ETV Bharat / state

ಬೆಡ್, ಅಗತ್ಯ ಮೆಡಿಸಿನ್ ಲಭ್ಯತೆ ವಿವರ ಕಡ್ಡಾಯವಾಗಿ ಪ್ರದರ್ಶಿಸಿ: ಆಸ್ಪತ್ರೆಗಳಿಗೆ ಸರ್ಕಾರ ಆದೇಶ

ಡಿಸ್​​ ಪ್ಲೇ ಬೋರ್ಡ್ ನಲ್ಲಿ ಆಸ್ಪತ್ರೆಯ ಹೆಸರು, ಒಟ್ಟು ಬೆಡ್ ಗಳ ಸಂಖ್ಯೆ, ಬಿಬಿಎಂಪಿಯಿಂದ ರೆಫರ್ ಮಾಡಲಾದ ಕೋವಿಡ್ ಸೋಂಕಿತರಿಗೆ ಹಂಚಲಾದ ಬೆಡ್​​​​​​​ಗಳ ವಿವರಗಳನ್ನು ನೀಡಬೇಕು.

Government
Government
author img

By

Published : May 1, 2021, 9:56 PM IST

ಬೆಂಗಳೂರು: ಎಲ್ಲ ಆಸ್ಪತ್ರೆಗಳು ಬೆಡ್ ಲಭ್ಯತೆ, ಅಗತ್ಯ ಮೆಡಿಸಿನ್ ಲಭ್ಯತೆ ವಿವರವನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಸರ್ಕಾರ ಆದೇಶಿಸಿದೆ.

ಈ ಸಂಬಂಧ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನಲ್ಲಿ ಅನೇಕ ಕೋವಿಡ್ ಸೋಂಕಿತರಿಗೆ ಬೆಡ್ ಸಿಗದೇ ಸಮಸ್ಯೆ ಎದುರಾಗುತ್ತಿದೆ.

ಬಿಬಿಎಂಪಿ ಕೇಂದ್ರೀಕೃತ ಹಂಚಿಕೆ ವ್ಯವಸ್ಥೆಯಡಿ ಸೋಂಕಿತರಿಗೆ ಬೆಡ್ ಹಂಚಿಕೆ ಮಾಡಿದರೂ, ಬೆಡ್ ಸಿಗುತ್ತಿಲ್ಲ. ಈ ಹಿನ್ನೆಲೆ ಸರ್ಕಾರ ಎಲ್ಲ ಆಸ್ಪತ್ರೆಗಳ ರಿಸೆಪ್ಷನ್ ಕೌಂಟರ್ ನಲ್ಲಿ ಬೆಡ್ ಲಭ್ಯತೆಯ ಬೋರ್ಡ್, ಅಗತ್ಯ ಮೆಡಿಸಿನ್​​​​ಗಳ ಲಭ್ಯತೆಯ ವಿವರವನ್ನು ಪ್ರದರ್ಶಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ಡಿಸ್​​​​ಪ್ಲೇ ಬೋರ್ಡ್​​​ನಲ್ಲಿ ಆಸ್ಪತ್ರೆಯ ಹೆಸರು, ಒಟ್ಟು ಬೆಡ್​​​ಗಳ ಸಂಖ್ಯೆ, ಬಿಬಿಎಂಪಿಯಿಂದ ರೆಫರ್ ಮಾಡಲಾದ ಕೋವಿಡ್ ಸೋಂಕಿತರಿಗೆ ಹಂಚಲಾದ ಬೆಡ್​​​​ಗಳ ವಿವರಗಳನ್ನು ನೀಡಬೇಕು. ಜನರಲ್ ವಾರ್ಡ್ ನಲ್ಲಿರುವ ಐಸೋಲೇಷನ್ ಬೆಡ್, ಐಸಿಯು ಬೆಡ್, ವೆಂಟಿಲೇಟರ್ ಹೊಂದಿದ ಐಸಿಯು ಬೆಡ್, ಹೈ ಫ್ಲೋ ಆಕ್ಸಿಜನ್ ಬೆಡ್ ಗಳ ವಿವರವನ್ನು ಪ್ರದರ್ಶಿಸಬೇಕು.

ಎಲ್ಲ ಜಿಲ್ಲಾ ಆಸ್ಪತ್ರಗಳಲ್ಲೂ ಈ ಮಾಹಿತಿಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಸೂಚಿಸಲಾಗಿದೆ. ಆದೇಶ ಪಾಲಿಸದೇ ಇರುವ ಆಸ್ಪತ್ರೆಗಳ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.