ಬೆಂಗಳೂರು: ವಿಶ್ವ ಅಂತಾರಾಷ್ಟ್ರೀಯ ಯೋಗದ ದಿನದ ಅಂಗವಾಗಿ ಇಂದು ದೇಶದಾದ್ಯಂತ ಕೋವಿಡ್ ಲಸಿಕಾಭಿಯಾನ ಆಯೋಜಿಸಲಾಗಿತ್ತು. ಲಸಿಕಾಭಿಯಾನದಲ್ಲಿ 5-7 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿಯನ್ನ ಹೊಂದಿತ್ತು. ಆದರೆ, ಇಂದು ಅದನ್ನ ಮೀರಿ ಬರೋಬ್ಬರಿ 10,52,272 ಮಂದಿಗೆ ಲಸಿಕೆ ಹಾಕಲಾಗಿದೆ.
ಈ ದೊಡ್ಡ ಲಸಿಕಾ ಅಭಿಯಾನದಲ್ಲಿ ಕರ್ನಾಟಕವು ಇಲ್ಲಿ ತನಕ 1,95,37,428 ಜನರಿಗೆ ಕೋವಿಡ್ ಲಸಿಕೆ ನೀಡಿದೆ. ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ 44 ವರ್ಷದೊಳಗಿನ ಲಸಿಕಾ ಕಾರ್ಯಕ್ರಮದಲ್ಲಿ ಈವರೆಗೆ 43,89,820 ಮಂದಿಗೆ ಮೊದಲ ಡೋಸ್ ಅನ್ನು ನೀಡಲಾಗಿದ್ದರೆ, 34,871 ಮಂದಿಗೆ ಎರಡನೇ ಡೋಸ್ ನೀಡಲಾಗಿದೆ. ಮೊದಲ ಡೋಸ್ನಲ್ಲಿ ಆರೋಗ್ಯ ಕಾರ್ಯಕರ್ತರು 7,45,652 ಮಂದಿ, ಎರಡನೇ ಡೋಸ್ನಲ್ಲಿ 4,91,202 ಮಂದಿ ಪಡೆದಿದ್ದಾರೆ.
ಇನ್ನು ಮುಂಚೂಣಿ ಕಾರ್ಯಕರ್ತರಲ್ಲಿ 7,66,662 ಮಂದಿ ಮೊದಲ ಹಾಗೂ 2,38,515 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಹಿರಿಯ ನಾಗರಿಕರಲ್ಲಿ 1,03,33,184 ಮಂದಿ ಮೊದಲ ಡೋಸ್ ಪಡೆದರೆ, ಎರಡನೇ ಡೋಸ್ನಲ್ಲಿ 25,37,522 ಮಂದಿ ಪಡೆದಿದ್ದಾರೆ.
ಲಸಿಕಾ ಮಹಾ ಅಭಿಯಾನದಲ್ಲಿಂದು ಕರ್ನಾಟಕ ಎರಡನೇ ಸ್ಥಾನ: ಯೋಗ ದಿನದ ಲಸಿಕಾ ಮಹಾ ಅಭಿಯಾನದಲ್ಲಿ ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಮಧ್ಯಪ್ರದೇಶವಿದ್ದು 14,71,936 ಮಂದಿಗೆ ಲಸಿಕೆ ನೀಡಿದೆ. ಎರಡನೇ ಸ್ಥಾನದಲ್ಲಿರುವ ಕರ್ನಾಟಕ 10,36,523 ಹಾಗೂ ಮೂರನೇ ಸ್ಥಾನದಲ್ಲಿರುವ ಉತ್ತರ ಪ್ರದೇಶ 6,57,689 ಲಸಿಕೆ ನೀಡಿದೆ.