ETV Bharat / state

ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರಪೂರ ತೆರಿಗೆ: ಆರು ತಿಂಗಳಲ್ಲಿ 47 ಸಾವಿರ ಕೋಟಿ ರೂ‌. ಸಂಗ್ರಹ!

ರಾಜ್ಯ ಸರ್ಕಾರ ಮೊದಲಾರ್ಧ ವರ್ಷದಲ್ಲಿ ನಿರೀಕ್ಷೆಗೂ ಮೀರಿ ಜಿಎಸ್​ಟಿ ಮತ್ತು ವಾಣಿಜ್ಯ ತೆರಿಗೆ ಸಂಗ್ರಹಿಸಿದೆ. ಈ ಬಾರಿ ಬಜೆಟ್ ಅಂದಾಜಿಗಿಂತಲೂ ಹೆಚ್ಚು ವಾಣಿಜ್ಯ ತೆರಿಗೆ ಸಂಗ್ರಹವಾಗಲಿದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ.

ತೆರಿಗೆ
ತೆರಿಗೆ
author img

By

Published : Oct 24, 2022, 8:42 PM IST

ಬೆಂಗಳೂರು: ರಾಜ್ಯ ಸರ್ಕಾರ ತನ್ನ ಪ್ರಮುಖ ತೆರಿಗೆ‌ ಮೂಲವಾದ ವಾಣಿಜ್ಯ ತೆರಿಗೆ ಮೂಲಕ ಭರ್ಜರಿ ಆದಾಯ ಸಂಗ್ರಹ ಮಾಡಿದೆ. ಕಳೆದ ಆರು ತಿಂಗಳಲ್ಲಿ 47,435.05 ಕೋಟಿ ರೂ‌. ವಾಣಿಜ್ಯ ತೆರಿಗೆ ಸಂಗ್ರಹಿಸಿದೆ.

2022-23 ಸಾಲಿನಲ್ಲಿ ರಾಜ್ಯ ಸರ್ಕಾರ ನಿರೀಕ್ಷೆಗಿಂತ ಹೆಚ್ಚಿನ ಆದಾಯ ಸಂಗ್ರಹ ಮಾಡುತ್ತಿದೆ. ಕೋವಿಡ್ ಲಾಕ್ ಡೌನ್ ಏಟಿನ ಬಳಿಕ ಆರ್ಥಿಕತೆ ಚೇತರಿಸಿಕೊಂಡಿದ್ದು, ತೆರಿಗೆ ಸಂಗ್ರಹದಲ್ಲಿ ಉತ್ತಮ ಪ್ರಗತಿ ಕಂಡಿದೆ. ಅದರಲ್ಲೂ ಪ್ರಮುಖ ಆದಾಯ ಮೂಲವಾದ ವಾಣಿಜ್ಯ ತೆರಿಗೆ ನಿರೀಕ್ಷೆಗಿಂತ ಭರಪೂರ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ. ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಬಂದಿದೆ.

ಜಿಎಸ್​ಟಿ ಹಾಗೂ ತೈಲ ಮೇಲಿನ ಮಾರಾಟ ತೆರಿಗೆ ಮೂಲಕ ರಾಜ್ಯ ಭರ್ಜರಿ ಆದಾಯ ಸಂಗ್ರಹ ಮಾಡಿದೆ. 2022-23 ಸಾಲಿನಲ್ಲಿ 77,010 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹಿಸುವ ಅಂದಾಜು ಮಾಡಲಾಗಿದೆ. ಮೊದಲಾರ್ಧ ವರ್ಷದಲ್ಲಿ ರಾಜ್ಯ ಸರ್ಕಾರ ಉತ್ತಮ ಆದಾಯ ಸಂಗ್ರಹಿಸಿದೆ. ಕಳೆದ ಬಾರಿಗಿಂತ ಈ ಬಾರಿ ಆರು ತಿಂಗಳಲ್ಲಿ 2,724.68 ಕೋಟಿ ರೂ. ಹೆಚ್ಚುವರಿ ವಾಣಿಜ್ಯ ತೆರಿಗೆ ಸಂಗ್ರಹ ಮಾಡಲಾಗಿದೆ.

ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರಪೂರ ತೆರಿಗೆ
ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರಪೂರ ತೆರಿಗೆ

ನಿರೀಕ್ಷೆ ಮೀರಿ ಜಿಎಸ್​ಟಿ ಸಂಗ್ರಹ: ರಾಜ್ಯ ಸರ್ಕಾರ ಈ ಬಾರಿ ನಿರೀಕ್ಷೆಗಿಂತಲೂ ಹೆಚ್ಚಿಗೆ ಜಿಎಸ್​​ಟಿ ಸಂಗ್ರಹ ಮಾಡುತ್ತಿದೆ. ಈ ಆರ್ಥಿಕ ವರ್ಷದಲ್ಲಿ 53,220 ಕೋಟಿ ರೂ. ಜಿಎಸ್​​ಟಿ ಸಂಗ್ರಹ ನಿರೀಕ್ಷೆ ಮಾಡಲಾಗಿದೆ. ಮೊದಲಾರ್ಧ ವರ್ಷದಲ್ಲಿ 37,211.53 ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿದೆ.

2021-22ನೇ ಸಾಲಿನಲ್ಲಿ ಈ ಅವಧಿಯಲ್ಲಿ 34,457.71 ಕೋಟಿ ಜಿಎಸ್​ಟಿ ಸಂಗ್ರಹ ಮಾಡಲಾಗಿತ್ತು. ಈ ವರ್ಷ 2,759.82 ಕೋಟಿ ರೂ‌. ಹೆಚ್ಚುವರಿ ಜಿಎಸ್​ಟಿ ಸಂಗ್ರಹ ಮಾಡಲಾಗಿದೆ. ಇನ್ನುಳಿದ ಆರು ತಿಂಗಳಲ್ಲಿ ಜಿಎಸ್​​ಟಿ ಸಂಗ್ರಹದಲ್ಲಿ ಗಣನೀಯ ಏರಿಕೆ ಕಾಣಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬಜೆಟ್ ಅಂದಾಜನ್ನು ಮೀರಿ ಈ ಬಾರಿ ಜಿಎಸ್​​ಟಿ ಸಂಗ್ರಹವಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯಾವ ತಿಂಗಳು ಎಷ್ಟು ಜಿಎಸ್​ಟಿ ಸಂಗ್ರಹ (ಕೋಟಿಗಳಲ್ಲಿ):

ತಿಂಗಳುಏಪ್ರಿಲ್ಮೇಜೂನ್ಜುಲೈಆಗಸ್ಟ್ಸೆಪ್ಟಂಬರ್
ಜಿಎಸ್​ಟಿ5,205.6012,814.715,229.474,721.384,627.454,612.92

ಈವರೆಗೆ ಸಂಗ್ರಹಿಸಿದ ತೈಲ ಮೇಲಿನ ಮಾರಾಟ ತೆರಿಗೆ ಏನು?: ಈವರೆಗೆ ತೈಲ ಮೇಲಿನ‌ ಮಾರಾಟ ತೆರಿಗೆ ರೂಪದಲ್ಲಿ ರಾಜ್ಯ ಸರ್ಕಾರ ಆರು ತಿಂಗಳಲ್ಲಿ ಬರೋಬ್ಬರಿ 9,540.40 ಕೋಟಿ ರೂ. ಆದಾಯ ಸಂಗ್ರಹಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 9,723.37 ಕೋಟಿ ರೂ., ಮಾರಾಟ ತೆರಿಗೆ ಸಂಗ್ರಹ ಮಾಡಲಾಗಿತ್ತು. ಈ ಆರ್ಥಿಕ ವರ್ಷದಲ್ಲಿ 17,640 ಕೋಟಿ ರೂ. ಮಾರಾಟ ತೆರಿಗೆ ಸಂಗ್ರಹ ಅಂದಾಜಿಸಲಾಗಿದೆ. ಕಳೆದ ಆರು ತಿಂಗಳಲ್ಲಿ ರಾಜ್ಯ ಸರ್ಕಾರ ಮಾರಾಟ ತೆರಿಗೆ ರೂಪದಲ್ಲಿ ಭರ್ಜರಿ ತೆರಿಗೆ ಸಂಗ್ರಹ ಮಾಡಿದೆ.

ತೈಲ ಮೇಲಿನ ಮಾರಾಟ ತೆರಿಗೆ ಯಾವ ತಿಂಗಳಲ್ಲಿ ಎಷ್ಟು?:

ತಿಂಗಳುಏಪ್ರಿಲ್ಮೇಜೂನ್ಜುಲೈಆಗಸ್ಟ್ಸೆಪ್ಟಂಬರ್
ಮಾರಾಟ ತೆರಿಗೆ1,602.641,635.321,689.181,645.751,462.021,505.59

ಒಟ್ಟು ವಾಣಿಜ್ಯ ತೆರಿಗೆ ಸಂಗ್ರಹ ಏನು?: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮೊದಲಾರ್ಧ ವರ್ಷದಲ್ಲಿ ರಾಜ್ಯ ಸರ್ಕಾರ ಜಿಎಸ್​ಟಿ, ಮಾರಾಟ ತೆರಿಗೆ ಹಾಗೂ ವೃತ್ತಿ ತೆರಿಗೆ ರೂಪದಲ್ಲಿ ಬರೋಬ್ಬರಿ 47,435.05 ಕೋಟಿ ರೂ‌. ಸಂಗ್ರಹ ಮಾಡಿದೆ. ಕಳೆದ ಬಾರಿ ಇದೇ ಅವಧಿಗೆ ಒಟ್ಟು 44,710.37 ಕೋಟಿ ರೂ. ತೆರಿಗೆ ಸಂಗ್ರಹ ಮಾಡಲಾಗಿತ್ತು. ಆ ಮೂಲಕ 2,724.68 ಕೋಟಿ ರೂ. ಹೆಚ್ಚುವರಿ ವಾಣಿಜ್ಯ ತೆರಿಗೆ ಸಂಗ್ರಹ ಮಾಡಲಾಗಿದೆ. ಈ ಬಾರಿ ಬಜೆಟ್ ಅಂದಾಜಿಗಿಂತಲೂ ಹೆಚ್ಚು ವಾಣಿಜ್ಯ ತೆರಿಗೆ ಸಂಗ್ರಹವಾಗಲಿದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರವಾಗಿದೆ.

ಇದನ್ನೂ ಓದಿ: ಸೆಪ್ಟೆಂಬರ್ 13 ಚಿತ್ರಕ್ಕೆ ಆರು ತಿಂಗಳ ತೆರಿಗೆ ವಿನಾಯಿತಿ ನೀಡಿದ ಸರ್ಕಾರ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.