ತಂತ್ರಜ್ಞಾನದಿಂದ ಇಲಾಖೆಗೆ ಇನ್ನಷ್ಟು ಶಕ್ತಿ!

ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೂ ಮೊಬೈಲ್‌ ಕ್ರೈಂ ಅಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಸಿಸ್ಟಮ್ ಆ್ಯಪ್ (ಎಂಸಿಸಿಟಿಎನ್) ಅಳವಡಿಸಿಕೊಳ್ಳುವಂತೆ ಸೂಚಿಸಿದೆ. ಪ್ರಮುಖವಾಗಿ ರಾಜ್ಯದಲ್ಲಿರುವ 1024 ಕಾನೂನು ಸುವ್ಯವಸ್ಥೆ,‌ ಟ್ರಾಫಿಕ್, ಸೈಬರ್ ಹಾಗೂ ಮಹಿಳಾ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಲಾಗಿದೆ‌..

ಮತ್ತಷ್ಟು ಸ್ಮಾರ್ಟ್​ ಆದ ಪೊಲೀಸ್​ ಇಲಾಖೆ
ಮತ್ತಷ್ಟು ಸ್ಮಾರ್ಟ್​ ಆದ ಪೊಲೀಸ್​ ಇಲಾಖೆ
author img

By

Published : Mar 11, 2022, 3:05 PM IST

ಬೆಂಗಳೂರು : ಇತ್ತೀಚಿನ ವರ್ಷಗಳಲ್ಲಿ ಅಪರಾಧ ಪ್ರಕರಣಗಳನ್ನ ಬೇಧಿಸುವಲ್ಲಿ ಬೆರಳಚ್ಚು ಸಾಕ್ಷ್ಯಾಧಾರಗಳು ತುಂಬಾ ಮಹತ್ವದ ಪಾತ್ರವಹಿಸುತ್ತಿವೆ. ಕೊಲೆ, ಕಳ್ಳತನ, ಸುಲಿಗೆ ಸೇರಿದಂತೆ ನಾನಾ ರೀತಿಯ ಕ್ರೈಂ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಬೆರಳಚ್ಚು ತಂತ್ರಜ್ಞಾನ ತುಂಬಾ ಸಹಕಾರಿಯಾಗಿದೆ.

ದಿನೇ‌‌ದಿನೆ ಅಪರಾಧ ಪ್ರಕರಣಗಳು ಹೆಚ್ಚಳವಾದಂತೆ ಬೆರಳಚ್ಚು ವಿಭಾಗದ ಅಧಿಕಾರಿಗಳ ಮೇಲೆ ಒತ್ತಡ‌ವು ಹೆಚ್ಚಾಗುತ್ತಿದೆ.‌ ಕೆಲವು ಬಾರಿ ಬೆರಳಚ್ಚು ವರದಿ ವಿಳಂಬ ಹಿನ್ನೆಲೆಯಲ್ಲಿ ಆರೋಪಿಗಳನ್ನು ಹೆಡೆಮುರಿಕಟ್ಟಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡಿರುವ ಪೊಲೀಸ್ ಇಲಾಖೆಯು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೂ ಮೊಬೈಲ್‌ ಕ್ರೈಂ ಅಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ ವರ್ಕ್ ಸಿಸ್ಟಮ್ ಆ್ಯಪ್ (ಎಂಸಿಸಿಟಿಎನ್) ಅಳವಡಿಸಿಕೊಳ್ಳುವಂತೆ ಸೂಚಿಸಿದೆ.

1024 ಠಾಣೆ ಪೊಲೀಸರಿಗೆ‌ ಸೂಚನೆ : ರಾಜ್ಯದಲ್ಲಿರುವ 1024 ಕಾನೂನು ಸುವ್ಯವಸ್ಥೆ,‌ ಟ್ರಾಫಿಕ್, ಸೈಬರ್ ಹಾಗೂ ಮಹಿಳಾ ಪೊಲೀಸ್ ಠಾಣೆಗಳಿಗೂ ಸೂಚನೆ ನೀಡಲಾಗಿದೆ‌. ಈ ಹಿಂದೆ ಕಳ್ಳತನ, ಕೊಲೆ, ದರೋಡೆ ಸೇರಿದಂತೆ ವಿವಿಧ ರೀತಿಯ ಅಪರಾಧ ನಡೆದಾಗ ಪೊಲೀಸರ ಜೊತೆ ಸ್ಥಳಕ್ಕೆ ಎಫ್ಎಸ್ಎಲ್ ಹಾಗೂ ಬೆರಳಚ್ಚು ವಿಭಾಗದ ಅಧಿಕಾರಿಗಳು ಭೇಟಿ ನೀಡುತ್ತಾರೆ.

ಆರೋಪಿಗಳು ಬಿಟ್ಟು ಹೋದ ಬೆರಳಚ್ಚು ಗುರುತು ಸೇರಿದಂತೆ ಮತ್ತಿತರ ಎವಿಡೆನ್ಸ್ ಕಲೆ ಹಾಕುತ್ತಾರೆ. ಬಳಿಕ ಸಂಗ್ರಹವಾಗಿರುವ ಬೆರಳಚ್ಚು ಮಾದರಿಯನ್ನು‌ ಎಸಿಸಿಟಿಎನ್ ಆ್ಯಪ್‌ನಲ್ಲಿರುವ ಆರೋಪಿಗಳ ಬೆರಳಚ್ಚುಗಳ ಜೊತೆ ಹೋಲಿಸಿ ತಾಳೆ ಹಾಕಿದ ಬಳಿಕವಷ್ಟೇ ಸಂಬಂಧ‌ಪಟ್ಟ ಪೊಲೀಸರಿಗೆ ವರದಿ‌ ನೀಡುತ್ತಿದ್ದರು.

ಈ ಪ್ರಕ್ರಿಯೆ ಕೊಂಚ ತಡವಾಗುವುದರಿಂದ ಪ್ರಕರಣಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಐಟಿ ವಿಭಾಗವು ರಾಜ್ಯದ ಎಲ್ಲಾ ಪೊಲೀಸ್ ಇನ್​​ಸ್ಪೆಕ್ಟರ್‌ಗಳಿಗೂ‌ ಎಂಸಿಸಿಟಿಎನ್ ಆ್ಯಪ್ ಇನ್ ಸ್ಟಾಲ್ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ.

ಠಾಣೆಯಲ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನ್ : ಎಂಸಿಸಿಟಿಎನ್ ಆ್ಯಪ್ ಡೌನ್ ಲೋಡ್ ಮಾಡಿಕೊಂಡರೆ ಪ್ರಕರಣದ ತನಿಖಾಧಿಕಾರಿಗಳಿಗೆ ಅನುಕೂಲಕರವಾಗಿದೆ. ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡರೆ ಠಾಣೆಯಲ್ಲಿ ಬೆರಳಚ್ಚು ಪ್ರಿಂಟ್‌ ಅನ್ನು ಇತರೆ ಆರೋಪಿಗಳ ಜೊತೆ ಮ್ಯಾಚ್ ಮಾಡಬಹುದಾಗಿದೆ.‌ ಗಂಭೀರ ಪ್ರಕರಣಗಳಲ್ಲಿನ ಕೃತ್ಯದಲ್ಲಿ ಭಾಗಿಯಾಗಿದ್ದಾರಾ? ಆ ವ್ಯಕ್ತಿಗೆ ಕ್ರಿಮಿನಲ್ ಹಿನ್ನೆಲೆ ಇದೆಯಾ? ಎಂಬುದರ ಬಗ್ಗೆ ಕ್ಷಣಾರ್ಧದಲ್ಲಿ ತನಿಖಾಧಿಕಾರಿಗಳು ಪತ್ತೆ ಹಚ್ಚಬಹುದಾಗಿದೆ.

ಇದನ್ನೂ ಓದಿ: ಕಾಶ್ಮೀರದ ಗುಜ್ರಾನ್​ ನಲ್ಲಾ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್​ ಪತನ

ಸದ್ಯ ಫಿಂಗರ್ ಪ್ರಿಂಟ್ ಬ್ಯೂರೋದಲ್ಲಿ 28,691 ಅಪರಾಧಿಗಳ ಬೆರಳಚ್ಚುಗಳು ಮದ್ರಿತವಾಗಿವೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಬೆರಳಚ್ಚು ಸಂಗ್ರಹದಲ್ಲಿ ಕರ್ನಾಟಕವು 15 ಸ್ಥಾನದಲ್ಲಿದೆ.‌ ಪಂಜಾಬ್ 3.8 ಲಕ್ಷ 10 ಬೆರಳಚ್ಚುಗಳನ್ನು ಹೊಂದುವ ‌ಮೂಲಕ ರಾಷ್ಟ್ರದಲ್ಲಿ ಅಗ್ರಸ್ಥಾನದಲ್ಲಿದೆ.

ಪೊಲೀಸ್‌ ಇಲಾಖೆಯಲ್ಲಿ ಇ-ಸಿಗ್ನೇಚರ್ ವ್ಯವಸ್ಥೆ : ಕೊರೊನಾ ಅಡಚಣೆ ಹಿನ್ನೆಲೆ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯಗಳಿಗೆ ಇ-ಸಿಗ್ನೇಚರ್ ವ್ಯವಸ್ಥೆ ಮೂಲಕ ಎಫ್ಐಆರ್‌ಗಳನ್ನ ಆನ್‌ಲೈನ್ ಮುಖಾಂತರವೇ ಸಲ್ಲಿಸಲಾಗುತ್ತಿದೆ. ರಾಜ್ಯದಲ್ಲಿರುವ 1,054 ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಶೇ.80ರಷ್ಟು ಎಫ್‌ಐಆರ್‌ಗಳನ್ನು ಸಂಬಂಧಪಟ್ಟ ನ್ಯಾಯಾಲಯಗಳಿಗೆ ಆನ್‌ಲೈನ್‌ನಲ್ಲಿ ಸಲ್ಲಿಸಲಾಗಿದೆ.

ರಾಜ್ಯ ಪೊಲೀಸ್ ಇಲಾಖೆ ಮಾಹಿತಿ ಪ್ರಕಾರ 2021-22ರ ಫೆಬ್ರುವರಿವರೆಗೂ ‌ಒಟ್ಟು 2,09,945 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಈ ಪೈಕಿ 1,66,930 ಎಫ್‌ಐಆರ್‌ಗಳನ್ನು ‘ಇ-ಸಿಗ್ನೇಚರ್’ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಅಂತೆಯೇ, ಚಾರ್ಜ್‌ಶೀಟ್‌ಗಳನ್ನು ಇ-ಸಹಿ ಮೂಲಕ ಸಲ್ಲಿಸಲಾಗುತ್ತಿದೆ. ಆದಾಗ್ಯೂ, ತಾಂತ್ರಿಕ ಸಮಸ್ಯೆಗಳಿಂದಾಗಿ ಎಫ್‌ಐಆರ್‌ಗಳಿಗೆ ಹೋಲಿಸಿದರೆ ಅವುಗಳ ಪ್ರಮಾಣ ಕಡಿಮೆಯಾಗಿದೆ. 2021 ಮತ್ತು 2022ರ ಫೆಬ್ರುವರಿ ನಡುವೆ, ರಾಜ್ಯಾದ್ಯಂತ ಪೊಲೀಸರು 1,40,569 ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದ್ದಾರೆ ಮತ್ತು ಅವುಗಳಲ್ಲಿ 68,079 ಚಾರ್ಜ್‌ಶೀಟ್‌ಗಳನ್ನು ಇ-ಸಹಿ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಇದು ಶೇ.48ರಷ್ಟು ಇ- ಸಿಗ್ನೇಚರ್ ಮೂಲಕ ಸಲ್ಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.