ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಕಾರ್ಯಕ್ರಮ ರಾಜ್ಯದಲ್ಲಿ ನಡೆಯುತ್ತಿದ್ದು, ಕಾರ್ಯಕ್ರಮಗಳಲ್ಲಿ ಕನ್ನಡ ಬಳಕೆ ಮಾಡದೇ ಕಡೆಗಣನೆ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕನ್ನಡಕ್ಕೆ ಅವಮಾನ ಮಾಡುತ್ತಿರೋದು ಸ್ಪಷ್ಟವಾಗಿದೆ. ಕನ್ನಡ ಭಾಷೆಯನ್ನು ಹತ್ತಿಕ್ಕುವ ಹುನ್ನಾರದ ವಾತಾವರಣ ಕಂಡು ಬರ್ತಿದೆ. ಕೇಂದ್ರ ಮತ್ತು ರಾಜ್ಯಕ್ಕೆ ಆಗ್ರಹ ಮಾಡ್ತೀನಿ. ಈ ರೀತಿ ಬೆಳವಣಿಗೆಯಾದಾಗ ನಿಮ್ಮನ್ನ ನೀವು ದೂರಿಕೊಳ್ಳಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿ ರೈತ ಪ್ರತಿಭಟನೆಗೆ ಪಾಪ್ ಗಾಯಕಿ ರಿಹಾನ್ನಾ ಬೆಂಬಲ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಿದೇಶದ ಕೆಲ ರಂಗದಲ್ಲಿ ಕೆಲಸ ಮಾಡುವವರು ಹೇಳಿಕೆ ನೀಡಿದ್ದಾರೆ. ಅವರ ದೇಶದ ರೈತರ ಬಗ್ಗೆ ಹೇಳಿಕೆಗಳನ್ನು ನಾನು ಚರ್ಚೆ ಮಾಡೋದಿಲ್ಲ. ಆದರೆ, ಮನವಿ ಏನೆಂದರೆ ಈ ರೀತಿ ಉತ್ತರ ಭಾರತದಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದೆ. ಪ್ರಧಾನಿಯವರಿಗೆ ಮನವಿ ಮಾಡುತ್ತೇನೆ. ಅವರು ರೈತ ಸಂಘಟನೆಗಳ ಜೊತೆ ಚರ್ಚಿಸಬೇಕಿದೆ. ರೈತರ ಬಗ್ಗೆ ಕೆಲ ಅನುಮಾನ ವ್ಯಕ್ತಪಡಿಸುತ್ತಿದ್ದು, ಈ ಬಗ್ಗೆ ಮನವೊಲಿಸೋದು ಸೂಕ್ತ ಎಂದು ಸಲಹೆ ನೀಡಿದರು.
ಓದಿ: ಕನ್ನಡಕ್ಕೆ ಕನ್ನಡ ನೆಲದಲ್ಲೇ ಅಪಚಾರ.. ಮಾಜಿ ಸಿಎಂ ಹೆಚ್ಡಿಕೆ ಖಂಡನೆ..
ರಸ್ತೆಯಲ್ಲಿ ಮಳೆ ಹೊಡೆದು, ಕಂಬಿ ಕಟ್ಟಿ ಹತ್ತಿಕ್ಕುವುದರಿಂದ ಸರ್ಕಾರದ ಮೇಲೆ ದುಷ್ಪರಿಣಾಮ ಬೀರಲಿದೆ. ಕೂಡಲೇ ಈ ವಿಚಾರದಲ್ಲಿ ಕೇಂದ್ರ ಎಚ್ಚೆತ್ತುಕೊಳ್ಳುವುದು ಸೂಕ್ತ ಎಂದು ಹೆಚ್ಡಿಕೆ ಸಲಹೆ ನೀಡಿದರು.