ETV Bharat / state

ಆಸ್ಪತ್ರೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಇನ್ಸ್​ಪೆಕ್ಟರ್​ಗೂ ಕೊರೊನಾ ದೃಢ - ಕಲಾಸಿಪಾಳ್ಯ ಪೊಲೀಸ್​ ಠಾಣೆ ಇನ್ಸ್​ಪೆಕ್ಟರ್​ಗೆ ಕೊರೊನಾ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವಾರಿಯರ್​ಗಳಿಗೂ ಮಹಾಮಾರಿ ಸೋಂಕು ತಗುಲುತ್ತಿರುವ ಪ್ರಕರಣ ಹೆಚ್ಚುತ್ತಿದ್ದು, ಬೆಂಗಳೂರಿನ ಕಲಾಸಿಪಾಳ್ಯ ಪೊಲೀಸ್​ ಠಾಣೆಯ ಇನ್ಸ್​ಪೆಕ್ಟರ್​ಗೂ ಕೂಡ ಪಾಸಿಟಿವ್​ ಬಂದಿದೆ.

kalasipalya-police-inspector-found-covid-19-positive
ಪೊಲೀಸ್ ಇನ್ಸ್​ಪೆಕ್ಟರ್​ಗೂ ಕೊರೊನಾ ದೃಢ
author img

By

Published : Jul 1, 2020, 7:48 AM IST

ಬೆಂಗಳೂರು: ಕಲಾಸಿಪಾಳ್ಯ ಪೊಲೀಸ್​ ಠಾಣೆಯ ಇನ್ಸ್​ಪೆಕ್ಟರ್​ಗೆ ಕೂಡ ಕೊರೊನಾ ಸೋಂಕು ತಗುಲಿದೆ. ಈಗಾಗಲೇ ಠಾಣೆಯ ಸುಮಾರು 30ಕ್ಕೂ ಹೆಚ್ಚು ಮಂದಿಯಲ್ಲಿ ಕೊರೊನಾ ಸೋಂಕು ಧೃಡವಾಗಿದೆ.

ಇನ್ಸ್​ಪೆಕ್ಟರ್ ಕಳೆದ ಹತ್ತು ದಿನದಿಂದ ಕಲಾಸಿಪಾಳ್ಯ ಮಾರ್ಕೆಟ್ ಬಂದೋಬಸ್ತ್​ನಲ್ಲಿ ತೊಡಗಿದ್ದರು. ಸದ್ಯ ಇವರನ್ನ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಇವರ ಸಂಪರ್ಕದಲ್ಲಿರುವವರನ್ನ ಕ್ವಾರಂಟೈನ್ ಮಾಡಲಾಗಿದೆ. ಈ ಹಿಂದೆ ಆಸ್ಪತ್ರೆಯಲ್ಲಿ ಸೂಕ್ತ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಈ ಇನ್ಸ್​ಪೆಕ್ಟರ್ ಆರೋಪ‌ ಮಾಡಿದ್ದರು.

ಈಗಾಗಲೇ ಕಲಾಸಿಪಾಳ್ಯ ಠಾಣೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟು, ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ 15 ಸಿಬ್ಬಂದಿಗೆ ಸರಿಯಾದ ಬೆಡ್ ಸಿಕ್ತಿಲ್ಲ, ವೈದ್ಯರಿಗೆ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಪೋನ್ ಮಾಡಿದ್ರೆ ಸರಿಯಾದ ಸ್ಪಂದನೆ ನೀಡಲ್ಲ. ಪೋನ್ ಕೂಡ ರಿಸೀವ್ ಮಾಡಲ್ಲ. ಒಂದು ವೇಳೆ ವೈದ್ಯರು ಫೋನ್​ ಕರೆಯನ್ನು ರಿಸೀವ್ ಮಾಡಿದರೂ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಮಾತನಾಡುತ್ತಾರೆ‌ ಎಂಬ ವಿಚಾರವನ್ನು ಆಡಿಯೋ ಮೂಲಕ ತಿಳಿಸಿದ್ದರು. ಸದ್ಯ ಆಕ್ರೋಶ ವ್ಯಕ್ತಪಡಿಸಿದ ಠಾಣಾಧಿಕಾರಿಗೆ ಕೊರೊನಾ ಸೋಂಕು ದೃಢವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.