ಬೆಂಗಳೂರು: ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಅನ್ ಲಾಕ್ ಸುಳಿವು ದೊರೆಯುತ್ತಿದ್ದಂತೆ ಸರ್ಕಾರ 12 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚೆನ್ನಣ್ಣನವರ್ ಅವರನ್ನು ಬೆಂಗಳೂರು ಸಿಐಡಿ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.
- ಯಾರು ಯಾವ ಜಿಲ್ಲೆಗೆ ವರ್ಗಾವಣೆ?:
- ಬೆಂಗಳೂರು ಗ್ರಾಮಾಂತರ ಎಸ್‌ಪಿಯಾಗಿದ್ದ ರವಿ ಡಿ ಚನ್ನಣ್ಣನವರ್ ಸಿಐಡಿ ಎಸ್‌ಪಿಯಾಗಿ ಬೆಂಗಳೂರಿಗೆ ವರ್ಗ
- ಕರಾವಳಿ ಭದ್ರತಾ ಪಡೆ ಎಸ್‌ಪಿ ಆರ್ ಚೇತನ್ ಅವರು ಮೈಸೂರು ಎಸ್‌ಪಿ ಆಗಿ ವರ್ಗಾವಣೆ
- ಕೋಲಾರ ಜಿಲ್ಲೆಯ ಎಸ್‌ಪಿ ಕಾರ್ತಿಕ್ ರೆಡ್ಡಿ - ಬೆಂಗಳೂರು ಎಸ್‌ಪಿಯಾಗಿ (ವೈರ್‌ಲೆಸ್) ವರ್ಗ
- ಬೆಂಗಳೂರಿನ ಅಪರಾಧ ತನಿಖಾ ಇಲಾಖೆಯ ರಾಹುಲ್ ಕುಮಾರ್ ಶಹಾಪೂರ್ವದ್ ಅವರು ತುಮಕೂರು ಎಸ್‌ಪಿ
- ದಾವಣಗೆರೆ ಜಿಲ್ಲೆಯ ಎಸ್‌ಪಿ ಹನುಮಂತರಾಯ ಅವರನ್ನು ಹಾವೇರಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ
- ಮೈಸೂರಿನ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ. ಎ.ಎನ್, ಪ್ರಕಾಶ್ ಗೌಡ ಅವರು ಬೆಂಗಳೂರು ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗ
- ಹಾವೇರಿ ಜಿಲ್ಲೆಯ ಎಸ್‌ಪಿ ಕೆ.ಜಿ. ದೇವರಾಜು ಅವರು ಬೆಂಗಳೂರಿನ ಸಿಐಡಿ ಎಸ್ಪಿಯಾಗಿ ವರ್ಗಾವಣೆ
- ಮೈಸೂರಿನ ಎಸ್‌ಪಿ ಸಿ.ಬಿ. ರಿಷ್ಯಂತ್ ಅವರು ದಾವಣಗೆರೆ ಜಿಲ್ಲೆಗೆ ವರ್ಗ
- ಕಲಬುರಗಿ ಜಿಲ್ಲೆಯ ಡಿಸಿಪಿ ದೆಕ್ಕ ಕಿಶೋರ್ ಬಾಬು ಅವರು ಕೋಲಾರ ಜಿಲ್ಲೆಗೆ ಎಸ್‌ಪಿಯಾಗಿ ವರ್ಗ
- ತುಮಕೂರಿನ ಎಸ್‌ಪಿ ಡಾ. ಕೋನಾ ವಂಶಿ ಕೃಷ್ಣ ಅವರು ಬೆಂಗಳೂರು ಗ್ರಾಮಾಂತರ ಎಸ್‌ಪಿ
- ಬೆಂಗಳೂರಿನ ಆಂತರಿಕ ಭದ್ರತಾ ಇಲಾಖೆಯ ಎಸ್ಪಿ ಪ್ರದೀಪ್ ಗುಂಟಿ ಮೈಸೂರು ನಗರದ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ವರ್ಗ
- ಬೆಂಗಳೂರಿನ (ವೈರ್‌ಲೆಸ್) ಎಸ್‌ಪಿ ಅಡ್ಡೂರು ಶ್ರೀನಿವಾಸುಲು ಅವರು ಕಲಬುರಗಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಆಗಿದ್ದಾರೆ.