ಬೆಂಗಳೂರು : ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬ್ಬಡ್ಡಿ ಲೀಗ್ ಪಂದ್ಯಾವಳಿಯ 3ನೇ ಹಂತದ ಪಂದ್ಯಗಳು ಇಂದಿನಿಂದ (ಜೂನ್ 1ರಿಂದ) ಪ್ರಾರಂಭವಾಗಿದ್ದು, ಜೂನ್ 4ರವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿವೆ.
ಪಂದ್ಯಾವಳಿಯ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನ್ಯೂ ಕಬಡ್ಡಿ ಫೆಡರೇಷನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಬಾಬು, ಪುಣೆ ಹಾಗೂ ಮೈಸೂರಿನಲ್ಲಿ ಯಶಸ್ವಿಯಾಗಿ ನಡೆದ ಪಂದ್ಯಾವಳಿಯ ಸೆಮಿಫೈನಲ್, ಫೈನಲ್ ಹಾಗೂ 3ನೇ ಸ್ಥಾನದ ಪಂದ್ಯಗಳು ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿವೆ. ಫೈನಲ್ ಪಂದ್ಯಕ್ಕೆ ರಾಜ್ಯಪಾಲ ವಜುಭಾಯಿವಾಲಾ ಸೇರಿದಂತೆ ಇತರೆ ಗಣ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಜಾಗತಿಕವಾಗಿ ಗಮನ ಸೆಳೆದಿರುವ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬ್ಬಡ್ಡಿ ಲೀಗ್ ಪಂದ್ಯಗಳು ಡಿಡಿ ಸ್ಪೋರ್ಟ್ಸ್‌ನಲ್ಲಿ ಪ್ರಸಾರವಾಗುತ್ತಿದ್ದು, ಪ್ರತಿಷ್ಠಿತ ಕಂಪನಿಗಳು ಪ್ರಾಯೋಜಕತ್ವವನ್ನು ಪಡೆದಿವೆ. ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಲೀಗ್‍ಗೆ ಆಯ್ಕೆಯಾಗಿರುವ ಕನ್ನಡ ಆಟಗಾರರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ವಿಜೇತ ತಂಡ 1.2 ಕೋಟಿ ಬಹುಮಾನ, ದ್ವೀತಿಯ ಸ್ಥಾನ ಪಡೆದ ತಂಡ 75 ಲಕ್ಷ ಬಹುಮಾನ, ತೃತೀಯ ಸ್ಥಾನ ಪಡೆದ ತಂಡ 50 ಲಕ್ಷ ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡ 25 ಲಕ್ಷ ರೂ. ಬಹುಮಾನ ಪಡೆಯಲಿವೆ. ವೈಯಕ್ತಿಕ ಪ್ರಶಸ್ತಿಗಳು ಸೇರಿದಂತೆ ಪ್ರತಿ ಪಂದ್ಯಕ್ಕೆ ಪಂದ್ಯ ಪುರುಷ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.
ಸಂಜೆ 6 ಗಂಟೆಯಿಂದ ಸಾಂಸ್ಕತಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, 7 ಗಂಟೆಯಿಂದ 9 ಗಂಟೆವರೆಗ ಕಬ್ಬಡಿ ಪಂದ್ಯಾವಳಿ ಪ್ರಾರಂಭವಾಗಲಿವೆ. ಗ್ರಾಮೀಣ ಕ್ರೀಡೆಯನ್ನು ಪ್ರಚಾರಗೊಳಿಸಲು ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಬುಕ್ ಮೈ ಶೋ ಮೂಲಕ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು ಎಂದರು.