ETV Bharat / state

ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿ ಬಿಜೆಪಿ: ಹೆಚ್​ಡಿಕೆ ಸೋಲಿಸಲು ಪಣತೊಟ್ಟಿರುವ ಕ್ಷೇತ್ರಗಳಿವು! - ಕುಮಾರಸ್ವಾಮಿ ಟಾರ್ಗೆಟ್​ ಮಾಡಿರುವ ಕ್ಷೇತ್ರಗಳು

ಸರ್ಕಾರ ಉಳಿಸಿಕೊಳ್ಳಲು 8 ಕ್ಷೇತ್ರ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿ ಬಿಜೆಪಿ ಸಿಲುಕಿದ್ದರೆ. ಜೆಡಿಎಸ್​ ಮಾತ್ರ ಮೈತ್ರಿ ಸರ್ಕಾರ ಪತನದ ರುವಾರಿಗಳನ್ನ ಸೋಲಿಸುವ ಪಣ ತೊಟ್ಟಿದೆ.

ಹೆಚ್​ಡಿಕೆ ಸೋಲಿಸಲು ಪಣತೊಟ್ಟಿರವ ಕ್ಷೇತ್ರಗಳಿವು
author img

By

Published : Nov 21, 2019, 6:38 PM IST

ಬೆಂಗಳೂರು: ರಾಜ್ಯದಲ್ಲಿ 15 ಕ್ಷೇತ್ರಗಳ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಒಂದೆಡೆ ಸರ್ಕಾರ ಉಳಿಸಿಕೊಳ್ಳಲು 8 ಕ್ಷೇತ್ರ ಗೆಲ್ಲಲೇ ಬೇಕಾದ ಅನಿವಾರ್ಯತೆ ಬಿಜೆಪಿಗೆ ಎದುರಾಗಿದ್ದರೆ, ಮತ್ತೊಂದೆಡೆ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ ಅನರ್ಹ ಶಾಸಕರಿಗೆ ತಕ್ಕ ಪಾಠ ಕಲಿಸಲೇಬೇಕೆಂಬುದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಹಠವಾಗಿದೆ.

ಗೇಮ್ ಪ್ಲಾನ್ ಏನು?
ಮೈತ್ರಿ ಸರ್ಕಾರ ಬೀಳಿಸಲು ಕಾರಣರಾದ 15 ಅನರ್ಹ ಶಾಸಕರ ಪೈಕಿ ಹತ್ತು ಮಂದಿಯನ್ನು ಗುರಿಯಾಗಿರಿಸಿಕೊಂಡಿರುವ ಕುಮಾರಸ್ವಾಮಿ ಅವರು ಹೊಸ ಹೊಸ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಗೆದ್ದರೂ ತೊಂದರೆಯಿಲ್ಲ. ಬಿಜೆಪಿಯಿಂದ ಅಭ್ಯರ್ಥಿಗಳಾಗಿರುವ ಅನರ್ಹ ಶಾಸಕರು ಮಾತ್ರ ಗೆಲ್ಲಬಾರದೆಂಬುದು ಹೆಚ್​ಡಿಕೆ ರಣತಂತ್ರವಾಗಿದೆ. ಹಾಗಾಗಿ, ತಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲು ಸಾಧ್ಯವಾಗದ ಕಡೆ ವಿಭಿನ್ನ ಕಾರ್ಯಯೋಜನೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ.

ಪ್ರಮುಖವಾಗಿ ಮಹಾಲಕ್ಷ್ಮಿಲೇಔಟ್​ನ ಕೆ.ಗೋಪಾಲಯ್ಯ, ಹುಣಸೂರು ಕ್ಷೇತ್ರದ ಹೆಚ್.ವಿಶ್ವನಾಥ್, ಕೆ.ಆರ್.ಪೇಟೆ ಕ್ಷೇತ್ರದ ನಾರಾಯಣಗೌಡ, ಹೊಸಕೋಟೆ ಕ್ಷೇತ್ರದ ಎಂಟಿಬಿ ನಾಗರಾಜ್, ಚಿಕ್ಕಬಳ್ಳಾಪುರ ಕ್ಷೇತ್ರದ ಡಾ.ಕೆ. ಸುಧಾಕರ್, ಯಶವಂತಪುರ ಕ್ಷೇತ್ರದ ಎಸ್.ಟಿ.ಸೋಮಶೇಖರ್, ಕೆ.ಆರ್. ಪುರ ಕ್ಷೇತ್ರದ ಭೈರತಿ ಬಸವರಾಜ್, ಗೋಕಾಕ್ ಕ್ಷೇತ್ರದ ರಮೇಶ್ ಜಾರಕಿಹೊಳಿ ಅವರು ಕುಮಾರಸ್ವಾಮಿ ಅವರ ಟಾರ್ಗೆಟ್​ ಲೀಸ್ಟ್​ನಲ್ಲಿದ್ದಾರೆ. ಹೇಗಾದರೂ ಮಾಡಿ ಇವರನ್ನು ಸೋಲಿಸಬೇಕೆಂದು ತಮ್ಮ ಪಕ್ಷದ ನಾಯಕರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮೊನ್ನೆ ನಡೆದ ಅನೌಪಚಾರಿಕೆ ಸಭೆಯಲ್ಲಿ ತಮ್ಮ ಪಕ್ಷದ ಮಾಜಿ ಸಚಿವರು ಹಾಗೂ ಶಾಸಕರಿಗೆ ಈ ಕುರಿತ ಮಾಹಿತಿ ರವಾನಿಸಿದ್ದು, ಶತಾಯಗತಾಯ ಅನರ್ಹ ಶಾಸಕರನ್ನು ಮಣಿಸಲೇಬೇಕು ಎಂದಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಮೊದಲ ಆದ್ಯತೆ ನೀಡಬೇಕು. ನಂತರ ಅನರ್ಹ ಶಾಸಕರ ಸೋಲಿಗೆ ಶ್ರಮಿಸಬೇಕೆಂದು ಕುಮಾರಸ್ವಾಮಿ ಅವರು ಸೂಚನೆ ಕೊಟ್ಟಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸ್ಥಳೀಯ ಕಾರ್ಯಕರ್ತರು ಮತ್ತು ನಾಯಕರ ವಿರೋಧದ ಮಧ್ಯೆಯೂ ಕುಮಾರಸ್ವಾಮಿ ಅವರು ಎರಡು ಬಾರಿ ನಾರಾಯಣಗೌಡರಿಗೆ ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಟಿಕೆಟ್ ನೀಡಿದ್ದರು. ದೇವೇಗೌಡರ ಕುಟುಂಬದವರ ಬಗ್ಗೆ ಮಾತನಾಡಿರುವ ಕೆ.ಆರ್.ಪೇಟೆ ಅನರ್ಹ ಶಾಸಕ ನಾರಾಯಣಗೌಡ ಅವರನ್ನು ಸೋಲಿಸಲು ಕಾರ್ಯತಂತ್ರಗಳನ್ನು ರೂಪಿಸಲಾಗಿದೆ.

ಅದೇ ರೀತಿ, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲೂ ಸಹ ಸ್ಥಳೀಯ ಜೆಡಿಎಸ್ ನಾಯಕರ ವಿರೋಧದ ಮಧ್ಯೆಯೂ ಕುಮಾರಸ್ವಾಮಿ ಅವರು ಗೋಪಾಲಯ್ಯಗೆ ಟಿಕೆಟ್ ನೀಡಿ ಗೆಲ್ಲಿಸಿದ್ದರು. ಅವರ ಪತ್ನಿ ಹೇಮಲತಾ ಅವರನ್ನು ಉಪಮೇಯರ್ ಆಗಿ ಮಾಡಲಾಗಿತ್ತು. ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ್ದರೂ ಅವರನ್ನು ಕ್ಷಮಿಸಿ ಪಕ್ಷಕ್ಕೆ ವಾಪಸ್ ಸೇರಿಸಿಕೊಳ್ಳಲಾಗಿತ್ತು. ಆದರೂ ಗೋಪಾಲಯ್ಯ ನಂಬಿಕೆಗೆ ದ್ರೋಹ ಮಾಡಿದ್ದಾರೆ ಎಂಬ ಸಿಟ್ಟು ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗಿದೆ. ಮಹಾಲಕ್ಷ್ಮೀ ಲೇಔಟ್​ನಲ್ಲಿ ಪ್ರಬಲರಲ್ಲದಿದ್ದರೂ ಡಾ. ಗಿರೀಶ್ ನಾಶಿ ಎಂಬುವರಿಗೆ ಟಿಕೆಟ್ ನೀಡಿರುವುದರ ಹಿಂದೆ ಕುಮಾರಸ್ವಾಮಿ ಬೇರೆಯೇ ತಂತ್ರಗಾರಿಕೆ ಇದೆ ಎನ್ನಲಾಗಿದೆ.

ಇನ್ನು ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್ ಒಕ್ಕಲಿಗ ಸಮುದಾಯದವರಾಗಿಯೂ ತಮ್ಮ ಸರ್ಕಾರ ಬೀಳಿಸಿದರೆಂಬ ಸಿಟ್ಟು, ಜೊತೆಗೆ ಕುಮಾರಸ್ವಾಮಿ ವಿರುದ್ಧ ವೈಯಕ್ತಿಕ ಮಟ್ಟದಲ್ಲಿ ಟೀಕೆಗಳನ್ನು ಮಾಡಿದ್ದಾರೆಂಬ ಕೋಪವೂ ಇದೆ. ಅಲ್ಲಿ, ಕಾಂಗ್ರೆಸ್ ಪಕ್ಷಕ್ಕೆ ಸಹಾಯವಾಗುವಂತೆ ಜೆಡಿಎಸ್ ಅಭ್ಯರ್ಥಿಯನ್ನ ಹಾಕಿದೆ. ಎಸ್.ಟಿ. ಸೋಮಶೇಖರ್ ಒಕ್ಕಲಿಗರಾಗಿರುವುದರಿಂದ ಈ ಸಮುದಾಯದ ಮತಗಳು ವಿಭಜನೆಯಾಗುವಂತೆ ಟಿ.ಎನ್. ಜವರಾಯಿಗೌಡರನ್ನು ಕಣಕ್ಕಿಳಿಸಿದೆ. ಇದರಿಂದ ಕಾಂಗ್ರೆಸ್ ಅಭ್ಯರ್ಥಿ ಪಿ. ನಾಗರಾಜ್ ಗೆಲುವಿಗೆ ಸಹಕಾರಿಯಾಗುವ ನಿರೀಕ್ಷೆ ಇದೆ.

ಶರತ್ ಬಚ್ಚೇಗೌಡ ಅವರು ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಹಾಕಿದರೆ ಒಕ್ಕಲಿಗ ಮತಗಳು ಹಂಚಿಕೆಯಾಗಿ ಶರತ್ ಬಚ್ಚೇಗೌಡ ಗೆಲುವಿಗೆ ಕಷ್ಟವಾಗಬಹುದು. ಅದಕ್ಕೆ ಅಭ್ಯರ್ಥಿ ಹಾಕದಿದ್ದರೆ ಎಂಟಿಬಿ ನಾಗರಾಜ್ ಸೋಲು ಸುಲಭವಾಗುತ್ತದೆ ಎಂಬುದು ಕುಮಾರಸ್ವಾಮಿ ಲೆಕ್ಕಾಚಾರ.

ಮೈತ್ರಿ ಸರ್ಕಾರದ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ. ಸುಧಾಕರ್ ಅವರನ್ನು ಉಪಚುನಾವಣೆಯಲ್ಲಿ ಸೋಲಿಸಲೇಬೇಕೆಂದು ಕುಮಾರಸ್ವಾಮಿ ಅವರು ಪಣತೊಟ್ಟಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಆಂಜಿನಪ್ಪಗೆ ನೆರವಾಗಲೆಂದೆ ಇಲ್ಲಿಯೂ ಜೆಡಿಎಸ್ ಪ್ರಭಾವಿಯಲ್ಲದ ರಾಧಾಕೃಷ್ಣ ಎಂಬುವರನ್ನು ಕಣಕ್ಕಿಳಿಸಿದೆ. ಇಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರ ಒಳ ಒಪ್ಪಂದ ನಡೆದಿದೆ ಎಂದು ಹೇಳಲಾಗುತ್ತಿದೆ.

ಆಪರೇಷನ್ ಕಮಲದ ಮುಖ್ಯ ರೂವಾರಿ ಎಂದೇ ಹೇಳಲಾಗುತ್ತಿದ್ದ ರಮೇಶ್ ಜಾರಕಿಹೊಳಿ ಅವರನ್ನು ಮಣಿಸಲು ಜೆಡಿಎಸ್ ಪ್ರಬಲ ಅಭ್ಯರ್ಥಿಯಾದ ಬಿಜೆಪಿ ಟಿಕೆಟ್ ವಂಚಿತ ಅಶೋಕ್ ಪೂಜಾರಿಯನ್ನು ಕಣಕ್ಕಿಳಿಸಿದೆ. ಬಿಜೆಪಿಗೆ ಹೋಗುವ ಲಿಂಗಾಯತ ಮತಗಳನ್ನು ಸಾಧ್ಯವಾದಷ್ಟು ವಿಭಜನೆ ಮಾಡುವ ನಿಟ್ಟಿನಲ್ಲಿ ಅಶೋಕ್ ಪೂಜಾರಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ.

ಕುಮಾರಸ್ವಾಮಿ ಅವರ ತಂತ್ರಕ್ಕೆ ಬಿಎಸ್​ವೈ ಪ್ರತಿತಂತ್ರ ರೂಪಿಸಿದ್ದು, ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರದಿದ್ದರೆ ತಲೆದಂಡಕ್ಕೆ ಸಜ್ಜಾಗಿ ಎಂದು ಸಿಎಂ ಯಡಿಯೂರಪ್ಪ ಸಚಿವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ನಾವು ಸರ್ಕಾರ ರಚಿಸಲು ನೆರವಾಗುವಂತೆ ತಮ್ಮ ಶಾಸಕ ಸ್ಥಾನವನ್ನು ಬಿಟ್ಟು ಬಂದವರು ಗೆಲ್ಲುವಂತೆ ನೋಡಿಕೊಳ್ಳುವುದು ನಮ್ಮ ಮೊದಲ ಗುರಿ ಎಂದು ಹೇಳಿದ್ದಾರೆ. ಅವರನ್ನು ಗೆಲ್ಲಿಸಬೇಕು. ಅದಕ್ಕಾಗಿ ಸರ್ವ ರೀತಿಯ ತಂತ್ರಗಳನ್ನೂ ಬಳಸಬೇಕು. ಮತ್ತು ಇದಕ್ಕಾಗಿ ಸಚಿವರೆಲ್ಲರೂ ತಮಗೆ ವಹಿಸಿದ ಕ್ಷೇತ್ರಗಳಿಗೆ ಹೋಗಿ ಬೀಡು ಬಿಡಬೇಕು ಎಂದು ಯಡಿಯೂರಪ್ಪ ಅವರು ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಸಚಿವರಿಗೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.

Intro:ಬೆಂಗಳೂರು : ರಾಜ್ಯದಲ್ಲಿ 15 ಕ್ಷೇತ್ರಗಳ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಒಂದೆಡೆ ಸರ್ಕಾರ ಉಳಿಸಿಕೊಳ್ಳಲು 8 ಕ್ಷೇತ್ರ ಗೆಲ್ಲಲೇ ಬೇಕಾದ ಅನಿವಾರ್ಯತೆ ಬಿಜೆಪಿಗೆ ಎದುರಾಗಿದ್ದರೆ, ಮತ್ತೊಂದೆಡೆ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ ಅನರ್ಹ ಶಾಸಕರಿಗೆ ತಕ್ಕ ಪಾಠ ಕಲಿಸಲೇಬೇಕೆಂಬುದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಹಠವಾಗಿದೆ. Body:ಗೇಮ್ ಪ್ಲಾನ್ ಏನು? : ಮೈತ್ರಿ ಸರ್ಕಾರ ಬೀಳಿಸಲು ಕಾರಣರಾದ 15 ಅನರ್ಹ ಶಾಸಕರ ಪೈಕಿ ಹತ್ತು ಮಂದಿಯನ್ನು ಗುರಿಯಾಗಿರಿಸಿಕೊಂಡಿರುವ ಕುಮಾರಸ್ವಾಮಿ ಅವರು ಹೊಸ ಹೊಸ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಗೆದ್ದರೂ ತೊಂದರೆಯಿಲ್ಲ. ಬಿಜೆಪಿಯಿಂದ ಅಭ್ಯರ್ಥಿಗಳಾಗಿರುವ ಅನರ್ಹ ಶಾಸಕರು ಮಾತ್ರ ಗೆಲ್ಲಲೇಬಾರದೆಂಬುದು ಹೆಚ್ ಡಿಕೆ ರಣತಂತ್ರವಾಗಿದೆ. ಹಾಗಾಗಿ, ತಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲು ಸಾಧ್ಯವಾಗದ ಕಡೆ ವಿಭಿನ್ನ ಕಾರ್ಯಯೋಜನೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ.
ಪ್ರಮುಖವಾಗಿ ಮಹಾಲಕ್ಷ್ಮಿಲೇಔಟ್ ನ ಕೆ.ಗೋಪಾಲಯ್ಯ, ಹುಣಸೂರು ಕ್ಷೇತ್ರದ ಹೆಚ್.ವಿಶ್ವನಾಥ್, ಕೆ.ಆರ್.ಪೇಟೆ ಕ್ಷೇತ್ರದ ನಾರಾಯಣಗೌಡ, ಹೊಸಕೋಟೆ ಕ್ಷೇತ್ರದ ಎಂಟಿಬಿ ನಾಗರಾಜ್, ಚಿಕ್ಕಬಳ್ಳಾಪುರ ಕ್ಷೇತ್ರದ ಡಾ.ಕೆ. ಸುಧಾಕರ್, ಯಶವಂತಪುರ ಕ್ಷೇತ್ರದ ಎಸ್.ಟಿ.ಸೋಮಶೇಖರ್, ಕೆ.ಆರ್. ಪುರ ಕ್ಷೇತ್ರದ ಭೈರತಿ ಬಸವರಾಜ್, ಗೋಕಾಕ್ ಕ್ಷೇತ್ರದ ರಮೇಶ್ ಜಾರಕಿಹೊಳಿ ಅವರು, ಕುಮಾರಸ್ವಾಮಿ ಅವರ ಟಾರ್ಗೆಟ್ ನಲ್ಲಿದ್ದು ಹೇಗಾದರೂ ಮಾಡಿ ಇವರನ್ನು ಸೋಲಿಸಲೇಬೇಕೆಂದು ತಮ್ಮ ಪಕ್ಷದ ನಾಯಕರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೊನ್ನೆ ನಡೆದ ಅನೌಪಚಾರಿಕೆ ಸಭೆಯಲ್ಲಿ ತಮ್ಮ ಪಕ್ಷದ ಮಾಜಿ ಸಚಿವರು ಹಾಗೂ ಶಾಸಕರಿಗೆ ಈ ಕುರಿತ ಮಾಹಿತಿ ರವಾನಿಸಿದ್ದು, ಶತಾಯಗತಾಯ ಅನರ್ಹ ಶಾಸಕರನ್ನು ಮಣಿಸಬೇಕು. ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಮೊದಲ ಆದ್ಯತೆ ನೀಡಬೇಕು. ನಂತರ ಅನರ್ಹ ಶಾಸಕರ ಸೋಲಿಗೆ ಶ್ರಮಿಸಬೇಕೆಂದು ಕುಮಾರಸ್ವಾಮಿ ಅವರು ಸೂಚನೆ ಕೊಟ್ಟಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸ್ಥಳೀಯ ಕಾರ್ಯಕರ್ತರು ಮತ್ತು ನಾಯಕರ ವಿರೋಧದ ಮಧ್ಯೆಯೂ ಕುಮಾರಸ್ವಾಮಿ ಅವರು ಎರಡು ಬಾರಿ ನಾರಾಯಣಗೌಡರಿಗೆ ಕೆಆರ್ ಪೇಟೆಯಲ್ಲಿ ಜೆಡಿಎಸ್ ಟಿಕೆಟ್ ನೀಡಿದ್ದರು. ದೇವೇಗೌಡರ ಕುಟುಂಬದವರ ಬಗ್ಗೆ ಮಾತನಾಡಿರುವ ಕೆ.ಆರ್.ಪೇಟೆ ಅನರ್ಹ ಶಾಸಕ ನಾರಾಯಣಗೌಡರನ್ನು ಸೋಲಿಸಲು ಕಾರ್ಯತಂತ್ರಗಳನ್ನು ರೂಪಿಸಲಾಗಿದೆ. ಅದೇ ರೀತಿ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲೂ ಸಹ ಸ್ಥಳೀಯ ಜೆಡಿಎಸ್ ನಾಯಕರ ವಿರೋಧದ ಮಧ್ಯೆಯೂ ಕುಮಾರಸ್ವಾಮಿ ಅವರು ಗೋಪಾಲಯ್ಯಗೆ ಟಿಕೆಟ್ ನೀಡಿ ಗೆಲ್ಲಿಸಿದ್ದರು. ಅವರ ಪತ್ನಿ ಹೇಮಲತಾರನ್ನು ಉಪಮೇಯರ್ ಆಗಿ ಮಾಡಲಾಗಿತ್ತು. ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ್ದರೂ ಅವರನ್ನು ಕ್ಷಮಿಸಿ ಪಕ್ಷಕ್ಕೆ ವಾಪಸ್ ಸೇರಿಸಿಕೊಳ್ಳಲಾಗಿತ್ತು. ಆದರೂ ಗೋಪಾಲಯ್ಯ ನಂಬಿಕೆಗೆ ದ್ರೋಹ ಮಾಡಿದರೆಂಬ ಸಿಟ್ಟು ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರಿಗಿದೆ. ಮಹಾಲಕ್ಷ್ಮೀ ಲೇಔಟ್ನಲ್ಲಿ ಪ್ರಬಲರಲ್ಲದಿದ್ದರೂ ಡಾ. ಗಿರೀಶ್ ನಾಶಿ ಎಂಬುವರಿಗೆ ಟಿಕೆಟ್ ನೀಡಿರುವುದರ ಹಿಂದೆ ಕುಮಾರಸ್ವಾಮಿ ಬೇರೆಯೇ ತಂತ್ರಗಾರಿಕೆ ಇದೆ ಎನ್ನಲಾಗಿದೆ.
ಇನ್ನು ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್ ಒಕ್ಕಲಿಗ ಸಮುದಾಯದರಾಗಿಯೂ ತಮ್ಮ ಸರ್ಕಾರ ಬೀಳಿಸಿದರೆಂಬ ಸಿಟ್ಟು, ಜೊತೆಗೆ ಕುಮಾರಸ್ವಾಮಿ ವಿರುದ್ಧ ವೈಯಕ್ತಿಕ ಮಟ್ಟದಲ್ಲಿ ಟೀಕೆಗಳನ್ನು ಮಾಡಿದರೆಂಬ ಕೋಪವೂ ಇದೆ. ಅಲ್ಲಿ, ಕಾಂಗ್ರೆಸ್ ಪಕ್ಷಕ್ಕೆ ಸಹಾಯವಾಗುವಂತೆ ಜೆಡಿಎಸ್ ಅಭ್ಯರ್ಥಿ ಹಾಕಿದೆ. ಎಸ್.ಟಿ. ಸೋಮಶೇಖರ್ ಒಕ್ಕಲಿಗರಾಗಿರುವುದರಿಂದ ಈ ಸಮುದಾಯದ ಮತಗಳು ವಿಭಜನೆಯಾಗುವಂತೆ ಟಿ.ಎನ್. ಜವರಾಯಿಗೌಡರನ್ನು ಕಣಕ್ಕಿಳಿಸಿದೆ. ಇದರಿಂದ ಕಾಂಗ್ರೆಸ್ ಅಭ್ಯರ್ಥಿ ಪಿ. ನಾಗರಾಜ್ ಗೆಲುವಿಗೆ ಸಹಕಾರಿಯಾಗುವ ನಿರೀಕ್ಷೆ ಇದೆ.
ಶರತ್ ಬಚ್ಚೇಗೌಡ ಅವರು ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಹಾಕಿದರೆ ಒಕ್ಕಲಿಗ ಮತಗಳು ಹಂಚಿಕೆಯಾಗಿ ಶರತ್ ಬಚ್ಚೇಗೌಡ ಗೆಲುವಿಗೆ ಕಷ್ಟವಾಗಬಹುದು. ಅದಕ್ಕೆ ಅಭ್ಯರ್ಥಿ ಹಾಕದಿದ್ದರೆ ಎಂಟಿಬಿ ನಾಗರಾಜ್ ಸೋಲು ಸುಲಭವಾಗುತ್ತದೆ ಎಂಬುದು ಕುಮಾರಸ್ವಾಮಿ ಲೆಕ್ಕಾಚಾರ.
ಮೈತ್ರಿ ಸರ್ಕಾರದ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ. ಸುಧಾಕರ್ ಅವರನ್ನು ಉಪಚುನಾವಣೆಯಲ್ಲಿ ಸೋಲಿಸಲೇಬೇಕೆಂದು ಕುಮಾರಸ್ವಾಮಿ ಅವರು ಪಣತೊಟ್ಟಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಆಂಜಿನಪ್ಪಗೆ ನೆರವಾಗಲೆಂದೇ ಇಲ್ಲಿಯೂ ಜೆಡಿಎಸ್ ನಿಂದ ಪ್ರಭಾವಿಯಲ್ಲದ ರಾಧಾಕೃಷ್ಣ ಎಂಬುವರನ್ನು ಕಣಕ್ಕಿಳಿಸಿದೆ. ಇಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರ ಒಳ ಒಪ್ಪಂದ ನಡೆದಿದೆ ಎಂದು ಹೇಳಲಾಗುತ್ತಿದೆ.
ಆಪರೇಷನ್ ಕಮಲದ ಮುಖ್ಯ ರೂವಾರಿ ಎಂದೇ ಹೇಳಲಾಗುತ್ತಿದ್ದ ರಮೇಶ್ ಜಾರಕಿಹೊಳಿ ಅವರನ್ನು ಮಣಿಸಲು ಜೆಡಿಎಸ್ ಪ್ರಬಲ ಅಭ್ಯರ್ಥಿಯಾದ ಬಿಜೆಪಿ ಟಿಕೆಟ್ ವಂಚಿತ ಅಶೋಕ್ ಪೂಜಾರಿಯನ್ನು ಕಣಕ್ಕಿಳಿಸಿದೆ. ಬಿಜೆಪಿಗೆ ಹೋಗುವ ಲಿಂಗಾಯತ ಮತಗಳನ್ನು ಸಾಧ್ಯವಾದಷ್ಟು ವಿಭಜನೆ ಮಾಡುವ ನಿಟ್ಟಿನಲ್ಲಿ ಅಶೋಕ್ ಪೂಜಾರಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ.
ಕುಮಾರಸ್ವಾಮಿ ಅವರ ತಂತ್ರಕ್ಕೆ ಬಿಎಸ್ ವೈ ಪ್ರತಿತಂತ್ರ ರೂಪಿಸಿದ್ದು, ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರದಿದ್ದರೆ ತಲೆದಂಡಕ್ಕೆ ಸಜ್ಜಾಗಿ ಎಂದು ಸಿಎಂ ಯಡಿಯೂರಪ್ಪ ಸಚಿವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ನಾವು ಸರ್ಕಾರ ರಚಿಸಲು ನೆರವಾಗುವಂತೆ ತಮ್ಮ ಶಾಸಕ ಸ್ಥಾನವನ್ನು ಬಿಟ್ಟು ಬಂದವರು ಗೆಲ್ಲುವಂತೆ ನೋಡಿಕೊಳ್ಳುವುದು ನಮ್ಮ ಮೊದಲ ಗುರಿ ಎಂದು ಹೇಳಿದ್ದಾರೆ. ಅವರನ್ನು ಗೆಲ್ಲಿಸಬೇಕು.ಅದಕ್ಕಾಗಿ ಸರ್ವ ರೀತಿಯ ತಂತ್ರಗಳನ್ನೂ ಬಳಸಬೇಕು. ಮತ್ತು ಇದಕ್ಕಾಗಿ ಸಚಿವರೆಲ್ಲರೂ ತಮಗೆ ವಹಿಸಿದ ಕ್ಷೇತ್ರಗಳಿಗೆ ಹೋಗಿ ಬೀಡು ಬಿಡಬೇಕು ಎಂದು ಯಡಿಯೂರಪ್ಪ ಅವರು ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಸಚಿವರಿಗೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.