ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಬಂದಿದ್ದು, ಮೂರಂಕಿಯ ಸನಿಹಕ್ಕೆ ಬಂದು ನಿಂತಿದೆ. ಕೋವಿಡ್ ನಿಯಮ ಸಡಿಲಿಕೆ ನಡುವೆಯೂ ಇಂದು ಕೇವಲ 1,001 ಹೊಸ ಪ್ರಕರಣ ಪತ್ತೆಯಾಗಿದೆ.
ಇಂದಿನ 1001 ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 39,36,586ಕ್ಕೆ ಏರಿದೆ. 18 ಸೋಂಕಿತರು ಅಸುನೀಗಿದ್ದು, ಈವರೆಗೆ ಒಟ್ಟು 39,795 ಸೋಂಕಿತರು ಮೃತಪಟ್ಟಿದ್ದಾರೆ. 1,780 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 38,84,120 ಸೋಂಕಿತರು ಚೇತರಿಕೆ ಕಂಡಿದ್ದಾರೆ. ಸದ್ಯ ರಾಜ್ಯದಲ್ಲಿ ಕೇವಲ 12,634 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರವು ಶೇ. 1.42 ಆಗಿದ್ದು, ಮೃತರ ಪ್ರಮಾಣ ಶೇ. 1.79 ಇದೆ.
-
ಇಂದಿನ 20/02/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/fV7JSVaoac@CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/cyE4NU71Ph
— K'taka Health Dept (@DHFWKA) February 20, 2022 " class="align-text-top noRightClick twitterSection" data="
">ಇಂದಿನ 20/02/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/fV7JSVaoac@CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/cyE4NU71Ph
— K'taka Health Dept (@DHFWKA) February 20, 2022ಇಂದಿನ 20/02/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/fV7JSVaoac@CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/cyE4NU71Ph
— K'taka Health Dept (@DHFWKA) February 20, 2022
ಇದನ್ನೂ ಓದಿ: ಹೊಟ್ಟೆಯೊಳಗೆ ಇದ್ದ ಗ್ಲಾಸ್ ಹೊರತೆಗೆದ ವೈದ್ಯರು: ಅಷ್ಟಕ್ಕೂ ಅದು ದೇಹ ಸೇರಿದ್ದೇಗೆ!?
ಬೆಂಗಳೂರಿನಲ್ಲಿ 485 ಹೊಸ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 17,75,827 ಆಗಿದೆ. 12 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,820ಕ್ಕೆ ತಲುಪಿದೆ. 737 ಸೋಂಕಿತರು ಗುಣಮುಖರಾಗಿದ್ದು, ಇಲ್ಲಿಯತನಕ 17,52,872 ಚೇತರಿಸಿಕೊಂಡಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಕೇವಲ 6,134 ಸಕ್ರಿಯ ಪ್ರಕರಣಗಳಿವೆ.