ಬೆಂಗಳೂರು: ರಾಜ್ಯ ವ್ಯಾಪ್ತಿ ಕೋವಿಡ್-19 ಸೋಂಕು ಹಾಗೂ ಓಮಿಕ್ರಾನ್ ಮೈರಾಣು ಹರಡುವಿಕೆಯನ್ನು ನಿಯಂತ್ರಿಸುವ ಸಂಬಂಧ ವಿಶೇಷ ಕಾರ್ಯತಂಡ ರಚಿಸಿ ಆದೇಶ ಹೊರಡಿಸಲಾಗಿದೆ.
ಈ ಸಂಬಂಧ ಆದೇಶ ಹೊರಡಿಸಿರುವ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ 11 ಕಾರ್ಯಪಡೆಯನ್ನು ರಚಿಸಿದ್ದಾರೆ. ಈ ಕಾರ್ಯತಂಡ ಅವಶ್ಯವಿರುವ ನಿರ್ವಹಣಾ ಕ್ರಮಗಳ ಮೇಲ್ವಿಚಾರಣೆ ಹಾಗೂ ತಕ್ಷಣಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಬ್ದಾರಿ ನೀಡಲಾಗಿದೆ.
ಕಾರ್ಯತಂಡ ವಿವರ ಇಂತಿದೆ:
- ಕೋವಿಡ್ ವಾರ್ ರೂಂ- ಮುನಿಷ್ ಮೌದ್ಗಿಲ್
- ILI, SARI ಪ್ರಕರಣಗಳನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸುವುದು- ವಿನೂತ್ ಪ್ರಿಯಾ
- ಸ್ಯಾಂಪಲ್ ಕಲೆಕ್ಷನ್, ಟೆಸ್ಟಿಂಗ್, ಲ್ಯಾಬ್ ಬಳಕೆ- ಶಾಲಿನಿ ರಜನೀಶ್
- ಹೋಂ ಐಸೋಲೇಷನ್, ಕಂಟೈನ್ಮೆಂಟ್ ಝೋನ್- ಪಂಕಜ್ ಕುಮಾರ್ ಪಾಂಡೆ
- ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್ಗಳ ಚಲನವಲನ ಮೇಲ್ವಿಚಾರಣೆ- ಪ್ರತಾಪ್ ರೆಡ್ಡಿ ಮತ್ತು ಎನ್.ಶಿವಶಂಕರ್
- ಬಳ್ಳಾರಿಯಲ್ಲಿ ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್ಗಳ ಚಲನವಲನ ಮೇಲ್ವಿಚಾರಣೆ- ಪವನ್ ಕುಮಾರ್
- ಟೆಲಿ ಕೌನ್ಸಿಲಿಂಗ್, ಟೆಲಿ ಟ್ರಯಾಜಿಂಗ್, ಹೆಲ್ಪ್ ಲೈನ್- ವಿಪಿನ್ ಸಿಂಗ್, ವಿಸ್ವಜಿತ್ ಮಿಶ್ರ
- ಖಾಸಗಿ, ಎನ್ಜಿಒ, ಕಾರ್ಪೊರೇಟ್ ವಲಯಗಳ ಜೊತೆ ಸಮನ್ವಯತೆ- ಉಮಾ ಮಹಾದೇವನ್
- ಕೋವಿಡ್ನಿಂದ ಪೋಷಕರನ್ನು ಕಳೆದು ಅನಾಥರಾದ ಮಕ್ಕಳಿಗೆ ಸೌಕರ್ಯ ಕಲ್ಪಿಸುವಿಕೆ- ಪಲ್ಲವಿ ಆಕೃತಿ
- ಅಂತಾರಾಷ್ಟ್ರೀಯ ಸಮುದಾಯ, ಸಂಸ್ಥೆ ಜೊತೆ ಸಮನ್ವಯತೆ ಸಾಧಿಸಿ ಸಹಕಾರ- ಪೊನ್ನುರಾಜ್
- ಕೋವಿಡ್ ಸಂಬಂಧಿತ ಪರಿಕರಣಗಳನ್ನು ಆಮದು ಮಾಡುವ ನೋಡಲ್ ಪ್ರಾಧಿಕಾರ- ಉಮಾ ಮಹಾದೇವನ್, ಪ್ರಿಯಾಂಕ್ ಮೇರಿ ಫ್ರಾನ್ಸಿಸ್
ಇದನ್ನೂ ಓದಿ:ಮಾಲ್, ಸಿನಿಮಾ ಮಂದಿರಕ್ಕೆ ಶೇ.50ರಷ್ಟು ಮಿತಿ... ಸರ್ಕಾರದ ಕೈಗೊಂಡ ಕ್ರಮಗಳ ವಿವರ ಇಲ್ಲಿದೆ