ಬೆಂಗಳೂರು: ರಾಜ್ಯದಲ್ಲಿಂದು 21,618 ಜನರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, 92 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,44,877ಕ್ಕೇರಿದೆ. ಪಾಸಿಟಿವ್ ದರ 0.43% ರಷ್ಟಿದೆ.
143 ಸೋಂಕಿತರು ಗುಣಮುಖರಾಗಿದ್ದಾರೆ. ಈ ವರೆಗೆ 39,02,956 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 1,838 ರಷ್ಟಿದೆ. ಸೋಂಕಿಗೆ ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 40,041ಕ್ಕೆ ಏರಿಕೆ ಕಂಡಿದೆ. ಡೆತ್ ರೇಟ್ 2.17% ಇದೆ.
ವಿಮಾನ ನಿಲ್ದಾಣದಿಂದ 2,546 ಪ್ರಯಾಣಿಕರು ಆಗಮಿಸಿದ್ದಾರೆ. ಬೆಂಗಳೂರಿನಲ್ಲಿ 81 ಜನರಿಗೆ ಸೋಂಕು ತಗುಲಿದೆ. 97 ಮಂದಿ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಒಬ್ಬ ಸೋಂಕಿತ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 16,953 ರಷ್ಟಿದೆ. ಸಕ್ರಿಯ ಪ್ರಕರಣಗಳು 1,631 ರಷ್ಟಿದೆ.
ರೂಪಾಂತರಿ ವೈರಸ್ ಅಪ್ಡೇಟ್ಸ್:
ಅಲ್ಪಾ- 156
ಬೆಟಾ-08
ಡೆಲ್ಟಾ ಸಬ್ ಲೈನ್ ಏಜ್- 4620
ಇತರೆ- 311
ಒಮಿಕ್ರಾನ್- 3081
BAI.1.529- 828
BA1- 98
BA2- 2155
ಒಟ್ಟು- 8176
ಇದನ್ನೂ ಓದಿ: ಶಿವಮೊಗ್ಗ: ಶಾಲೆಯಲ್ಲಿ ನಮಾಜ್ ಮಾಡಲು ಅವಕಾಶ ನೀಡಿದ್ದ ಮುಖ್ಯ ಶಿಕ್ಷಕಿ ಅಮಾನತು