ETV Bharat / state

ನ್ಯಾಯಾಲಯಗಳಿಗೆ ವಿಡಿಯೋ ಕಾನ್ಫರೆನ್ಸ್ ನಿಯಮಗಳನ್ನು ರೂಪಿಸಿದ ಹೈಕೋರ್ಟ್

author img

By

Published : Jun 27, 2020, 6:10 PM IST

ರಾಜ್ಯದ ನ್ಯಾಯಾಲಯಗಳು ವಿಡಿಯೋ ಕಾನ್ಫರೆನ್ಸ್ ಮೂಲಕವೇ ಕಾರ್ಯನಿರ್ವಹಿಸುವಂತೆ ನಿರ್ದೇಶಿಸಿದ್ದ ಹೈಕೋರ್ಟ್, ಈ ಕುರಿತಂತೆ ನಿಯಮ ರೂಪಿಸಿದೆ.

Rules for Video Conferencing for Court
ವಿಡಿಯೋ ಕಾನ್ಫರೆನ್ಸ್ ನಿಯಮಗಳನ್ನು ರೂಪಿಸಿದ ಹೈಕೋರ್ಟ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ನ್ಯಾಯಾಲಯಗಳು ವಿಡಿಯೋ ಕಾನ್ಫರೆನ್ಸ್ ಮೂಲಕವೇ ಕಾರ್ಯನಿರ್ವಹಿಸುವಂತೆ ನಿರ್ದೇಶಿಸಿದ್ದ ಹೈಕೋರ್ಟ್, ಈ ಕುರಿತಂತೆ ನಿಯಮ ರೂಪಿಸಿದೆ.

ವಿಡಿಯೋ ಕಾನ್ಫರೆನ್ಸ್ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯದ ವಿಚಾರಣಾ ನ್ಯಾಯಾಲಯಗಳಿಗೆ ಜೂನ್ 8ರಂದು ನೀಡಿದ್ದ ನಿರ್ದೇಶನಗಳನ್ನೇ "ನ್ಯಾಯಾಲಯಗಳಿಗೆ ವಿಡಿಯೋ ಕಾನ್ಫರೆನ್ಸಿಂಗ್ ನಿಯಮಗಳು" ಹೆಸರಿನಲ್ಲಿ ಜಾರಿಗೆ ತರಲಾಗಿದೆ. ಸಂವಿಧಾನದ ವಿಧಿ 225ರ ಅಡಿ ದತ್ತವಾದ ಅಧಿಕಾರ ಬಳಸಿ ಕೋರ್ಟ್ ಪ್ರಕ್ರಿಯೆಗಳಿಗೆ ನಿಯಮ ರೂಪಿಸಿರುವ ಹೈಕೋರ್ಟ್, ವಿಧಿ 227ರ ಅಡಿ ಲಭ್ಯವಿರುವ ಮೇಲುಸ್ತುವಾರಿ ಅಧಿಕಾರದಂತೆ ರಾಜ್ಯದ ನ್ಯಾಯಾಲಯಗಳನ್ನು ಈ ನಿಯಮಗಳಡಿ ಕಾರ್ಯಾಚರಿಸಲು ನಿರ್ದೇಶಿಸಿದೆ. ರಾಜ್ಯ ಸರ್ಕಾರ ನಿಯಮಗಳಿಗೆ ಒಪ್ಪಿಗೆ ನೀಡಿ ಜೂನ್ 25ರಂದು ಅಧಿಸೂಚನೆ ಹೊರಡಿಸಿದ್ದು, ಅಧಿಕೃತವಾಗಿ ಜಾರಿಯಾಗಿವೆ.

ನೂತನ ನಿಯಮಗಳಲ್ಲಿ ಐದು ಅಧ್ಯಾಯಗಳಿದ್ದು, 19 ನಿಯಮಗಳಿವೆ. ಪ್ರತಿ ನಿಯಮಕ್ಕೂ 1ರಿಂದ 16 ಉಪ ನಿಯಮಗಳನ್ನು ಸೇರಿಸಲಾಗಿದೆ. ಹಾಗೆಯೇ ಎರಡು ಶೆಡ್ಯೂಲ್​ಗಳನ್ನು ಅಳವಡಿಸಲಾಗಿದ್ದು, ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯವನ್ನು ಪಡೆದುಕೊಳ್ಳುವುದು, ಬಳಸುವುದು, ಪ್ರಕ್ರಿಯೆ ಸೇರಿದಂತೆ ವಕೀಲರು ಮತ್ತು ಕಕ್ಷೀದಾರರು ಈ ಹೊಸ ವ್ಯವಸ್ಥೆಗೆ ಹೇಗೆ ಹೊಂದಿಕೊಳ್ಳಬಹುದು ಎಂಬುದನ್ನು ವಿವರಿಸಲಾಗಿದೆ.

ನಿಯಮಗಳಲ್ಲಿ ಪ್ರಮುಖವಾಗಿ, ಕೋರ್ಟ್​ಗಳು ನ್ಯಾಯದಾನ ಪ್ರಕ್ರಿಯೆಯ ಎಲ್ಲಾ ಹಂತಗಳಲ್ಲಿ ಈ ವ್ಯವಸ್ಥೆಯನ್ನು ಬಳಸಬಹುದು. ಸಿಪಿಸಿ, ಸಿಆರ್​ಪಿಸಿ, ನ್ಯಾಯಾಂಗ ನಿಂದನೆ, ಸಾಕ್ಷ್ಯ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳನ್ನೂ ವಿಡಿಯೋ ಕಾನ್ಫರೆನ್ಸ್ ಮೂಲಕವೇ ನಡೆಸಬಹುದು. ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲು ಇಂಟರ್​ನೆಟ್​​ ಸಮಸ್ಯೆ ಇರುವ ಹಳ್ಳಿಗಾಡು ಪ್ರದೇಶಗಳಿಗೆ ಅನುಕೂಲವಾಗುವಂತೆ ಹತ್ತಿರದ ಕೋರ್ಟ್​ನಲ್ಲಿ ಡೆಸ್ಕ್​ಟಾಪ್, ಲ್ಯಾಪ್​ಟಾಪ್, ಮೊಬೈಲ್, ಪ್ರಿಂಟರ್, ವಿದ್ಯುತ್ ಸಂಪರ್ಕ, ಕ್ಯಾಮರಾ, ಮೈಕ್ರೋ ಫೋನ್, ಸ್ಪೀಕರ್, ಡಾಕ್ಯೂಮೆಂಟ್ ವಿಷುಯಲೈಸರ್, ಆಸನ ವ್ಯವಸ್ಥೆ, ಸೂಕ್ತ ಬೆಳಕಿನ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಬೇಕು. ಕೋರ್ಟ್ ಪ್ರಕ್ರಿಯೆಯಲ್ಲಿ ಇವುಗಳನ್ನು ಬಳಸಲು ಕೋಆರ್ಡಿನೇಟರ್ ಇರಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಹಳ್ಳಿಗಾಡು ಪ್ರದೇಶದಲ್ಲಿ ಅಗತ್ಯವಿದ್ದ ಕಡೆ ಸಾಕ್ಷ್ಯ ವಿಚಾರಣೆ ಮತ್ತಿತರ ಪ್ರಕ್ರಿಯೆ ನಡೆಸಲು ಕೋಆರ್ಡಿನೇಟರ್ ಭಾಷಾಂತರಕಾರರನ್ನು ನೇಮಿಸಿಕೊಡಬೇಕು. ಸಮನ್ಸ್ ನೀಡುವ ಸಂದರ್ಭದಲ್ಲಿ ವಿಚಾರಣಾ ದಿನಾಂಕ, ಸ್ಥಳಗಳನ್ನು ನಿಗದಿಪಡಿಸುವ ವೇಳೆ ಫೋಟೋ ಐಡಿ ತರುವಂತೆ ಸೂಚಿಸಬೇಕು. ಡಾಕ್ಯೂಮೆಂಟ್ ವಿಷುವಲೈಸರ್​ಗಳನ್ನು ಸೂಕ್ತವಾಗಿ ಅಳವಡಿಸಬೇಕು. ಇಂತಹ ಸೌಲಭ್ಯ ಪಡೆದುಕೊಳ್ಳುವ ಕಕ್ಷಿದಾರರು ಅದಕ್ಕೆ ಕೋರ್ಟ್ ನಿಗದಿಪಡಿಸಿದ ಶುಲ್ಕ ಪಾವತಿಸಬೇಕು. ನ್ಯಾಯಾಂಗ ಬಂಧನ, ದೋಷಾರೋಪ ಪಟ್ಟಿ ಸಿದ್ಧ ಮಾಡುವುದು, ಸಾಕ್ಷ್ಯ ವಿಚಾರಣೆ ನಡೆಸುವುದು, ಹೇಳಿಕೆಗಳನ್ನು ದಾಖಲಿಸುವ ಪ್ರಕ್ರಿಯೆಗಳನ್ನು ಕೋರ್ಟ್​ಗಳು ವಿಡಿಯೋ ಕಾನ್ಫರೆನ್ಸ್ ಮೂಲಕವೇ ನಡೆಸಬಹುದು.

ಓಪನ್ ಕೋರ್ಟ್​ಗಳಲ್ಲಿ ವೀಕ್ಷಕರು ಕೋರ್ಟ್ ಪ್ರಕ್ರಿಯೆಯನ್ನು ವೀಕ್ಷಿಸಲು ಅವಕಾಶವಿರುವಂತೆಯೇ ಕೋರ್ಟ್​ಗಳು ಸಾರ್ವಜನಿಕರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ಕೋರ್ಟ್​ ಕಲಾಪ ವೀಕ್ಷಿಸಲು ಅವಕಾಶ ಮಾಡಿಕೊಡಬೇಕು ಎಂದು ಹೊಸ ನಿಯಮಗಳಲ್ಲಿ ತಿಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.