ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ,ವಿಶ್ವವಿದ್ಯಾಲಯದ ರಜತ ಮಹೋತ್ಸವದ ನಿಮಿತ್ತ ಕನ್ನಡ ವೈದ್ಯಕೀಯ ಸಾಹಿತ್ಯ ಸಮ್ಮೇಳನವನ್ನು ಮೇ22 ಮತ್ತು 23ರಂದು ಆಯೋಜಿಸಿದೆ.
ಸಂಪೂರ್ಣ ಕಾರ್ಯಕ್ರಮವನ್ನು ವರ್ಚುಯಲ್ ಮೂಲಕ ನಡೆಸಲಾಗುತ್ತಿದ್ದು, ಸಚಿವ ಡಾ. ಕೆ.ಸುಧಾಕರ್ ಉದ್ಘಾಟನೆ ಮಾಡಲಿದ್ದಾರೆ. ಸಮ್ಮೇಳನಾಧ್ಯಕ್ಷರಾಗಿ ನಾಡೋಜ.ಡಾ ಪಿ.ಎಸ್. ಶಂಕರ್, ಎಮೆರಿಟಸ್ ಪ್ರೊಫೆಸರ್, ವೈದ್ಯಕೀಯ ನಿರ್ದೇಶಕರು, ಕೆ.ಬಿ.ಎನ್ ಆಸ್ಪತ್ರೆ, ಕಲಬುರಗಿ ಇವರನ್ನು ಆಯ್ಕೆಮಾಡಲಾಗಿದೆ. ಇನ್ನು ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಭಾಗಿಯಾಗಲಿದ್ದಾರೆ.
ಸಮ್ಮೇಳನದಲ್ಲಿ ಒಟ್ಟು 10 ಗೋಷ್ಠಿ ನಡೆಯಲಿದ್ದು, ಪ್ರತಿಯೊಂದು ಗೋಷ್ಠಿಯಲ್ಲಿ ಒಬ್ಬರು ಅಧ್ಯಕ್ಷರು ಹಾಗೂ ಒಬ್ಬರು ಸಹ ಅಧ್ಯಕ್ಷರು ಭಾಗವಹಿಸಲಿದ್ದಾರೆ. ಪ್ರತಿಯೊಂದು ಗೋಷ್ಠಿಯಲ್ಲಿ 3/4 ವೈದ್ಯ ಸಾಹಿತಿಗಳು ಭಾಗವಹಿಸಿ ಪ್ರಬಂಧ ಮಂಡನೆ ಮಾಡಲಿದ್ದಾರೆ. ಭವಿಷ್ಯತ್ತಿನ ವೈದ್ಯ ಚಿಕಿತ್ಸೆ,ವೈದ್ಯಕೀಯ ಬ್ಯಾಂಕುಗಳು, ಕನ್ನಡ ಮಾಧ್ಯಮದಲ್ಲಿ ವೈದ್ಯಕೀಯ ಶಿಕ್ಷಣ ಸವಾಲುಗಳು, ಆರೋಗ್ಯ ಸುಧಾರಣೆಗೆ ವಿವಿಧ ವೈದ್ಯ ಪದ್ಧತಿಗಳ ಕೊಡುಗೆ, ಸೇರಿದಂತೆ ವೈದ್ಯಕೀಯ ಮುನ್ನಡೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈದ್ಯಕೀಯ ವಿದ್ಯಮಾನಗಳು ಎಂಬ ವಿಷಯಗಳ ಕುರಿತು ಗೋಷ್ಠಿ ನಡೆಯಲಿದೆ.
ಕೆಳಗಿನ ಲಿಂಕ್ ಮೂಲಕ ಗೋಷ್ಠಿ ವೀಕ್ಷಣೆ ಮಾಡಬಹುದು:
Facebook live link : https://www.facebook.com/VCRGUHS/live/
YouTube live links :
22.05.2021: https://youtu.be/XKilQ3t8PPQ
23.05.2021: https://youtu.be/PQN1mP6a2wc