ETV Bharat / state

ಮನೆಬಾಗಿಲಿಗೆ ಪಡಿತರ ಹಂಚಿಕೆ ಯೋಜನೆ: ಕಾಳಸಂತೆ ಮಾರಾಟಕ್ಕೆ ಬೀಳುತ್ತಾ ಬ್ರೇಕ್ ?

author img

By

Published : Oct 28, 2021, 6:53 PM IST

ಆಂಧ್ರಪ್ರದೇಶದಲ್ಲಿ ಪಡಿತರದಾರರ ಮನೆ ಬಾಗಿಲಿಗೆ ಪಡಿತರ ತಲುಪಿಸುವ ಯೋಜನೆ ಜನಮನ್ನಣೆ ಪಡೆದುಕೊಂಡ ಬೆನ್ನಲ್ಲೇ ಕಾಳಸಂತೆಗೆ ಕಡಿವಾಣ ಹಾಕಲು ಪೂರಕವಾಗಿ ರಾಜ್ಯದಲ್ಲಿಯೂ ಮನೆ ಮನೆಗೆ ಪಡಿತರ ತಲುಪಿಸುವ ಯೋಜನೆ ಜಾರಿಗೆ ಆಹಾರ ಇಲಾಖೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ.

karnataka planning to supply ration like Andhra Pradesh
ಪಡಿತರ ಹಂಚಿಕೆ ಯೋಜನೆ

ಬೆಂಗಳೂರು: ಆಹಾರ ಭದ್ರತೆ ಕಾಯ್ದೆಯಡಿ ವಿತರಿಸುತ್ತಿರುವ ಪಡಿತರ ದುರ್ಬಳಕೆ ತಡೆಗೆ ಆಂಧ್ರಪ್ರದೇಶ ಮಾದರಿಯ ಯೋಜನೆಗೆ ಆಹಾರ ಇಲಾಖೆ ಪ್ರಸ್ತಾವನೆ ಸಿದ್ದಪಡಿಸಿದ್ದು,'ಮೊಬೈಲ್ ರೇಷನ್ ಸ್ಟೋರ್' ಮೂಲಕ ಪಡಿತರದಾರರ ಮನೆ ಬಾಗಿಲಿಗೆ ಆಹಾರ ಧಾನ್ಯಗಳನ್ನು ಸರಬರಾಜು ಮಾಡಲು ಮುಂದಾಗಿದೆ. ಮುಖ್ಯಮಂತ್ರಿಗಳು ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ರಾಜ್ಯೋತ್ಸವದ ಕೊಡುಗೆಯಾಗಿ ಯೋಜನೆ ಪ್ರಾಯೋಗಿಕವಾಗಿ ರಾಜ್ಯ ರಾಜಧಾನಿಯಲ್ಲಿ ಜಾರಿಗೆ ಬರಲಿದೆ.

ಆಂಧ್ರಪ್ರದೇಶದಲ್ಲಿ ಪಡಿತರದಾರರ ಮನೆ ಬಾಗಿಲಿಗೆ ಪಡಿತರ ತಲುಪಿಸುವ ಯೋಜನೆ ಜನಮನ್ನಣೆ ಪಡೆದುಕೊಂಡ ಬೆನ್ನಲ್ಲೇ ಕಾಳಸಂತೆಗೆ ಕಡಿವಾಣ ಹಾಕಲು ಪೂರಕವಾಗಿ ರಾಜ್ಯದಲ್ಲಿಯೂ ಮನೆ ಮನೆಗೆ ಪಡಿತರ ತಲುಪಿಸುವ ಯೋಜನೆ ಜಾರಿಗೆ ಆಹಾರ ಇಲಾಖೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ.

ರಾಜ್ಯದಲ್ಲಿ 19,963 ಪಡಿತರ ವಿತರಣಾ ಕೇಂದ್ರಗಳಿದ್ದು, 1.47 ಕೋಟಿ ಪಡಿತರ ಕಾರ್ಡ್​ಗಳಿವೆ. ಅಂತ್ಯೋದಯ, ಬಿಪಿಎಲ್ ಕಾರ್ಡ್​​ಗೆ ಉಚಿತ ಪಡಿತರ ವಿತರಣೆ ಮಾಡುತ್ತಿದ್ದು, ಎಪಿಎಲ್ ಕಾರ್ಡುದಾರರಿಗೆ ರಿಯಾಯಿತಿ ದರದಲ್ಲಿ ಪಡಿತರ ವಿತರಣೆ ಮಾಡಲಾಗುತ್ತಿದೆ. ಇವರೆಲ್ಲರ ಮನೆ ಬಾಗಿಲಿಗೆ ಆಟೋ ಮೂಲಕ ಪಡಿತರವನ್ನು ಸರಬರಾಜು ಮಾಡಬೇಕು ಎನ್ನುವ ಪ್ರಸ್ತಾವನೆ ಸಿದ್ಧಗೊಂಡಿದೆ.

ಆಂಧ್ರಪ್ರದೇಶ ಮಾದರಿಯಲ್ಲೇ ಪ್ರತಿ ಫಲಾನುಭವಿ ಮನೆಗೆ ತೆರಳಿ, ಬೆರಳಚ್ಚು ಪಡೆದು ಪಡಿತರ ವಿತರಣೆ ಮಾಡಲಾಗುತ್ತದೆ. ಅಕ್ರಮ ತಡೆಗೆ ವಾಹನಗಳಿಗೆ ಜಿಪಿಎಸ್ ಬಳಕೆ ಮಾಡಿ ಅದರ ಮೇಲೆ ನಿಗಾ ಇರಿಸಲಾಗುತ್ತದೆ. ಇದರಿಂದಾಗಿ ಪಡಿತರದಾರರು ಪಡಿತರ ವಿತರಣಾ ಕೇಂದ್ರಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲಬೇಕಿಲ್ಲ, ಬಾಗಿಲು ತೆಗೆದಿರುವ ಸಮಯಕ್ಕೆ ಕಾಯಬೇಕಿಲ್ಲ. ಪಡಿತರ ಬಂದಿದೆಯೋ ಇಲ್ಲವೇ ವಿಚಾರಿಸಬೇಕಿಲ್ಲ. ದೂರವಿರುವ ಅಂಗಡಿಗಳಿಗೆ ಅಲೆದಾಡುವುದೂ ತಪ್ಪಲಿದೆ ಎನ್ನುವುದು ಆಹಾರ ಇಲಾಖೆಯ ಲೆಕ್ಕಾಚಾರವಾಗಿದೆ.

ಕಾಳಸಂತೆಗೆ ಕಡಿವಾಣ:

ಪಡಿತರದಾರರ ಮನೆ ಬಾಗಿಲಿಗೆ ಪಡಿತರ ಸರಬರಾಜು ಮಾಡುವುದರಿಂದ ಕಾಳಸಂತೆಯಲ್ಲಿ ಪಡಿತರ ಮಾರಾಟಕ್ಕೆ ಬ್ರೇಕ್ ಹಾಕಬಹುದು ಎನ್ನುವುದು ಇಲಾಖೆಯ ಅಭಿಪ್ರಾಯವಾಗಿದೆ. ಪ್ರತಿ ತಿಂಗಳು ಪಡಿತರ ವಿತರಣೆಯಲ್ಲಿ ತೂಕದಲ್ಲಿ ವ್ಯತ್ಯಾಸ ಮಾಡುವುದು, ಕೆಲವರಿಗೆ ಪಡಿತರ ವಿತರಿಸದೇ ಅಕ್ರಮವಾಗಿ ಪಡಿತರ ವಿತರಣಾ ಕೇಂದ್ರದಲ್ಲೇ ದಾಸ್ತಾನು ಮಾಡಿ ಆಹಾರ ಧಾನ್ಯವನ್ನು ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಆಗಾಗ ಅಲ್ಲಲ್ಲಿ ಕೇಳಿ ಬರುತ್ತಲೇ ಇರುತ್ತವೆ.

ಈಗ ಮನೆ ಬಾಗಿಲಿಗೆ ಪಡಿತರ ವಿತರಣೆ ಮಾಡಿದಲ್ಲಿ ಪ್ರತಿಯೊಬ್ಬ ಫಲಾನುಭವಿಗೂ ಪಡಿತರ ತಲುಪಲಿದೆ. ಅಕ್ರಮ ದಾಸ್ತಾನಿಗೆ ಅವಕಾಶ ಇರುವುದಿಲ್ಲ. ತೂಕ, ಅಳೆತೆಯಲ್ಲಿ ವ್ಯತ್ಯಾಸ ಮಾಡಲು ಸಾಧ್ಯವಿಲ್ಲದಂತಾಗಲಿದೆ ಎನ್ನುವುದು ಆಹಾರ ಇಲಾಖೆ ಅಧಿಕಾರಿಗಳು ಯೋಜನೆ ಬಗ್ಗೆ ನೀಡುತ್ತಿರುವ ಸಮರ್ಥನೆಯಾಗಿದೆ.

ರಾಜಧಾನಿಯಲ್ಲಿ ಪ್ರಯೋಗ:

ಸದ್ಯ ಇಡೀ ರಾಜ್ಯದಲ್ಲಿ ಏಕಕಾಲಕ್ಕೆ ಯೋಜನೆ ಜಾರಿಗೊಳಿಸದೇ ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಯೋಜನೆ ಅನುಷ್ಠಾನಕ್ಕೆ ನಿರ್ಧರಿಸಲಾಗಿದೆ. ಬೆಂಗಳೂರಿನ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿ ಆಯಾ ಪಡಿತರ ವಿತರಣಾ ಕೇಂದ್ರಗಳ ವ್ಯಾಪ್ತಿಯ ಮನೆಗಳಿಗೆ ಆಯಾ ಪಡಿತರ ಅಂಗಡಿಗಳ ಮೂಲಕವೇ ಮನೆ ಮನೆಗೆ ಪಡಿತರ ತಲುಪಿಸಲಾಗುತ್ತದೆ. ಲಗೇಜ್ ಆಟೋ ಮೂಲಕ ಪಡಿತರ ಸಾಗಣೆ ಮಾಡಿ ಮನೆ ಮನೆಗೆ ವಿತರಣೆ ಮಾಡಲಿದ್ದು, ಆಟೋದಲ್ಲೇ ತೂಕದ ಯಂತ್ರ ಇರಲಿದೆ.

ಪಡಿತರದರರ ಕಣ್ಣಮುಂದೆಯೇ ಅಳತೆ ಮಾಡಿ ವಿತರಣೆ ಮಾಡಲಾಗುತ್ತದೆ. ಇದಕ್ಕಾಗಿ 700 ವಾಹನಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಈ ವಾಹನಗಳನ್ನು ಖರೀದಿಸುವ ಬದಲಾಗಿ ಹೊರಗುತ್ತಿಗೆ ನೀಡಬೇಕು ಎನ್ನುವ ಆಲೋಚನೆ ಆಹಾರ ಇಲಾಖೆಯಲ್ಲಿದೆ. ಆದರೆ, ಮುಖ್ಯಮಂತ್ರಿಗಳ ನಿರ್ಧಾರದ ಮೇಲೆ ಇದು ಅಂತಿಮಗೊಳ್ಳಬೇಕಿದೆ.

ಆಹಾರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಆಹಾರ ಸಚಿವ ಉಮೇಶ್ ಕತ್ತಿ ಕೂಡ ಈ ಸಂಬಂಧ ಸಭೆ ನಡೆಸಿ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ. ಸಚಿವರು ಕೂಡ ಮನೆ ಬಾಗಿಲಿಗೆ ಪಡಿತರ ವಿತರಣೆ ಮಾಡುವ ಯೋಜನೆಗೆ ಉತ್ಸುಕತೆ ತೋರಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿಗೆ ಬರುತ್ತಿದ್ದಂತೆ ಸಭೆ ನಡೆಸಿ ಈ ಯೋಜನೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಇಂದು ಸಭೆಗೆ ಸಮಯ ನಿಗದಿಪಡಿಸಿತ್ತಾದರೂ ಸಿಎಂ ಕಾರ್ಯಕ್ರಮ ಬದಲಾಗಿದ್ದರಿಂದ ಸಭೆಯನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಸಚಿವ ಉಮೇಶ್ ಕತ್ತಿ ಮಾಹಿತಿ ನೀಡಿದ್ದಾರೆ.

ಬೊಕ್ಕಸಕ್ಕೆ ಹೆಚ್ಚುವರಿ ಹೊರೆ:

ಈಗಾಗಲೇ ಉಚಿತ ಪಡಿತರ ವಿತರಣೆ ಜಾರಿಯಲ್ಲಿದ್ದು, ಕೇಂದ್ರದ ಸಬ್ಸಿಡಿ ಬಿಟ್ಟು ಉಳಿದ ವೆಚ್ಚ ರಾಜ್ಯ ಭರಿಸುತ್ತಿದೆ. ಸಾಗಾಣಿಕೆ ವೆಚ್ಚ, ಪಡಿತರ ವಿತರಣಾ ಕೇಂದ್ರಗಳಿಗೆ ಕಮಿಷನ್ ನೀಡಲಾಗುತ್ತಿದೆ. ಈಗ ಮನೆ ಬಾಗಿಲಿಗೆ ಪಡಿತರ ತಲುಪಿಸಲು, ವಾಹನ ಖರೀದಿ ಅಥವಾ ಬಾಡಿಗೆಗೆ ಹೆಚ್ಚುವರಿ ಹಣ ವಿನಿಯೋಗಿಸಬೇಕಿದ್ದು, ಇದು ಬೊಕ್ಕಸಕ್ಕೆ ಹೆಚ್ಚುವರಿ ಹೊರೆ ತರಲಿದೆ ಎನ್ನಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.