ETV Bharat / state

ಸಚಿವ ಸುಧಾಕರ್ ಬಾಮೈದಗೂ ತಗುಲಿದ ಕೊರೊನಾ ಸೋಂಕು‌

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರ ಬಾಮೈದ ಮತ್ತು ಅವರ ಸ್ನೇಹಿತನಿಗೂ ಕೊರೊನಾ ಸೋಂಕು ತಗುಲಿದೆ. ಈ ಇಬ್ಬರನ್ನು ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

sudhakar brother in law test covid-19 positive
ಸಚಿವ ಸುಧಾಕರ್ ಭಾಮೈದನಿಗೆ ಕೊರೊನಾ
author img

By

Published : Jun 25, 2020, 3:20 PM IST

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರ ತಂದೆ, ಪತ್ನಿ, ಪುತ್ರಿಯ ನಂತರ ಅವರ ಬಾಮೈದ ಮತ್ತು ಬಾಮೈದನನ ಸ್ನೇಹಿತನಿಗೂ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ.

ಈಗಾಗಲೇ ವೈದ್ಯಾಧಿಕಾರಿಗಳು ಅವರನ್ನು ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಇತ್ತ ಸಚಿವರ 82 ವರ್ಷದ ತಂದೆಯ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

‌ಮತ್ತೆ ಬೆಂಗಳೂರಿನಲ್ಲಿ ರ‍್ಯಾಂಡಮ್ ಟೆಸ್ಟ್ ಆರಂಭ

ಬೆಂಗಳೂರಿನಲ್ಲಿ ಕೊರೊನಾ ಆತಂಕ ಹೆಚ್ಚಿದ್ದು, ಸ್ಥಗಿತಗೊಂಡಿದ್ದ ರ‍್ಯಾಂಡಮ್ ಟೆಸ್ಟ್ ಮತ್ತೆ ಆರಂಭವಾಗಿದೆ. ಆನಂದಪುರ, ಗಂಗೊಂಡಹಳ್ಳಿ, ಕೆ.ಆರ್. ಮಾರುಕಟ್ಟೆ, ಜೆಸಿ ನಗರ ಮಾರ್ಕೆಟ್ ಸೇರಿದಂತೆ ಹಲವೆಡೆ ಟೆಸ್ಟ್ ಆರಂಭಿಸಲಾಗಿದೆ.

ದಿನನಿತ್ಯ 400ಕ್ಕೂ ಹೆಚ್ಚು ಜನರ ಗಂಟಲು ದ್ರವ ಪಡೆಯುತ್ತಿದ್ದಾರೆ. ಲ್ಯಾಬ್​ಗಳಲ್ಲಿ ಲೋಡ್ ಹೆಚ್ಚಾದ ಹಿನ್ನೆಲೆಯಲ್ಲಿ ರ‍್ಯಾಂಡಮ್ ಟೆಸ್ಟ್​ಗೆ ಬ್ರೇಕ್ ಹಾಕಲಾಗಿತ್ತು. ಇದೀಗ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಟೆಸ್ಟ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಯಾಗಳಲ್ಲಿ ರ‍್ಯಾಂಡಮ್​ ಟೆಸ್ಟ್ ಮಾಡಲು ಪಾಲಿಕೆ ಚಿಂತನೆ ನಡೆಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.