ETV Bharat / state

ಕರ್ನಾಟಕ ಬಲಿಜ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪಿಸಿ ಸರ್ಕಾರ ಆದೇಶ - ಕರ್ನಾಟಕ ಬಲಿಜ ಸಮುದಾಯದ ಅಭಿವೃದ್ಧಿ ನಿಗಮ

ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯ ಬಿಜೆಪಿ ಸರ್ಕಾರ - ಕರ್ನಾಟಕ ಬಲಿಜ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ - ಎರಡು ದಿನಗಳ ಹಿಂದೆ ಹಲವು ನಿಗಮ, ಮಂಡಳಿಗಳಿಗೆ ನೇಮಕ ಮಾಡಿದ್ದ ರಾಜ್ಯ ಸರ್ಕಾರ

Karnataka government announced balija community development authority

author img

By

Published : Mar 11, 2023, 7:36 AM IST

ಬೆಂಗಳೂರು: ಕರ್ನಾಟಕ ಬಲಿಜ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಿ ಸರ್ಕಾರ ಆದೇಶ ಹೊರಡಿಸಿದೆ. ಆ ಮೂಲಕ ಬಲಿಜ ಸಮುದಾಯದ ಬಹು ವರ್ಷಗಳ‌ ಬೇಡಿಕೆಯನ್ನು ಬೊಮ್ಮಾಯಿ‌ ಸರ್ಕಾರ ಈಡೇರಿಸಿದೆ. ರಾಜ್ಯ ವಿಧಾನಸಭಾ ಚುನಾವಣೆ ಸಮಿಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಪ್ರಬಲ ಬಲಿಜ ಸಮುದಾಯದ ಬೇಡಿಕೆಯನ್ನು ಈಡೇರಿಸಿದೆ.

ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪವರ್ಗ-3ಎ ರಲ್ಲಿ ಔದ್ಯೋಗಿಕ ಮೀಸಲಾತಿ ಹಾಗೂ ಪ್ರವರ್ಗ-2ಎ ರಲ್ಲಿ ಶೈಕ್ಷಣಿಕ ಮೀಸಲಾತಿ ಕಲ್ಪಿಸಿ ಆದೇಶಿಸಿರುವ ಬಲಿಜ, ಬಲಜಿಗ/ಬಣಜಿಗ/ಗೌಡಬಣಜಿಗ, ನಾಯ್ಡು, ತೆಲಗ ಬಲಿಜ/ತೆಲಗ ಬಣಜಿಗ, ಶೆಟ್ಟಿ ಬಲಿಜ/ಶೆಟ್ಟಿ ಬಣಜಿಗ/ಬಣಜಿಗಶೆಟ್ಟಿ, ದಾಸರ ಬಲಿಜ/ದಾಸರ ಬಲಜಿಗ/ದಾಸರ ಬಣಜಿಗ, ದಾಸ ಬಣಜಿಗ, ಕಸ್ಟನ್, ಮುನ್ನೂರ/ಮುನ್ನಾರ/ಮುನ್ನೂ‌ರ್ ಕಾಪು ಬಳೆಗಾರ/ಬಳೆ ಬಣಜಿಗ/ಬಳೆ ಬಲಜಿಗ, ಬಳೆ ಛಟ್ಟಿ, ಬಣಗಾರ, ರಡ್ಡಿ (ಬಲಿಜ), ಜನಪ್ಪನ್, ಉಪ್ಪಾರ(ಬಲಿಜ), ತುಲೇರು ಜಾತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ "ಕರ್ನಾಟಕ ಬಲಿಜ ಸಮುದಾಯ ಅಭಿವೃದ್ಧಿ ನಿಗಮ"ವನ್ನು ಸ್ಥಾಪಿಸಿ ಆದೇಶಿಸಲಾಗಿದೆ.

ಬಲಿಜ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡಬೇಕು ಎಂದು ಇದೇ ಜನವರಿಯಲ್ಲಿ ಬಲಿಜ ಸಮುದಾಯದವರು ಬೆಂಗಳೂರಲ್ಲಿ ಪ್ರತಿಭಟನೆ ನಡೆಸಿದ್ದರು. ಜೊತೆಗೆ ನಿಗಮ ಸ್ಥಾಪಿಸುವಂತೆ ಆಗ್ರಹಿಸಿದ್ದರು. ಬಲಿಜ ಸಮುದಾಯಕ್ಕೆ ಸೇರಿರುವ 40 ಲಕ್ಷಕ್ಕೂ ಹೆಚ್ಚು ಜನ ರಾಜ್ಯದಲ್ಲಿದ್ದಾರೆ. ಕೃಷಿ, ಕೂಲಿ, ಹೈನುಗಾರಿಕೆ, ಬಳೆ, ಹೂವು ಹಾಗೂ ದ್ರವ್ಯಗಳ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಆರ್ಥಿಕ, ಸಾಮಾಜಿಕವಾಗಿ ಸಾಕಷ್ಟು ಹಿಂದುಳಿದಿದ್ದಾರೆ. ಉದ್ಯೋಗ, ರಾಜಕೀಯ ಸೇರಿ ಎಲ್ಲ ಕ್ಷೇತ್ರಗಳಲ್ಲಿ 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದ್ದರು.

ಇದೀಗ ಬೊಮ್ಮಾಯಿ‌ ಸರ್ಕಾರ ಬಲಿಜ ಸಮುದಾಯದ ಪ್ರಮುಖ ಬೇಡಿಕೆಯಲ್ಲೊಂದಾದ ನಿಗಮವನ್ನು ರಚಿಸಿದೆ. ಆ ಮೂಲಕ ಬರುವ ಚುನಾವಣೆಯಲ್ಲಿ ಬಲಿಜ ಸಮುದಾಯದ ಮತ ಸೆಳೆಯಲು ಮುಂದಾಗಿದೆ.

ಇದನ್ನೂ ಓದಿ: ಐಎಂಎ ವಂಚನೆ ಪ್ರಕರಣ: ಕೆಎಎಸ್ ಅಧಿಕಾರಿ ಎಲ್ ಸಿ ನಾಗರಾಜ್ ರಾಜೀನಾಮೆ ಅಂಗೀಕಾರ

ಅಧಿಕಾರದ ಕೊನೆಯ ದಿನಗಳಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ, ಗುರುವಾರ ಸಹ ಹಲವು ನಿಗಮ, ಮಂಡಳಿಗಳಿಗೆ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಈ ನಿಗಮ, ಮಂಡಳಿಗಳಿಗೆ ನೇಮಕಗೊಂಡವರೆಲ್ಲರೂ ಬಸವರಾಜ ಬೊಮ್ಮಾಯಿವರ ತವರು ಜಿಲ್ಲೆ ಹಾವೇರಿಗೆ ಸೇರಿರುವುದು ವಿಶೇಷ ಎನ್ನಲಾಗಿತ್ತು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನಕ್ಕೆ ಒಳಪಟ್ಟ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮ, ಕರ್ನಾಟಕ ಮರಾಠ ಅಭಿವೃದ್ಧಿ ನಿಗಮ, ಸವಿತಾ ಸಮಾಜ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ/ಅರೆಅಲೆಮಾರಿ ಅಭಿವೃದ್ಧಿ ನಿಗಮ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ಒಟ್ಟು 11 ಜನ ನಿರ್ದೇಶಕರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿಫಾರಸಿನ ಮೇರೆಗೆ ನೇಮಕ ಮಾಡಿ ಆದೇಶ ಮಾಡಲಾಲಾಗಿತ್ತು. ಇದರ ಬೆನ್ನಲ್ಲೇ ಕರ್ನಾಟಕ ಬಲಿಜ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಿ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಬೊಮ್ಮಾಯಿ ತವರು ಪ್ರೀತಿ: ಅಧಿಕಾರದ ಕಡೆ ದಿನಗಳಲ್ಲಿ ನಿಗಮ, ಮಂಡಳಿಗೆ ಬೆಂಬಲಿಗರ ನೇಮಕ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.