ETV Bharat / state

ಸಾಲುಮರದ ತಿಮ್ಮಕ್ಕಗೆ ಕಲಬುರಗಿ ಸೆಂಟ್ರಲ್ ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ - ಗೌರವ ಡಾಕ್ಟರೆಟ್ ಪ್ರದಾನ

ಬೆಂಗಳೂರಿನ ಯಶವಂತಪುರ ಸೋಪ್ ಫ್ಯಾಕ್ಟರಿ ಸಮೀಪ ಇರುವ ಸಾಲುಮರದ ತಿಮ್ಮಕ್ಕ ಅವರ ನಿವಾಸಕ್ಕೆ ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಮಹೇಶ್ವರಯ್ಯ ತೆರಳಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದಾರೆ.

Saalumarada Thimmakka
ಸಾಲುಮರದ ತಿಮ್ಮಕ್ಕ
author img

By

Published : Nov 7, 2020, 5:13 PM IST

ಬೆಂಗಳೂರು: ಕಲಬುರಗಿ ಸೆಂಟ್ರಲ್ ವಿವಿಯಿಂದ ಪರಿಸರವಾದಿ ಸಾಲುಮರದ ತಿಮ್ಮಕ್ಕಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಬೆಂಗಳೂರಿನ ಯಶವಂತಪುರ ಸೋಪ್ ಫ್ಯಾಕ್ಟರಿ ಸಮೀಪ ಇರುವ ಸಾಲುಮರದ ತಿಮ್ಮಕ್ಕ ಅವರ ನಿವಾಸಕ್ಕೆ ಆಗಮಿಸಿದ ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಮಹೇಶ್ವರಯ್ಯ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದಾರೆ.

ಸಾಲುಮರದ ತಿಮ್ಮಕ್ಕಗೆ ಗೌರವ ಡಾಕ್ಟರೇಟ್ ಪ್ರದಾನ

ಪರಿಸರ ಕ್ಷೇತ್ರಕ್ಕೆ ಸಾಲುಮರದ ತಿಮ್ಮಕ್ಕ ನೀಡಿರುವ ಅತ್ಯುತ್ತಮ ಕೊಡುಗೆ ಪರಿಗಣಿಸಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. ಈ ಹಿಂದೆಯೇ ನಾವು ವರ್ಚುವಲ್ ಸಭೆಯ ಮೂಲಕ ಪ್ರಶಸ್ತಿ ಪ್ರದಾನ ಮಾಡಿದ್ದೇವೆ. ರಾಜ್ಯದಲ್ಲಿ 52 ವಿಶ್ವವಿದ್ಯಾಲಯಗಳು ಇವೆ. ಆದರೆ ಕೇಂದ್ರದ ವಿಶ್ವವಿದ್ಯಾಲಯ ಇರುವುದು ಇದೊಂದೇ. ನಮ್ಮ ವಿಶ್ವವಿದ್ಯಾಲಯದ ಎಲ್ಲಾ ಸದಸ್ಯರ ಸರ್ವಸಮ್ಮತಿಯಿಂದ ಆಯ್ಕೆ ಮಾಡಲಾಗಿದೆ ಎಂದರು.

ಅಲ್ಲದೆ ಕಳೆದ ಮಾರ್ಚ್ ತಿಂಗಳಲ್ಲಿ ರಾಷ್ಟ್ರಪತಿಗಳಿಂದ ಅಂಕಿತ ಪಡೆದು ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ಸಾಲುಮರದ ತಿಮ್ಮಕ್ಕ ಅವರ ಜೊತೆ ಇಸ್ರೋ ಅಧ್ಯಕ್ಷ ಶಿವನ್, ಸಾಹಿತಿಗಳಾದ ಎಸ್.ಎಲ್.ಭೈರಪ್ಪ, ಚನ್ನವೀರ ಕಣವಿ ಹಾಗೂ ಪ್ರೊ. ಬಿರಾದಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಿ ಈಗಾಗಲೇ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ ಎಂದರು.

ರಾಷ್ಟ್ರಪತಿಗಳಿಂದ ಅಂಕಿತ ಹಾಕಲ್ಪಟ್ಟ ಐವರು ಮಹನೀಯರಿಗೂ ಅತ್ಯಂತ ಹೆಮ್ಮೆಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡುತ್ತಿದ್ದೇನೆ. ಪರಿಸರ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಹಾಗೂ ಕಾಳಜಿ ಮೆರೆದ ಸಾಲುಮರದ ತಿಮ್ಮಕ್ಕ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲು ಹೆಮ್ಮೆ ಪಡುತ್ತೇನೆ. ಇದು ಪದ್ಮಶ್ರೀ ಪ್ರಶಸ್ತಿಯಷ್ಟೇ ಗೌರವಯುತವಾದ ಪ್ರಶಸ್ತಿಯಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.