ETV Bharat / entertainment

ಅಜ್ಜಿಯ ಆಸೆಯಂತೆ ಪ್ರೀತಿಸಿದ ಹುಡುಗಿಯೊಂದಿಗೆ ಡಾಲಿ ಧನಂಜಯ್‌ ನಿಶ್ಚಿತಾರ್ಥ: ಮದುವೆ ದಿನಾಂಕವೂ ಫಿಕ್ಸ್‌ - DAALI DHANANJAY ENGAGED

ನಟ ಡಾಲಿ ಧನಂಜಯ್​ ಅವರು ತಾನು ಪ್ರೀತಿಸಿದ ಹುಡುಗಿ ಜೊತೆ ಅರಸೀಕೆರೆಯಲ್ಲಿರುವ ತಮ್ಮ ನಿವಾಸದಲ್ಲಿ ಭಾನುವಾರ ನಿಶ್ಚಿತಾರ್ಥ ಮಾಡಿಕೊಂಡರು.

ನಟ ಡಾಲಿ ಧನಂಜಯ್- ವೈದ್ಯೆ ಧನ್ಯತಾ ನಿಶ್ಚಿತಾರ್ಥದ ಕ್ಷಣ
ನಟ ಡಾಲಿ ಧನಂಜಯ್- ಡಾ.ಧನ್ಯತಾ ನಿಶ್ಚಿತಾರ್ಥ (ETV Bharat)
author img

By ETV Bharat Karnataka Team

Published : Nov 18, 2024, 11:35 AM IST

ದೀಪಾವಳಿ ಹಬ್ಬದಂದು ಸುಂದರ ಕವಿತೆಯೊಂದಿಗೆ ಆಕರ್ಷಕ ವಿಡಿಯೋ ಹಂಚಿಕೊಳ್ಳುವ ಮೂಲಕ ಮದುವೆ ಸುದ್ದಿ ರಿವೀಲ್ ಮಾಡಿದ್ದ ನಟ ಡಾಲಿ ಧನಂಜಯ್ ತಾನು ಪ್ರೀತಿಸಿದ ಹುಡುಗಿ ಡಾ.ಧನ್ಯತಾ ಅವರೊಂದಿಗೆ​ ಭಾನುವಾರ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡರು.

ತಮ್ಮ ಅಜ್ಜಿಯ ಆಸೆಯಂತೆ ಧನಂಜಯ್​ ಅವರ ನಿವಾಸವಿರುವ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ನಿಶ್ಚಿತಾರ್ಥ ನಡೆಯಿತು. ಡಾಲಿ ಧನಂಜಯ್ ಮತ್ತು ಡಾ.ಧನ್ಯತಾ ಪರಸ್ಪರ ಉಂಗುರ ತೊಡಿಸಿಕೊಂಡರು. ಈ ಸಂದರ್ಭದಲ್ಲಿ ಧನಂಜಯ್ ಹಾಗೂ ಧನ್ಯತಾ ಕುಟುಂಬದವರು ಹಾಗೂ ಊರಿನ ಕೆಲವು ಸ್ನೇಹಿತರು ಭಾಗಿಯಾಗಿದ್ದರು.

ನಟ ಡಾಲಿ ಧನಂಜಯ್- ಡಾ.ಧನ್ಯತಾ ನಿಶ್ಚಿತಾರ್ಥ ಕಾರ್ಯಕ್ರಮ (ETV Bharat)

"ಡಾಲಿ ಅಜ್ಜಿ ಮಲ್ಲಮ್ಮ ಬದುಕಿದ್ದರೆ, ಮೊಮ್ಮಗನ ಮದುವೆ ನೋಡಿ ತುಂಬಾ ಖುಷಿ‌ ಪಡುತ್ತಿದ್ದರು" ಎಂದು ಡಾಲಿ ಧನಂಜಯ್ ಆಪ್ತರೊಬ್ಬರು ತಿಳಿಸಿದರು.

ಫೆಬ್ರವರಿ 16ರಂದು ಮೈಸೂರಿನಲ್ಲಿ ಮದುವೆ: ನಿನ್ನೆ ಲಗ್ನಪತ್ರಿಕೆ ಬರೆಸುವ ಶಾಸ್ತ್ರವೂ ನಡೆದಿದೆ. 2025ರ ಫೆಬ್ರವರಿ 16ರಂದು ಮದುವೆ ಸಮಾರಂಭ ನಡೆಯಲಿದೆ.

ನಟ ಡಾಲಿ ಧನಂಜಯ್- ವೈದ್ಯೆ ಧನ್ಯತಾ ನಿಶ್ಚಿತಾರ್ಥದ ಕ್ಷಣ
ಡಾಲಿ ಧನಂಜಯ್- ಡಾ.ಧನ್ಯತಾ ನಿಶ್ಚಿತಾರ್ಥ ಕಾರ್ಯಕ್ರಮ (ETV Bharat)

ಡಾಲಿ ಮತ್ತು ಧನ್ಯತಾ ಅನೇಕ ವರ್ಷಗಳಿಂದ ಪರಿಚಯದಲ್ಲಿದ್ದರು. ಈ ಪರಿಚಯ ಪ್ರೀತಿಗೆ ತಿರುಗಿ ಇದೀಗ ಇಬ್ಬರೂ ಹಸೆಮಣೆಯೇರಲು ಅಣಿಯಾಗುತ್ತಿದ್ದಾರೆ. ಚಿತ್ರದುರ್ಗದ ಧನ್ಯತಾ ಓದಿದ್ದು ಮೈಸೂರಿನಲ್ಲಿ. ಅರಸಿಕೆರೆ ನಿವಾಸಿಯಾಗಿರುವ ನಟ ಧನಂಜಯ್ ಕೂಡಾ ಮೈಸೂರಿನಲ್ಲಿಯೇ ಶಿಕ್ಷಣ ಪಡೆದಿದ್ದರು. ಹೀಗಾಗಿ, ಮೈಸೂರು ನಗರಿ ಧನಂಜಯ್ ಮತ್ತು ಧನ್ಯತಾ ಇಬ್ಬರಿಗೂ ಭಾವನಾತ್ಮಕವಾಗಿ ಕನೆಕ್ಟ್​ ಆದ ಸ್ಥಳವಾಗಿದೆ.

ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬ್ಯೂಷನ್​ ಗ್ರೌಂಡ್​​ನಲ್ಲಿ ಮದುವೆ ಕಾರ್ಯಕ್ರಮ ಆಯೋಜಿಸಲು ಉಭಯ ಕುಟುಂಬಗಳು ತೀರ್ಮಾನಿಸಿವೆ.

ಇದನ್ನೂ ಓದಿ: ದೀಪಾವಳಿಗೆ ಗುಡ್​ ನ್ಯೂಸ್​ ಕೊಟ್ಟ ಡಾಲಿ: ಕೈಹಿಡಿಯೋ ಬಾಳಸಂಗಾತಿ ಪರಿಚಯಿಸಿದ ಧನಂಜಯ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.