ETV Bharat / state

ಅಪರಾಧಗಳ ತನಿಖೆಗೆ ಕಾಲಮಿತಿ: ಸಣ್ಣ ಪ್ರಕರಣಕ್ಕೆ 60 ದಿನ, ಗಂಭೀರ ಪ್ರಕರಣಕ್ಕೆ 90 ದಿನ ನಿಗದಿ ಪಡಿಸಿದ ಹೈಕೋರ್ಟ್​! - ಗಂಭೀರ ಅಪರಾಧ ಪ್ರಕರಣ ತನಿಖೆಗೆ 90 ದಿನ ನಿಗದಿ

ಅಪರಾಧ ಪ್ರಕರಣಗಳನ್ನು ಸಣ್ಣ, ಗಂಭೀರ ಮತ್ತು ಘೋರ ಅಪರಾಧಗಳು ಎಂದು ಮೂರು ವಿವಿಧಗಳಾಗಿ ವರ್ಗೀಕರಿಸಬಹುದು. ಸಣ್ಣ- ಪುಟ್ಟ ಅಪರಾಧ ಪ್ರಕರಣಗಳನ್ನು 60 ದಿನ ಹಾಗೂ ಗಂಭೀರ ಅಪರಾಧ ಪ್ರಕರಣಗಳ ತನಿಖೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸಬೇಕೆಂದು ಹೈಕೋರ್ಟ್​ ಆದೇಶಿಸಿದೆ.

High Court set time limit for investigation
ಅಪರಾಧಗಳ ತನಿಖೆಗೆ ಕಾಲಮಿತಿ ನಿಗದಿ ಪಡಿಸಿದ ಹೈಕೋರ್ಟ್
author img

By

Published : May 31, 2022, 3:34 PM IST

ಬೆಂಗಳೂರು: ಸಣ್ಣ-ಪುಟ್ಟ ಅಪರಾಧ ಪ್ರಕರಣಗಳನ್ನು 60 ದಿನಗಳಲ್ಲಿ ಹಾಗೂ ಗಂಭೀರ ಅಪರಾಧ ಪ್ರಕರಣಗಳ ತನಿಖೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಹೈಕೋರ್ಟ್ ರಾಜ್ಯ ಪೊಲೀಸ್‌ ಮತ್ತು ತನಿಖಾ ಸಂಸ್ಥೆಗಳಿಗೆ ನಿರ್ದೇಶಿಸಿದೆ. ಖಾಸಗಿ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲು ಮ್ಯಾಜಿಸ್ಟ್ರೇಟ್ ನೀಡಿರುವ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಪ್ರಕರಣದ ವಿಚಾರಣೆ ನಡೆದ ನ್ಯಾ.ಎಸ್‌.ಸುನಿಲ್‌ ದತ್ ಯಾದವ್‌ ಅವರಿದ್ದ ಪೀಠ ಪೊಲೀಸರಿಗೆ ಹಾಗೂ ಮ್ಯಾಜಿಸ್ಟ್ರೇಟ್​ಗಳಿಗೆ ಅನ್ವಯಿಸುವಂತೆ ಕೆಲ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಹಣಕಾಸು ವಂಚನೆ, ಹವಾಲಾ ಮೂಲಕ ಹಣ ಸಾಗಣೆ ಮತ್ತು ಡಿಜಿಟಲ್‌ ಕರೆನ್ಸಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸಲು ಪೊಲೀಸ್‌ ಸಿಬ್ಬಂದಿಗೆ ಅಗತ್ಯ ತಾಂತ್ರಿಕ ತರಬೇತಿ ನೀಡುವ ಅಗತ್ಯತೆಯ ಬಗ್ಗೆ ಪ್ರಸ್ತಾಪಿಸಿರುವ ಪೀಠವು ರಾಜಕೀಯ ಹಸ್ತಕ್ಷೇಪದಿಂದ ಅಧಿಕಾರಿಗಳು ತನಿಖೆ ಪೂರ್ಣಗೊಳಿಸಲು ಧೀರ್ಘಾವಧಿ ತೆಗೆದುಕೊಂಡಾಗ ಸಾಕ್ಷ್ಯಗಳು ನಾಶವಾಗಬಹುದು. ಹೀಗಾಗಿ, ಮ್ಯಾಜಿಸ್ಟ್ರೇಟ್ ಸಿಆರ್ಪಿಸಿ ಸೆಕ್ಷನ್ 156(3)ರಡಿ ಲಭ್ಯವಿರುವ (ತನಿಖೆಗೆ ಆದೇಶಿಸುವ) ಅಧಿಕಾರ ಚಲಾಯಿಸಬೇಕೆಂದು ನಿರ್ದೇಶಿಸಿದೆ.

ಹೈಕೋರ್ಟ್ ನಿರ್ದೇಶನಗಳು ಹೀಗಿವೆ: ಅಪರಾಧ ಪ್ರಕರಣಗಳನ್ನು ಸಣ್ಣ, ಗಂಭೀರ ಮತ್ತು ಘೋರ ಅಪರಾಧಗಳು ಎಂದು ಮೂರು ವಿಧಗಳಾಗಿ ವರ್ಗೀಕರಿಸಬಹುದು. ಸಣ್ಣ-ಪುಟ್ಟ ಅಪರಾಧಗಳ ತನಿಖೆ ಪೂರ್ಣಗೊಳಿಸಲು 60 ದಿನಗಳ ಗಡುವು ವಿಧಿಸಬಹುದು. ತನಿಖಾಧಿಕಾರಿಯು ತನಿಖೆ ಪೂರ್ಣಗೊಳಿಸಲು ಸೂಕ್ತ ಕಾರಣಗಳನ್ನು ಉಲ್ಲೇಖಿಸಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ವಿಶೇಷ ನ್ಯಾಯಾಧೀಶರು ಅಥವಾ ಮ್ಯಾಜಿಸ್ಟ್ರೇಟ್‌ ಸಮಯ ವಿಸ್ತರಿಸಬಹುದು ಎಂದು ಹೈಕೋರ್ಟ್​ ಹೇಳಿದೆ.

ಗಂಭೀರ ಮತ್ತು ಘೋರ ಅಪರಾಧಗಳ ತನಿಖೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸಬೇಕು. ಈ ವೇಳೆ, ತನಿಖಾಧಿಕಾರಿ ಕೋರಿಗೆ ಮೇರೆಗೆ ತನಿಖೆ ಪೂರ್ಣಗೊಳಿಸಲು ಮ್ಯಾಜಿಸ್ಟ್ರೇಟ್ ಹೆಚ್ಚಿನ ಸಮಯ ನೀಡಬಹುದು. ಆದರೆ, ಅದಕ್ಕೆ ಸೂಕ್ತ ಕಾರಣಗಳಿರಬೇಕು. ತನಿಖಾಧಿಕಾರಿಯು ಕಾಲಾಮಿತಿಯಲ್ಲಿ ತನಿಖೆ ಪೂರ್ಣಗೊಳಿಸದೇ ಇದ್ದರೆ ಮೇಲಧಿಕಾರಿಯು ಸಿಆರ್‌ಪಿಸಿ ಸೆಕ್ಷನ್‌ 36ರ ಪ್ರಕಾರ ತಮ್ಮ ಅಧಿಕಾರ ಚಲಾಯಿಸಬಹುದು ಎಂದು ನ್ಯಾಯ ಪೀಠ ತಿಳಿಸಿದೆ.

ತನಿಖೆ ಶೀಘ್ರವಾಗಿ ನಡೆಯುತ್ತಿಲ್ಲ ಅಥವಾ ವಿಳಂಬವಾಗುತ್ತಿದೆ ಎನ್ನಿಸಿದರೆ ಮ್ಯಾಜಿಸ್ಟ್ರೇಟ್ ವಿಳಂಬಕ್ಕೆ ಕಾರಣ ಕೇಳಬಹುದು ಹಾಗೂ ಸಿಆರ್​ಪಿಸಿ ಸೆಕ್ಷನ್ 156(3) ಅಡಿ ಲಭ್ಯವಿರುವ (ತನಿಖೆಗೆ ಆದೇಶಿಸುವ) ಅಧಿಕಾರ ಚಲಾಯಿಸಬಹುದು. ದೂರು ನೀಡಿದ ಬಳಿಕ ಎಫ್ಐಆರ್ ದಾಖಲಿಸಿಲ್ಲ ಎಂಬ ಕುರಿತಂತೆ ಅರ್ಜಿ ಸಲ್ಲಿಕೆಯಾದಾರೆ ಅದನ್ನು 30 ದಿನಗಳಲ್ಲಿ ಮ್ಯಾಜಿಸ್ಟ್ರೇಟ್ ಇತ್ಯರ್ಥಪಡಿಸುವುದು. ಆರೋಪಿಯ ಬಂಧನದ ಅವಧಿ ವಿಸ್ತರಿಸುವಂತೆ ತನಿಖಾಧಿಕಾರಿಯು ಕೋರಿದ ಸಂದರ್ಭದಲ್ಲಿ ಮ್ಯಾಜಿಸ್ಟ್ರೇಟ್ ತನಿಖೆಯ ಸ್ಥಿತಿಗತಿ ಕುರಿತು ವಿಚಾರಿಸುವುದು ಎಂದೂ ಹೇಳಿದೆ.

ಪುನರಾವರ್ತಿತ ಸಾಕ್ಷ್ಯಗಳ ಕಡಿಮೆ ಮಾಡಿ: ಯಾವುದೇ ಒಬ್ಬ ಸಾಕ್ಷಿದಾರ ನಿರ್ದಿಷ್ಟ ವಿಷಯವಾಗಿ ತನ್ನ ಹೇಳಿಕೆಯಲ್ಲಿ ಅಚಲವಾಗಿದ್ದರೆ ಹಾಗೂ ಆ ಸಾಕ್ಷ್ಯ ಸ್ಪಷ್ಟವಾಗಿದ್ದರೆ ಅದೇ ವಿಚಾರವಾಗಿ ಪುನರಾವರ್ತಿತ ಹೇಳಿಕೆಗಳನ್ನು ನೀಡುವಂತಹ ಸಾಕ್ಷಿಗಳನ್ನು ಕಡಿಮೆ ಮಾಡಬೇಕು. ತ್ವರಿತ ವಿಚಾರಣೆಯ ನಿಟ್ಟಿನಲ್ಲಿ ಈ ಅಂಶ ಪರಿಗಣಿಸಬೇಕೆಂದು ಉಚ್ಛ ನ್ಯಾಯಾಲಯ ಸಲಹೆ ನೀಡಿದೆ.

ಅಗತ್ಯ ತರಬೇತಿ ನೀಡಿ: ತನಿಖೆ ಪರಿಣಾಮಕಾರಿಯಾಗಿ ನಡೆಸಲು ಕಾನೂನು ಸುವ್ಯವಸ್ಥೆ ತಂಡ ಹೊರತುಪಡಿಸಿ, ತನಿಖೆಗೆಂದು ಪ್ರತ್ಯೇಕ ವಿಭಾಗ ಸ್ಥಾಪಿಸಬೇಕು ಮತ್ತು ಅಂತಹ ಪೊಲೀಸರಿಗೆ ಎಲ್ಲ ಅಗತ್ಯ ತರಬೇತಿ ನೀಡಬೇಕು. ವಿಶೇಷವಾಗಿ ಹವಾಲಾ ಹಣ ವರ್ಗಾವಣೆ, ಭ್ರಷ್ಟಾಚಾರ ಮತ್ತು ಸೈಬರ್ ಕ್ರೈಂಗಳ ತನಿಖೆಗೆ ತಾಂತ್ರಿಕ ತರಬೇತಿ ನೀಡಬೇಕೆಂದೂ ನ್ಯಾಯ ಪೀಠ ತಿಳಿಸಿದೆ.

ವಿಳಂಬವಾದರೆ ಕ್ರಮಕ್ಕೂ ಅವಕಾಶ: ಸೂಕ್ತ ಕಾರಣಗಳಿಲ್ಲದೇ, ತ್ವರಿತಗತಿ ಅಥವಾ ಕಾಲಮಿತಿಯಲ್ಲಿ ತನಿಖೆ ಪೂರ್ಣಗೊಳಿಸದೇ ಇದ್ದಾಗ ತನಿಖಾಧಿಕಾರಿ ವಿರುದ್ಧ ದುರ್ನಡತೆ ಆಧಾರದಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 20ರ ಉಪಬಂಧಗಳ ಅಡಿ ಮೇಲಧಿಕಾರಿಗಳು ಕ್ರಮ ಜರುಗಿಸಬೇಕು. 1943ರ ಪೊಲೀಸ್ ರೆಗ್ಯುಲೇಷನ್ ಬೆಂಗಾಳದ ನಿಯಮಾವಳಿಗಳಂತೆಯೇ ರಾಜ್ಯದಲ್ಲಿಯೂ ತನಿಖೆಯನ್ನು ಪರಿಣಾಮಕಾರಿಯಾಗಿ ನಡೆಸಲು ಸೂಕ್ತ ನಿಯಮಗಳನ್ನು ರೂಪಿಸುವ ಕುರಿತಂತೆ ಸಂಬಂಧಪಟ್ಟ ಪ್ರಾಧಿಕಾರಿಗಳು ಪರಿಗಣಿಸಬಹುದು ಎಂದು ಹೈಕೋರ್ಟ್​ ಹೇಳಿದೆ.

ಸಾರ್ವಜನಿಕ ಕ್ಷೇತ್ರದ ಪ್ರಭಾವಿ ವ್ಯಕ್ತಿಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸಿಆರ್‌ಪಿಸಿ ಸೆಕ್ಷನ್‌ 164 (ತಪ್ಪೊಪ್ಪಿಗೆ ಹೇಳಿಕೆಗಳನ್ನು ದಾಖಲಿಸುವುದು)ನ್ನು ಆಗಾಗ್ಗೆ ಬಳಕೆ ಮಾಡಬೇಕು. ತನಿಖೆ ಮತ್ತು ವಿಚಾರಣೆ ವಿಳಂಬವಾದಂತೆ ಸಾಕ್ಷಿಗಳಲ್ಲಿ ಆತಂಕ ಮನೆಮಾಡುವುದನ್ನು ತಪ್ಪಿಸಲು ಸಾಕ್ಷಿ ಸಂರಕ್ಷಣಾ ಯೋಜನೆ ಅಭಿವೃದ್ಧಿಪಡಿಸುವುದು ಎಂದು ಸಲಹೆ ನೀಡಿದೆ.

ಇದನ್ನೂ ಓದಿ: ಕೆಪಿಎಸ್​ಸಿ ನೇಮಕಾತಿಯಲ್ಲಿ ವಿಳಂಬ : ಮಾಜಿ ಸಚಿವ ಸುರೇಶ್‌ ಕುಮಾರ್‌ ವಿನೂತನ ಪ್ರತಿಭಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.