ETV Bharat / state

ಕೊರೊನಾ ಭೀತಿ ನಡುವೆ ಬಿಬಿಎಂಪಿಯಿಂದ ಕರಗ ಉತ್ಸವಕ್ಕೆ ಸಿದ್ಧತೆ - ಕರಗ ಉತ್ಸವ

ನಗರದ ಐತಿಹಾಸಿಕ ಕರಗ ಮಹೋತ್ಸವದ ಸಿದ್ಧತೆ ಕುರಿತು ಬಿಬಿಎಂಪಿ ಮೇಯರ್​ ಅವರು ಧರ್ಮರಾಯ ದೇವಸ್ಥಾನದ ಆಡಳಿತದ ಮಂಡಳಿ ಹಾಗೂ ಸಮಾಜದ ಮುಖಂಡರ ಜೊತೆ ಸಭೆ ನಡೆಸಿದರು.

Karaga Festival
ಬಿಬಿಎಂಪಿಯಿಂದ ಕರಗ ಉತ್ಸವಕ್ಕೆ ಸಿದ್ಧತೆ
author img

By

Published : Mar 11, 2020, 7:33 PM IST

ಬೆಂಗಳೂರು: ನಗರದಲ್ಲಿ ಕೊರೊನಾ ವೈರಸ್ ಪತ್ತೆಯಾಗಿರುವುದರಿಂದ ಸರ್ಕಾರ ಈಗಾಗಲೇ ಸಭೆ, ಸಮಾರಂಭಗಳನ್ನು ನಡೆಸಬಾರದೆಂದು ಸೂಚನೆ ನೀಡಿದೆ. ಆದರೂ ಕರಗ ಸಂಭ್ರಮ ನಡೆಯುತ್ತದೆ ಎಂದು ಮೇಯರ್ ಗೌತಮ್ ಕುಮಾರ್ ಹೇಳಿದರು.

ನಗರದ ಐತಿಹಾಸಿಕ ಕರಗ ಮಹೋತ್ಸವದ ಸಿದ್ಧತೆ ಕುರಿತು ಬಿಬಿಎಂಪಿ ಮುಖಂಡರು, ಧರ್ಮರಾಯ ದೇವಸ್ಥಾನದ ಆಡಳಿತದ ಮಂಡಳಿ ಹಾಗೂ ಸಮಾಜದ ಮುಖಂಡರ ಜೊತೆ ಅವರು ಸಭೆ ನಡೆಸಿದರು.

ಬಿಬಿಎಂಪಿಯಿಂದ ಕರಗ ಉತ್ಸವಕ್ಕೆ ಸಿದ್ಧತೆ

ಏಪ್ರಿಲ್ 8ರಂದು ಮುಖ್ಯ ಕರಗವು, ಸಾಂಪ್ರದಾಯಿಕ-ಪಾರಂಪಾರಿಕವಾದ ರೀತಿಯಲ್ಲಿ ನಡೆಯಲಿದೆ. ಪಾಲಿಕೆಯಿಂದ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಳ್ಳಲಾಗುತ್ತಿದೆ. ಈ ಬಾರಿ ಕರಗ ಮಹೋತ್ಸವ ಯಶಸ್ವಿಯಾಗಿ ಜರುಗಲಿದೆ. ನಾಳೆ ಬೆಳಗ್ಗೆ 7 ಗಂಟೆಗೆ ದೇವಸ್ಥಾನಕ್ಕೆ ಭೇಟಿ ನೀಡಲಾಗುವುದು. ಪಾಲಿಕೆ ವತಿಯಿಂದ ಎಲ್ಲಾ ಕ್ರಮಗಳನ್ನ ಕೈಗೊಳ್ಳಲಾಗುವುದು. ಕೊರೊನಾ ವೈರಸ್, ಕಾಲರಾದಿಂದ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯ ಪಿ.ಆರ್. ರಮೇಶ್ ಮಾತನಾಡಿ, ಕರಗ ನಡೆಯುತ್ತಿರೋದು ಏಪ್ರಿಲ್ 8ರಂದು. ನಮಗೆ ಇನ್ನೂ ಕಾಲಾವಕಾಶ ಇದೆ. ಹಿಂದೆ ಪ್ಲೇಗ್​ನಂತಹ ಮಹಾಮಾರಿ ಸಮಯದಲ್ಲೂ ಕರಗ ಮಾಡಿದ್ದೇವೆ. ಬ್ರಿಟಿಷರ ಸಮಯದಲ್ಲಿ ಕರ್ಫ್ಯೂ ಇದ್ದಾಗಲೂ ಕರಗ ಆಚರಣೆ ಮಾಡಿದ್ದೇವಿ. ದ್ರೌಪದಿ ದೇವಿಯ ಶಕ್ತಿಯಿಂದ ಆಚರಣೆಗೆ ಯಾವುದೇ ಸಮಸ್ಯೆ ಆಗೋದಿಲ್ಲ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಆಯುಕ್ತ ಅನಿಲ್ ಕುಮಾರ್ ಮಾತನಾಡಿ, ಕೊರೊನಾ ವೈರಸ್ ಭೀತಿ ನಮ್ಮಲ್ಲಿ ಇನ್ನೂ ಇದೆ. ಕರಗ ಆಚರಣೆ ವೇಳೆ ಯಾವೆಲ್ಲಾ ಕ್ರಮ ಕೈಗೊಳ್ಳಬೇಕು ಎನ್ನುವ ಕುರಿತಂತೆ ಚರ್ಚೆ ನಡೆಸಿದ್ದೇವೆ. ಕರಗ ಸಾಗುವ ಮಾರ್ಗದಲ್ಲಿ ಶುಚಿತ್ವ ಕಾಪಾಡುವ ಕುರಿತಂತೆ ತೀರ್ಮಾನ ಮಾಡಲಾಗಿದೆ. ಇಂದು ಕರಗ ನಡೆಸುವ ಬಗ್ಗೆ ತೀರ್ಮಾನ ಮಾಡಿದ್ದೇವೆ. ಆದರೆ ಇದೇ ಅಂತಿಮ ತೀರ್ಮಾನವಲ್ಲ. ಕರಗ ನಡೆಯುವ 24 ಗಂಟೆ ಮುಂಚೆನೂ ಕ್ಯಾನ್ಸಲ್ ಮಾಡುವ ಸಂಭವವಿದೆ ಎಂದು ತಿಳಿಸಿದರು.

ಕರಗ ಮಹೋತ್ಸವ ದಿನದಂದೇ ಬಿಬಿಎಂಪಿಯಿಂದ ಕೆಂಪೇಗೌಡ ಉತ್ಸವ ಆಚರಣೆ ನಡೆಯಲಿದೆ. ಏಪ್ರಿಲ್ 8ಕ್ಕೆ ಪ್ರಮುಖ ಕರಗ ಮಹೋತ್ಸವ ನಡೆಸಲು ಪಾಲಿಕೆ ಹಾಗೂ ಧರ್ಮರಾಯ ದೇವಸ್ಥಾನ ತೀರ್ಮಾನ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.