ETV Bharat / state

'ಚುನಾವಣೆ ಸಂಪುಟ' ರಚನೆಗೆ ಸಿಎಂ, ಹೈಕಮಾಂಡ್ ಕಸರತ್ತು: ಹಲವರಿಗೆ ಕಾದಿದೆಯಾ ಭಾರಿ ನಿರಾಸೆ?! - basavaraj bommai Cabinet expansion

ರಾಜ್ಯ ವಿಧಾನಸಭೆಗೆ 2023ರಲ್ಲಿ ನಡೆಯುವ ಸಾರ್ವಜನಿಕ ಚುನಾವಣೆ ಮತ್ತು 2024ರಲ್ಲಿ ಲೋಕಸಭೆಗೆ ನಡೆಯುವ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚು ಅನುಕೂಲವಾಗುವಂತೆ, ಅರ್ಹ ಬಿಜೆಪಿ ಶಾಸಕರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡುವ ಉದ್ದೇಶವಿದೆ. ಇದೇ ಹಿನ್ನೆಲೆಯಲ್ಲಿ ಸಂಭಾವ್ಯ ಸಚಿವರ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿದ್ಧಪಡಿಸಿದೆ ವಿಶ್ವಾಸನೀಯ ಮೂಲಗಳಿಂದ ತಿಳಿದುಬಂದಿದೆ.

karnataka-cabinet-expansion-by-the-view-of-next-election
'ಚುನಾವಣೆ ಸಂಪುಟ' ರಚನೆಗೆ ಸಿಎಂ, ಹೈಕಮಾಂಡ್ ಕಸರತ್ತು
author img

By

Published : Aug 3, 2021, 2:11 AM IST

ಬೆಂಗಳೂರು: ವಿಧಾನಸಭೆಗೆ ಚುನಾವಣೆ ನಡೆಯುವ ವರ್ಷದಲ್ಲಿ ಜನಪ್ರಿಯ ಘೋಷಣೆಗಳಿರುವ ಎಲೆಕ್ಷನ್ ಬಜೆಟ್ ಮಂಡಿಸಿದ ಮಾದರಿಯಲ್ಲಿಯೇ ರಾಜ್ಯದಲ್ಲಿ 'ಚುನಾವಣೆ ಸಂಪುಟ' (ಎಲೆಕ್ಷನ್ ಕ್ಯಾಬಿನೆಟ್) ರಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಹೈಕಮಾಂಡ್ ತೀವ್ರ ಕಸರತ್ತು ನಡೆಸುತ್ತಿದೆ ಎಂದು ಹೇಳಲಾಗಿದೆ.

ಸಚಿವ ಸ್ಥಾನ ಆಕಾಂಕ್ಷಿಗಳ ಯಾವುದೇ ಒತ್ತಡಗಳು, ಲಾಬಿ, ಹಿರಿಯ ನಾಯಕರ ಶಿಪಾರಸ್ಸುಗಳಿಗೆ ಮನ್ನಣೆ ನೀಡದೆ ಚುನಾವಣೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಸಚಿವ ಸಂಪುಟ ರಚಿಸುವ ಪ್ರಯತ್ನಗಳು ದೇಶದ ರಾಜಧಾನಿ ದೆಹಲಿ ಅಂಗಳದಲ್ಲಿ ನಡೆದಿವೆ.

ರಾಜ್ಯ ವಿಧಾನಸಭೆಗೆ 2023ರಲ್ಲಿ ನಡೆಯುವ ಸಾರ್ವಜನಿಕ ಚುನಾವಣೆ ಮತ್ತು 2024ರಲ್ಲಿ ಲೋಕಸಭೆಗೆ ನಡೆಯುವ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚು ಅನುಕೂಲವಾಗುವಂತೆ, ಅರ್ಹ ಬಿಜೆಪಿ ಶಾಸಕರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡುವ ಉದ್ದೇಶ ಇಟ್ಟುಕೊಂಡು ಸಂಭಾವ್ಯ ಸಚಿವರ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿದ್ಧಪಡಿಸಿದೆ ವಿಶ್ವಾಸನೀಯ ಮೂಲಗಳಿಂದ ತಿಳಿದುಬಂದಿದೆ.

ಚುನಾವಣೆಯಲ್ಲಿ ಪಕ್ಷಕ್ಕೆ ಸಹಾಯವಾಗುವಂತೆ ಪ್ರಾದೇಶಿಕವಾರು, ಜಾತಿವಾರು, ಹಿರಿತನ-ಕಿರಿತನ , ಶಾಸಕರ ಅರ್ಹತೆ, ಹಿಂದುತ್ವ, ಪಕ್ಷ ನಿಷ್ಠೆ ಸೇರಿದಂತೆ ಹಲವಾರು ಮಾನದಂಡಗಳನ್ನು ಆಧಾರವಾಗಿಟ್ಟುಕೊಂಡು ಸಚಿವ ಸಂಪುಟ ಸೇರಲಿರುವವರ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತಿದೆ ಎನ್ನಲಾಗಿದೆ.

ಈ ಹಿಂದೆ ಬಿಜೆಪಿ ಸರ್ಕಾರ ಮತ್ತು ಬಿಜೆಪಿ ಆಡಳಿತದ ಸಮ್ಮಿಶ್ರ ಸರ್ಕಾರದ ಆಡಳಿತಾವಧಿಯಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿ ವಿಫಲರಾದವರನ್ನು, ಹೆಚ್ಚು ಭ್ರಷ್ಟಾಚಾರ ಆರೋಪಗಳಿರುವ ಅಭ್ಯರ್ಥಿಗಳು, ವಿವಾದಾತ್ಮಕ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರವುಂಟು ಮಾಡಿದವರಿಗೆ ಸಚಿವ ಸಂಪುಟದಲ್ಲಿ ಅವಕಾಶ ದೊರೆಯುವ ಸಾಧ್ಯತೆ ಕ್ಷೀಣವೆಂದು ಹೇಳಲಾಗುತ್ತಿದೆ.

ಭಾರತೀಯ ಜನತಾ ಪಕ್ಷ ಪ್ರಬಲವಾಗಿರುವ ಪ್ರದೇಶಗಳಲ್ಲಿ ಸಚಿವಾಕಾಂಕ್ಷಿಗಳಿಗೆ ಹೆಚ್ಚಿನ ಅವಕಾಶ ನೀಡುವ ಜೊತೆಗೆ ಪಕ್ಷ ದುರ್ಬಲವಾಗಿರುವ ದಕ್ಷಿಣ ಕರ್ನಾಟಕದಲ್ಲಿಯೂ ಶಾಸಕರಿಗೆ ಹೆಚ್ಚಿನ ಅವಕಾಶ ನೀಡುವ ಉದ್ದೇಶ ಸಹ ಇರುವುದಾಗಿ ತಿಳಿದುಬಂದಿದೆ.

ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಮತ ಬ್ಯಾಂಕ್ ವಿಸ್ತರಿಸುವ ಅಜೆಂಡಾ ಹೊಂದಿದ ಸಂಪುಟವನ್ನು ಅಳೆದು ತೂಗಿ ರಚಿಸುವ ಪ್ರಯತ್ನ ನಡೆದಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಲೆಕ್ಕಾಚಾರ ಹೊಂದಿದ 2-3 ಸಂಭಾವ್ಯ ಸಚಿವ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ ಅದಕ್ಕೆ ಅಂತಿಮ ರೂಪ ನೀಡುವ ಪ್ರಯತ್ನ ನಡೆದಿದೆ.

ಚುನಾವಣೆ ಉದ್ದೇಶ ಇಟ್ಟುಕೊಂಡು ರಚನೆ ಮಾಡಲಾಗುತ್ತಿರುವ ಸಂಪುಟದಲ್ಲಿ ತಮಗೆ ಸಚಿವ ಸ್ಥಾನ ಈ ಬಾರಿಯೂ ಸಿಕ್ಕೇ ಸಿಗುತ್ತದೆ ಎಂದು ಬಹಳಷ್ಟು ನಿರೀಕ್ಷೆ ಹೊಂದಿರುವ
ಆಕಾಂಕ್ಷಿಗಳಿಗೆ ಹಲವಾರು ರಾಜಕೀಯ ಲೆಕ್ಕಾಚಾರಗಳ ಪರಿಣಾಮವಾಗಿ ಸಚಿವ ಪದವಿ ದೊರೆಯದೇ ನಿರಾಸೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಮಂತ್ರಿಗಿರಿ ಸಿಗದವರು ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಬಂಡಾಯ ಏಳುವ ಅಪಾಯವನ್ನೂ ತಳ್ಳಿಹಾಕುವಂತಿಲ್ಲ.

ಸಂಪುಟ ರಚನೆ ಕುರಿತಾದ ಎಲ್ಲ ಕುತೂಹಲಕ್ಕೆ ಇಂದೇ ತೆರೆ ಬೀಳಲಿದೆ. ಈಗಾಗಲೇ ದೆಹಲಿಯಲ್ಲಿ ಈ ಬಗ್ಗೆ ಮಾತನಾಡಿರುವ ಸಿಎಂ, ಮಂಗಳವಾರ ರಾತ್ರಿ ಹೈಕಮಾಂಡ್​ನಿಂದ ನೂತನ ಸಚಿವರ ಪಟ್ಟಿ ಪ್ರಕಟವಾಗಲಿದೆ. ಯಾರು, ಎಷ್ಟು ಜನ ಸಚಿವರಾಗುತ್ತಾರೆಂದು ಗೊತ್ತಾಗುತ್ತೆ. ಡಿಸಿಎಂ ಸ್ಥಾನಗಳ ಬಗ್ಗೆಯೂ ಕೂಡ ಅಂತಿಮವಾಗಲಿದೆ. ಹೈಕಮಾಂಡ್​ ಕೈಯಲ್ಲಿ ನಾವು ಎರಡು-ಮೂರು ಪಟ್ಟಿ ಕೊಟ್ಟಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ಇಂದು ರಾತ್ರಿ ನೂತನ ಸಚಿವರ ಪಟ್ಟಿ ಪ್ರಕಟ... ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.