ಬೆಂಗಳೂರು: ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿಗಾಗಿ ಕಂಪ್ಲಿ ಗಣೇಶ್ ಸಲ್ಲಿಸಿದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ನಲ್ಲಿ ನಡೆಯಿತು.
ಇನ್ನು ಕಂಪ್ಲಿ ಗಣೇಶ್ ಪರ ವಕೀಲರು ಚುನಾವಣಾ ಸಮಯವಾಗಿದ್ದರಿಂದ ಆದಷ್ಟು ಬೇಗ ಅರ್ಜಿ ವಿಚಾರಣೆ ಮುಗಿಸಬೇಕು. ಅದಲ್ಲದೆ ಗಣೇಶ್ ಒರ್ವ ಶಾಸಕರಾಗಿರುವ ಕಾರಣದಿಂದ ಈ ಸಮಯದಲ್ಲಿ ಅವರ ಕ್ಷೇತ್ರದ ಮತದಾರರಿಗೆ ಗಣೇಶ್ ಅವರ ಲಭ್ಯತೆ ಅವಶ್ಯಕ ಹಾಗಾಗಿ ಜಾಮೀನು ನೀಡುವಂತೆ ಗಣೇಶ್ ಪರ ವಕೀಲ ಶ್ಯಾಮ್ ಸುಂದರ್ ಮನವಿ ಮಾಡಿದರು.
ಆರೋಪಿ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಏಪ್ರಿಲ್ 8ಕ್ಕೆ ನಿಗದಿ ಮಾಡಿ ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.
ಸದ್ಯ ಕಂಪ್ಲಿ ಗಣೇಶ್ ಪರಪ್ಪನ ಅಗ್ರಹಾರ ಜೈಲಲ್ಲಿ ಇದ್ದು ಲೋಕಸಭೆ ಎಲೆಕ್ಷನ್ಗಿಂತ ಮುಂಚೆ ತನಗೆ ಜಾಮೀನು ಸಿಗುತ್ತೆ ಅನ್ನೋ ನೀರಿಕ್ಷೆಯಲ್ಲಿದ್ದಾರೆ. ಆದರೆ ಇಂದು ಹೈಕೋರ್ಟ್ ಅರ್ಜಿಯನ್ನ 8ಕ್ಕೆ ಮುಂದೂಡಿಕೆ ಮಾಡಿದ್ದು ಗಣೇಶ್ಗೆ ಮತ್ತೊಮ್ಮೆ ನಿರಾಸೆಯಾಗಿದೆ.