ETV Bharat / state

ಅಭಿವೃದ್ಧಿ ರಾಜಕಾರಣ ಎಂದರೆ ಏನೆಂದು ತೋರಿಸಿಕೊಟ್ಟವರು ಮೋದಿ: ಬಿಜೆಪಿ ಟ್ವೀಟ್ - ಪ್ರತ್ಯಕ್ಷ ತೋರಿಸಿಕೊಟ್ಟವರು ನಮ್ಮ ಪ್ರಧಾನಿ ನರೇಂದ್ರ ಮೋದಿ

ರಾಜಕಾರಣಿಗಳಿಂದ ಅಭಿವೃದ್ಧಿ ಹೇಗೆ ಸಾಧ್ಯ ಎಂಬುದನ್ನು ತಮ್ಮ ಆಡಳಿತಾವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಅಭಿವೃದ್ಧಿಯೊಂದೇ ತಮ್ಮ ಸರ್ಕಾರದ ಗುರಿ ಎಂಬುದನ್ನು ಅವರು ಸಾಬೀತು ಮಾಡಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

ಅಭಿವೃದ್ಧಿ ರಾಜಕಾರಣ ಎಂದರೆ ಏನೇಂದು ತೋರಿಸಿಕೊಟ್ಟವರು ಮೋದಿ: ಬಿಜೆಪಿ
karnataka-bjp-tweets-pm-modi-showed-what-is-development-politics
author img

By

Published : Jan 20, 2023, 2:15 PM IST

ಬೆಂಗಳೂರು: ರಾಜಕಾರಣಿಗಳು ಎಂದರೆ ಕಾರಣ ಕೊಡುವವರು ಎಂಬ ಕಾಲದಲ್ಲಿ ಅಭಿವೃದ್ಧಿಯ ರಾಜಕಾರಣ ಎಂದರೆ ಏನೆಂದು ಪ್ರತ್ಯಕ್ಷ ತೋರಿಸಿಕೊಟ್ಟವರು ನಮ್ಮ ಪ್ರಧಾನಿ ನರೇಂದ್ರ ಮೋದಿ. ಅವರ ಆಗಮನದಿಂದ ಕರ್ನಾಟಕ ಧನ್ಯವಾಗಿದೆ ಎಂದು ಬಿಜೆಪಿ ತಿಳಿಸಿದೆ. ಈ ಸಂಬಂಧ ಸರಣಿ ಟ್ವೀಟ್​ ಮಾಡಿದ್ದು, ಅಧಿಕಾರಕ್ಕಾಗಿ ಹಪಹಪಿಸುವವರ ನಡುವೆ ಮೋದಿ ಭಾರತದ ಅಮೃತ ಕಾಲದ ಬಗ್ಗೆ ಮಾತನಾಡಿ ಸ್ಫೂರ್ತಿ ತುಂಬುತ್ತಾರೆ. ರೈತ ಯೋಜನೆ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಭದ್ರ ಅಡಿಪಾಯ ಹಾಕುವ ಮೂಲಕ ಮುಂದಿನ ದಶಕಕ್ಕೆ ಅಭಿವೃದ್ಧಿಯ ಮಾದರಿ ಒದಗಿಸಿದ್ದಾರೆ. ನಾರಾಯಣಪುರ ಎಡದಂಡೆ ಕಾಲುವೆಗೆ ಸ್ವಯಂಚಾಲಿತ ಗೇಟುಗಳ ಅಳವಡಿಕೆ, ಜಲ ಜೀವನ್ ಮಿಷನ್ ಅಡಿ ಯಾದಗಿರಿ ಜಿಲ್ಲೆಯ 16 ಲಕ್ಷ ಮಂದಿಗೆ ಕುಡಿಯುವ ನೀರು ಕಲ್ಪಿಸುವ ಯೋಜನೆಗೆ ಚಾಲನೆ ಸೇರಿದಂತೆ 10,800 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ ಎಂದು ಹೇಳಿದೆ.

  • ರಾಜಕಾರಣಿಗಳು ಎಂದರೆ ಕಾರಣ ಕೊಡುವವರು ಎಂಬ ಕಾಲದಲ್ಲಿ ಅಭಿವೃದ್ಧಿಯ ರಾಜಕಾರಣ ಎಂದರೆ ಏನೆಂದು ಪ್ರತ್ಯಕ್ಷ ತೋರಿಸಿಕೊಟ್ಟವರು ನಮ್ಮ ಪ್ರಧಾನಿ ಶ್ರೀ @narendramodi. ಅಧಿಕಾರಕ್ಕಾಗಿ ಹಪಹಪಿಸುವವರ ನಡುವೆ ನಮ್ಮ ಮೋದಿಜಿ ಭಾರತದ ಅಮೃತ ಕಾಲದ ಬಗ್ಗೆ ಮಾತನಾಡಿ ಸ್ಫೂರ್ತಿ ತುಂಬುತ್ತಾರೆ.
    #BJPYeBharavase
    1/6

    — BJP Karnataka (@BJP4Karnataka) January 20, 2023 " class="align-text-top noRightClick twitterSection" data=" ">

ಅಭಿವೃದ್ದಿಯೊಂದೇ ಗುರಿ: ಪ್ರಧಾನಿ ನರೇಂದ್ರ ಮೋದಿ ಒಂದೇ ದಿನ 52,072 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿ ಇತಿಹಾಸ ನಿರ್ಮಿಸಿದರು. ಇಷ್ಟು ಫಲಾನುಭವಿಗಳಿಗೆ ಏಕಕಾಲದಲ್ಲಿ ಹಕ್ಕುಪತ್ರ ವಿತರಣೆ ಗಿನ್ನಿಸ್ ದಾಖಲೆಗೂ ಸೇರಿದೆ. ಆದರೆ ದಾಖಲೆಗಿಂತ ಅಷ್ಟು ಕುಟುಂಬ ಈಗ ನೆಮ್ಮದಿಯಿಂದ ಇವೆ ಎನ್ನುವುದೇ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಸಂತೋಷದ ವಿಚಾರ ಎಂದು ಟ್ವೀಟ್ ಮಾಡಿದೆ. ನಮ್ಮ ಸರ್ಕಾರದ ಆದ್ಯತೆ ಮತಬ್ಯಾಂಕ್ ಅಲ್ಲ ಎಂಬುದನ್ನು ಸ್ಪಷ್ಟಪಡಿಸುವ ಮೂಲಕ ಡಬಲ್ ಎಂಜಿನ್ ಸರ್ಕಾರಕ್ಕೆ ಅಭಿವೃದ್ಧಿಯೊಂದೇ ಗುರಿ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ಕಲ್ಯಾಣ ಕರ್ನಾಟಕದ ಪಾಲಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಡಬಲ್ ಕಲ್ಯಾಣಕರ ಮತ್ತು ಅಭಿವೃದ್ಧಿಯ ಹರಿಕಾರ ಎಂದಿದೆ.

ನೀರಾವರಿ ದಶಕ: ಮುಂದಿನ ದಶಕ ರಾಜ್ಯದ ಪಾಲಿಗೆ ನೀರಾವರಿ ದಶಕ ಎಂಬುದನ್ನು ಪ್ರಧಾನಿ ಮೋದಿ ಸಮ್ಮುಖದಲ್ಲಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಇವತ್ತು ಬಿಂದುವಿನಂತೆ ಕಾಣುವ ಈ ಹೇಳಿಕೆ ಮುಂದಿನ ದಿನಗಳಲ್ಲಿ ಕರ್ನಾಟಕದ ಪಾಲಿನ ಸಿಂಧುವಾಗಲಿದೆ. ರಾಜ್ಯದ ಕೃಷಿ ವಲಯದ ಚಿತ್ರಣವೇ ಬದಲಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಡಿಪಾಯ ಹಾಕಿರುವುದು ಬರಿಯ ಯೋಜನೆಗಳಿಗಲ್ಲ. ರಾಜ್ಯದ ಹೊಲಗಳಲ್ಲಿ ಉತ್ತಮ ಬೆಳೆ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಭದ್ರ ಅಡಿಪಾಯ ಹಾಕುವ ಮೂಲಕ ಮುಂದಿನ ದಶಕಕ್ಕೆ ಅಭಿವೃದ್ಧಿಯ ಮಾದರಿ ಒದಗಿಸಿದ್ದಾರೆ.

  • ಮುಂದಿನ ದಶಕ ರಾಜ್ಯದ ಪಾಲಿಗೆ ನೀರಾವರಿ ದಶಕ ಎಂಬುದನ್ನು ಪ್ರಧಾನಿ ಶ್ರೀ @narendramodi ಸಮ್ಮುಖದಲ್ಲಿ ಮುಖ್ಯಮಂತ್ರಿ @BSBommai ಘೋಷಿಸಿದ್ದಾರೆ. ಇವತ್ತು ಬಿಂದುವಿನಂತೆ ಕಾಣುವ ಈ ಹೇಳಿಕೆ ಮುಂದಿನ ದಿನಗಳಲ್ಲಿ ಕರ್ನಾಟಕದ ಪಾಲಿನ ಸಿಂಧುವಾಗಲಿದೆ. ರಾಜ್ಯದ ಕೃಷಿ ವಲಯದ ಚಿತ್ರಣವೇ ಬದಲಾಗಲಿದೆ.#BJPYeBharavase
    5/6

ಕಾಂಗ್ರೆಸ್‌ ಕಾಲದಲ್ಲಿದ್ದ ರೌಡಿಸಂ ಹಾಗೂ ಭ್ರಷ್ಟಾಚಾರವನ್ನು ಮಟ್ಟ ಹಾಕಿ, ದೇಶವನ್ನು ಸದೃಢವಾಗಿಸುತ್ತಿದೆ . 70 ವರ್ಷಗಳಿಂದ ಜನರು ಕಂಡ ಅಭಿವೃದ್ಧಿಯ ಕನಸು ನರೇಂದ್ರ ಮೋದಿ ಸರ್ಕಾರದಿಂದ ನನಸಾಗುತ್ತಿದೆ ಎನ್ನುತ್ತಿದ್ದಾರೆ ಜನ. ನೀವೇ ಕೇಳಿ ಜನಮನದ ಮಾತು ಎಂದು ವಿಡಿಯೋ ತುಣುಕನ್ನು ಬಿಜೆಪಿ ಪ್ರಕಟಿಸಿದೆ‌.

ಇದನ್ನೂ ಓದಿ: ಕೇಂದ್ರ ಸರ್ಕಾರದ ನೌಕರಿಗಳಿಗೆ ಕನ್ನಡದಲ್ಲೂ ಪರೀಕ್ಷೆ: ಹೋರಾಟಕ್ಕೆ ಲಭಿಸಿದ ಮೊದಲ ಯಶಸ್ಸು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.