ಬೆಂಗಳೂರು: ರಾಜ್ಯದಲ್ಲಿಂದು 23,990 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 833 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 458 ಮಂದಿ ಡಿಸ್ಚಾರ್ಜ್ ಆಗಿದ್ದು, ಒಟ್ಟು 39,14,343 ಮಂದಿ ಇಲ್ಲಿಯತನಕ ಗುಣಮುಖರಾಗಿದ್ದಾರೆ.
ಇಂದು ಓರ್ವ ಸೋಂಕಿತರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4,371 ರಷ್ಟಿದೆ. ಸೋಂಕಿತರ ಪ್ರಮಾಣ ಶೇ. 3.47 ರಷ್ಟಿದ್ದರೆ, ವಾರದ ಸೋಂಕಿತರ ಪ್ರಮಾಣ ಶೇ. 2.63 ಇದೆ. ವಾರದ ಸಾವಿನ ಪ್ರಮಾಣ ಶೇ. 0.03 ದಾಖಲಾಗಿದೆ.
ವಿಮಾನ ನಿಲ್ದಾಣದಲ್ಲಿ 5,396 ಜನ ತಪಾಸಣೆಗೊಳಗಾಗಿದ್ದಾರೆ. ಇದುವರೆಗೂ 10,65,321 ಪ್ರಯಾಣಿಕರು ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ. ಬೆಂಗಳೂರಿನಲ್ಲಿ 791 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 17,94,128 ಕ್ಕೇರಿದೆ. ಇಂದು 435 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 17,72, 963 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸಾವಿನ ಸಂಖ್ಯೆ ಶೂನ್ಯ. ಇದುವರೆಗಿನ ಕೋವಿಡ್ ಸಾವಿನ ಸಂಖ್ಯೆ 16,965 ರಷ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4,199 ಇದೆ.
ಇದನ್ನೂ ಓದಿ: ಶಾಮನೂರು ಮೊಮ್ಮಗಳ ವರಿಸಿದ ಸಿಎಂ ಬೊಮ್ಮಾಯಿ ಆಪ್ತನ ಪುತ್ರ