ಬೆಂಗಳೂರು: ಕೊರೊನಾ ಅಟ್ಟಹಾಸದ ನಡುವೆಯೂ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ರಾಜ್ಯದ 15 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ.
- ಪವನ್ ಕುಮಾರ್ ಎಂ. - ಹೆಚ್ಚುವರಿ ಆಯುಕ್ತ (ಜಾರಿ), ವಾಣಿಜ್ಯ ತೆರಿಗೆ ಇಲಾಖೆ.
- ಬಿ.ಆರ್.ಮಮತಾ- ವ್ಯವಸ್ಥಾಪಕ ನಿರ್ದೇಶಕಿ, ಮೈಸೂರ್ ಶುಗರ್ ಕಂಪೆನಿ, ಬೆಂಗಳೂರು.
- ಪೊಮ್ಮಲ ಸುನಿಲ್ ಕುಮಾರ್ - ವಿಶೇಷ ಆಯುಕ್ತ ( ಐಟಿ ಮತ್ತು ಹಣಕಾಸು), ಬೆಂಗಳೂರು.
- ಗಂಗಾಬಾಯಿ ರಮೇಶ್ - ನಿರ್ದೇಶಕಿ, ಅಟಲ್ ಜನಸೇವಾ ಕೇಂದ್ರ, ಬೆಂಗಳೂರು.
- ಎಲ್.ಚಂದ್ರಶೇಖರ್ ನಾಯಕ್ - ಉಪ ಕಾರ್ಯದರ್ಶಿ (ಬಜೆಟ್ ಮತ್ತು ಸಂಪನ್ಮೂ), ಹಣಕಾಸು ಇಲಾಖೆ.
- ಡಾ. ಎಂ.ಟಿ.ರೇಜು- ನಿರ್ದೇಶಕ, ರಾಷ್ಟ್ರೀಯ ಜೀವನೋಪಾಯ ಮಿಷನ್.
- ಎಸ್. ಹೊನ್ನಾಂಬ- ಯೋಜನಾ ನಿರ್ದೇಶಕಿ, ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಬೆಂಗಳೂರು.
- ಎಂ ದೀಪಾ - ರಾಜ್ಯ ಯೋಜನಾ ನಿರ್ದೇಶಕಿ, ಸರ್ವ ಶಿಕ್ಷಣ ಅಭಿಯಾನ.
- ಎಸ್. ಜಿಯಾವುಲ್ಲಾ- ರಿಜಿಸ್ಟ್ರಾರ್, ಸಹಕಾರ ಸೊಸೈಟಿಗಳು.
- ಎಸ್. ವಿಕಾಸ್ ಕಿಶೋರ್ - ಜಿಲ್ಲಾಧಿಕಾರಿ, ಕೊಪ್ಪಳ.
- ಎಂ.ಜಿ.ಹಿರೇಮಠ- ಜಿಲ್ಲಾಧಿಕಾರಿ, ಬೆಳಗಾವಿ.
- ಪಿ.ವಸಂತಕುಮಾರ್ - ಆಯುಕ್ತ, ಬಿಎಂಆರ್ಡಿಎ.
- ಟಿ.ಭೂಬಾಲನ್ - ಸಿಇಒ, ಜಿ.ಪಂ.ಬಾಗಲಕೋಟೆ.
- ಎಂ.ಸುಂದರೇಶ್ ಬಾಬು - ಜಿಲ್ಲಾಧಿಕಾರಿ, ಗದಗ.
- ನಿತೇಶ್ ಪಾಟೀಲ್ - ಜಿಲ್ಲಾಧಿಕಾರಿ, ಧಾರವಾಡ.