ETV Bharat / state

ಕೆಜಿಎಫ್ ಚಾಪ್ಟರ್ 2 ದಾಖಲೆ ಸರಿಗಟ್ಟಲಿದೆ ಕಬ್ಜ ಸಿನಿಮಾ ಬಿಡುಗಡೆ.. 4000 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಸಂಭವ

ಭಾರತೀಯ ಚಿತ್ರರಂಗದಲ್ಲಿ ಬೇಜಾನ್ ಸೌಂಡ್ ಮಾಡಿದ ಕಬ್ಜ ಇಂಡಿಯನ್ ಅಂಡರ್ ವರ್ಲ್ಡ್ ಸಿನಿಮಾ .. ವಿಶ್ವದಾದ್ಯಂತ 4000 ಚಿತ್ರಮಂದಿರಗಳಲ್ಲಿ ಕಬ್ಜ ಬಿಡುಗಡೆಗೆ ಸಿದ್ಧತೆ ನಿರ್ದೇಶಕ ಆರ್ ಚಂದ್ರು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ.

kabza movie
ಕಬ್ಜ ಇಂಡಿಯನ್ ಅಂಡರ್ ವರ್ಲ್ಡ್ ಸಿನಿಮಾ
author img

By

Published : Mar 8, 2023, 10:37 PM IST

ಕಬ್ಜ, ಕಬ್ಜ, ಕಬ್ಜ, ಸದ್ಯಕ್ಕೆ ಭಾರತೀಯ ಚಿತ್ರರಂಗದಲ್ಲಿ ಬೇಜಾನ್ ಸೌಂಡ್ ಮಾಡುತ್ತಿರುವ ಇಂಡಿಯನ್ ಅಂಡರ್ ವರ್ಲ್ಡ್ ಸಿನಿಮಾ. ನಿರ್ದೇಶಕ ಆರ್ ಚಂದ್ರು ಆ್ಯಕ್ಷನ್ ಕಟ್ ಹೇಳಿರುವ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಜೊತೆಗೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಸ್ಪೆಷಲ್ ಎಂಟ್ರಿ ಮತ್ತು ಅದ್ದೂರಿ ಮೇಕಿಂಗ್ ನಿಂದಲೇ ದಕ್ಷಿಣ ಭಾರತ ಅಲ್ಲದೇ ವರ್ಲ್ಡ್ ವೈಡ್ ಟಾಕ್ ಆಗುತ್ತಿರುವ ಕಬ್ಜ ಚಿತ್ರದ ಬಿಡುಗಡೆ ವಿಚಾರದಲ್ಲಿ ಕೆಜಿಎಫ್ ಚಾಪ್ಟರ್ 2 ದಾಖಲೆ ಮುರಿದಿದೆ.

ಹಾಲಿವುಡ್ ಶೈಲಿಯ ಮೇಕಿಂಗ್ ನಂತೆ ಕಬ್ಜ ಚಿತ್ರದ ಟ್ರೈಲರ್ ಮೂಡಿ ಬಂದಿದ್ದು ಬಾಲಿವುಡ್ ದಿಗ್ಗಜ ನಟರಾದ ಅಮಿತಾಬ್ ಬಚ್ಚನ್ ಹಾಗೂ ಅಜಯ್ ದೇವಗನ್,ಅಭಿಷೇಕ್ ಅಚ್ಚನ್ ಹಾಗೂ ಬಾಲಿವುಡ್ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳು ಕಬ್ಜ ಚಿತ್ರದ ದೊಡ್ಡ ಸ್ಟಾರ್ ಕಾಸ್ಟ್ ಜೊತೆಗೆ ಅದ್ದೂರಿ ಮೇಕಿಂಗ್ ನಿಂದಲೇ ಡಿಮ್ಯಾಂಡ್ ಹೆಚ್ಚಿಸಿಕೊಂಡಿರುವ ಕಬ್ಜ ಚಿತ್ರ ವಿಶ್ವದಾದ್ಯಂತ ಎಷ್ಟು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ ಅನ್ನೋದನ್ನು ನಿರ್ದೇಶಕ ಆರ್ ಚಂದ್ರು ಸಣ್ಣ ಸುಳಿವು ನೀಡಿದ್ದಾರೆ.

ಹೌದು ಕೆಜಿಎಫ್ ಚಾಪ್ಟರ್ 2 ಸಿನಿಮಾ ವಿಶ್ವದ್ಯಾಂತ 3500 ಸಾವಿರ ಚಿತ್ರಮಂದಿರಗಳಲ್ಲಿ ಬಿಡುಡಗೆ ಆಗುವ ಮೂಲಕ ದಾಖಲೆ ಬರೆದಿತ್ತು. ಇದರ ಜೊತೆಗೆ ವಿಕ್ರಾಂತ್ ರೋಣ ಸಿನಿಮಾ ಕೂಡ ವರ್ಲ್ಡ್​ವೈಡ್ ​2500 ಥಿಯೇಟರ್ ನಲ್ಲಿ ಬಿಡುಗಡೆ ಆಗುವ ಮುಖಾಂತರ ದಾಖಲೆ ಬರೆದಿದೆ. ಈಗ ಈ ಎರಡು ಸಿನಿಮಾಗಳ ಈ ದಾಖಲೆಯನ್ನ ಕಬ್ಜ ಸಿನಿಮಾ ಮುರಿದಿದ್ದು, ವಿಶ್ವದ್ಯಾಂತ ಬರೋಬ್ಬರಿ 4000 ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ ಅಂತಾ ಸ್ವತಃ ನಿರ್ದೇಶಕ ಆರ್ ಚಂದ್ರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿರುವ ಮೊದಲ ಕನ್ನಡ ಸಿನಿಮಾ ಕಬ್ಜ ಅಂತಾ ಹೇಳಲಾಗುತ್ತಿದೆ.

ಇನ್ನು ಕಬ್ಜ ಸಿನಿಮಾ ಬಗ್ಗೆ ಕ್ರಿಯೇಟ್​ ಆಗಿರೋ ಕ್ರೇಜ್​ ಅಷ್ಟಿಷ್ಟಲ್ಲ. ಇಷ್ಟೊಂದು ಎಕ್ಸ್​ಪೆಕ್ಟೇಷನ್​ ಸುಮ್​ ಸುಮ್ಮನೆ ಮೂಡಿದ್ದಲ್ಲ. ಅದರ ಹಿಂದೆ ನಿರ್ದೇಶಕ ಆರ್​. ಚಂದ್ರು ಅವರ ಪರಿಶ್ರಮ ಇದೆ. ಹಗಲು,ರಾತ್ರಿ ಎನ್ನದೇ ಕಷ್ಟಪಟ್ಟು ಕೆಲಸ ಮಾಡಿದ ದೊಡ್ಡ ಟೀಮ್​ ಇದೆ. ರೆಟ್ರೋ ಕಾಲದ ಕಥೆಯನ್ನ ತೆರೆಗೆ ತರೋದು ಅಂದ್ರೆ ಸುಲಭ ಅಲ್ಲ. ಆ ಕಾಲದ ರೀತಿ ಕಾಣೋಕೆ ಪ್ರಾಪರ್ಟೀಸ್​ ಬೇಕು. ಅದನ್ನೆಲ್ಲ ಹೊಂದಿಸುವಲ್ಲಿ ಆರ್​. ಚಂದ್ರು ಟೀಮ್​ ಕೆಲಸ ಮಾಡಿರೋದು ಟ್ರೈಲರ್ ನಲ್ಲಿ ಗೊತ್ತಾಗಿದೆ.

ಇದರ ಜೊತೆಗೆ ಕಬ್ಜ ಚಿತ್ರದ ವ್ಯಾಪಾರದ ವಿಚಾರದಲ್ಲಿ ನಿರ್ದೇಶಕ ಕಮ್ ನಿರ್ಮಾಪಕ ಆರ್ ಚಂದ್ರು ಗುಣಾಕಾರ .. ಭಾಗಾಕಾರವನ್ನೆಲ್ಲ ಮಾಡಿ ಕಬ್ಜ ಕೋಟೆಗೆ ಒಬೊಬ್ಬರನ್ನೇ ಸೇರಿಸುತ್ತಿದ್ದಾರೆ. ಈ ಮಾತಿಗೆ ಪೂರಕವಾಗಿ ಈ ಚಿತ್ರದ ಡಿಜಿಟಲ್ ರೈಟ್ಸ್ ಹಾಗೂ ಆಡಿಯೋ ರೈಟ್ಸ್ ಮತ್ತು ಬಾಲಿವುಡ್ ಹಾಗೂ ಟಾಲಿವುಡ್ ನ್ನ ಪ್ರಖ್ಯಾತಿ ವಿತರಕರಾದ ಆನಂದ್ ಪಂಡಿತ್ ಹಾಗು ತೆಲುಗು ನಟ ನಿತಿನ್ ತಂದೆ ಈ ಸಿನಿಮಾವ ವಿತರಣೆ ಮಾಡ್ತಾ ಇದ್ದಾರೆ. ಇನ್ನು ತಮಿಳಿನಲ್ಲಿ ದಕ್ಷಿಣ ಭಾರತದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಮತ್ತು ವಿತರಣ ಸಂಸ್ಥೆ ಲೈಕಾ ಸಂಸ್ಥೆಯ ಮುಖ್ಯಸ್ಥ ಸುಭಾಷ್ ಕರಣ್, ಕಬ್ಜ ನೋಡಿ ಮೆಚ್ಚಿ ತಾವೇ ವಿತರಣೆ ಹಕ್ಕನ್ನು ಖರೀದಿ ಮಾಡಿದ್ದಾರೆ. ಇದು ಕನ್ನಡಿಗರ ಬಹುನಿರೀಕ್ಷಿತ‌ ಕಬ್ಜ ಚಿತ್ರಕ್ಕೆ ಕಾಲಿವುಡ್ ನಲ್ಲಿ ಸಿಕ್ಕ ಮೊದಲ ಗೆಲುವು ಆಗಿದೆ.

ಇನ್ನು ಕಬ್ಜ ಸಿನಿಮಾದಲ್ಲಿ ಉಪೇಂದ್ರ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿರೋದು ಟ್ರೈಲರ್ ನಲ್ಲಿ ರಿವೀಲ್ ಆಗಿದೆ. ಖಡಕ್ ಪೊಲೀಸ್ ಆಫೀಸರ್ ಆಗಿ ಕಿಚ್ಚ ಸುದೀಪ್ ಅಬ್ಬರಿಸಿದ್ದಾರೆ. ಇನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗನ್ ಹಿಡಿದು ಬರುವ ಸನ್ನಿವೇಶ ಸಾಕಷ್ಟು ಕುತೂಹಲ ಮೂಡಿಸಿದೆ. ಇದರ ಜೊತೆ ಟಾಲಿವುಡ್ ಸುಂದರಿ ಶ್ರೀಯಾ ಶರಣ್​, ಕಬೀರ್​ ಸಿಂಗ್​ ದುಹಾನ್​, ಪ್ರಮೋದ್​ ಶೆಟ್ಟಿ, ಮುರಳಿ ಶರ್ಮ ನವಾಬ್ ಷಾ, ತೆಲುಗಿನ ಬೇಡಿಕೆಯ ನಟರಾದ ಪೊಸನಿ ಕೃಷ್ಣ ಮುರಳಿ ಹೀಗೆ ಬಿಗ್ ಸ್ಟಾರ್ ಕಾಸ್ಟ್ ಈ ಚಿತ್ರದಲ್ಲಿದೆ. ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್.ಚಂದ್ರು ಅವರೇ ನಿರ್ಮಿಸುತ್ತಿರುವ ಕಬ್ಜ ಚಿತ್ರಕ್ಕೆ ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ, ರವಿವರ್ಮ, ವಿಕ್ರಂಮೋರ್, ವಿಜಯ್​ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ.

ಒಟ್ಟಾರೆ ನಿರ್ದೇಶಕ ಆರ್​. ಚಂದ್ರು ಪರಿಶ್ರಮದಿಂದಾಗಿ ಎಲ್ಲರೂ ಕಬ್ಜ ಚಿತ್ರದ ಬಗ್ಗೆ ಮಾತಾಡುವಂತಾಗಿದೆ. ಕ್ವಾಲಿಟಿ ಅಂದ್ರೆ ಕಬ್ಜ, ಕಬ್ಜ ಅಂದ್ರೆ ಕ್ವಾಲಿಟಿ ಅಂತ ಎಲ್ಲರೂ ಕಮೆಂಟ್​ ಮಾಡ್ತಿದ್ದಾರೆ. ಮೇಕಿಂಗ್​ ಸ್ಟೈಲ್​ ನೋಡಿ ಪರಭಾಷೆಯ ಮಂದಿ ಬಾಯಿ ಮೇಲೆ ಬೆರಳು ಇಟ್ಕೊಂಡಿದಾರೆ. ಈ ಎಲ್ಲ ಸೂಚನೆಗಳನ್ನ ನೋಡ್ತಾ ಇದ್ರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದೊಂದು ವಿಶ್ವದ್ಯಾಂತ ಕಬ್ಜ ಸಿನಿಮಾ ಬಿಡುಗಡೆ ಆಗುವ ಮೂಲಕ ಕಬ್ಜ ಚಿತ್ರ ಹೊಸ ಅಧ್ಯಾಯ ಬರೆಯಲಿದೆ.

ಇದನ್ನೂ ಓದಿ:'ಕಬ್ಜ'ದಲ್ಲಿ ಮಿರಮಿರ ಮಿಂಚುವ ವಿಂಟೇಜ್​ ಕಾರುಗಳು.. ಖರ್ಚು ಎಷ್ಟು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.