ETV Bharat / state

ಕಕ್ಷಿದಾರನಿಗೆ ವಂಚನೆ ಆರೋಪ: ರಾಜ್ಯ ವಕೀಲರ ಪರಿಷತ್​ನ ಸದಸ್ಯ ಕೆ ಬಿ ನಾಯಕ್​ ವಕೀಲಿಕೆಯಿಂದ ಅಮಾನತು

author img

By

Published : Oct 19, 2022, 6:29 AM IST

ಬೆಳಗಾವಿಯ ವಕೀಲ ಬಸವರಾಜ ಜರಳಿ ಅವರು ಕೆ ಬಿ ನಾಯ್ಕ್ ವಿರುದ್ಧ ವೃತ್ತಿ ದುರ್ನಡತೆ ಕುರಿತು ನೀಡಿದ್ದ ದೂರನ್ನು ಕೆಎಸ್‌ಬಿಸಿ ತಿರಸ್ಕರಿಸಿದ್ದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ಬಿಸಿಐನ ಮೂವರು ಸದಸ್ಯರ ನೇತೃತ್ವದ ಶಿಸ್ತುಪಾಲನಾ ಸಮಿತಿಯು ಈ ಆದೇಶ ಮಾಡಿದೆ.

K B Naik suspended from State Bar Council
ಕಕ್ಷಿದಾರರೊಬ್ಬರಿಗೆ ವಂಚನೆ ಆರೋಪ

ಬೆಂಗಳೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್​ಬಿಸಿ) ಸದಸ್ಯ ಕೆ ಬಿ ನಾಯ್ಕ್ ಅವರು ವಿರುದ್ಧ ಸಲ್ಲಿಕೆಯಾಗಿರುವ ಪುನರ್​ ಪರಿಶೀಲನಾ ಅರ್ಜಿ ಇತ್ಯರ್ಥವಾಗುವವರಗೆ ದೇಶದ ಯಾವುದೇ ನ್ಯಾಯಾಲಯದಲ್ಲಿ ವಕೀಲಿಕೆ ವೃತ್ತಿ ಮಾಡದಂತೆ ಅವರಿಗೆ ಭಾರತೀಯ ವಕೀಲರ ಪರಿಷತ್​( ಬಿಸಿಐ) ಅಮಾನತ್ತು ಮಾಡಿದೆ.

ಬೆಳಗಾವಿಯ ವಕೀಲ ಬಸವರಾಜ ಜರಳಿ ಅವರು ಕೆ ಬಿ ನಾಯ್ಕ್ ವಿರುದ್ಧ ವೃತ್ತಿ ದುರ್ನಡತೆ ಕುರಿತು ನೀಡಿದ್ದ ದೂರನ್ನು ಕೆಎಸ್‌ಬಿಸಿ ತಿರಸ್ಕರಿಸಿದ್ದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ಬಿಸಿಐನ ಮೂವರು ಸದಸ್ಯರ ನೇತೃತ್ವದ ಶಿಸ್ತುಪಾಲನಾ ಸಮಿತಿಯು ಈ ಆದೇಶ ಮಾಡಿದೆ.

ಆರೋಪ ಸಂಬಂಧ ಎಲ್ಲಾ ದಾಖಲೆಗಳು, ವಿಚಾರಣಾಧೀನ ಮತ್ತು ಮೇಲ್ಮನವಿ ನ್ಯಾಯಾಲಯಗಳಲ್ಲಿನ ಅಭಿಪ್ರಾಯದ ಆಧಾರದಂತೆ ಪುನರ್​ ಪರಿಶೀನಾ ಅರ್ಜಿ ಇತ್ಯರ್ಥವಾಗುವವರೆಗೂ ನಾಯ್ಕ್‌ ಅವರು ಯಾವುದೇ ನ್ಯಾಯಾಲಯದಲ್ಲಿ ವಕೀಲಿಕೆ ವೃತ್ತಿ ಮಾಡದಂತೆ ಅಮಾನತು ಮಾಡಲಾಗಿದೆ ಎಂದು ಆದೇಶಸಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಆರೋಪ ಸಂಬಂಧ ಮುಂದಿನ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ನೋಟಿಸ್​ ಜಾರಿ ಮಾಡಿ ವಿಚಾರಣೆ ಮುಂದೂಡಲಾಗಿದೆ.

ಪ್ರಕರಣದ ಹಿನ್ನೆಲೆ ಏನು? : ಕೆ ಬಿ ನಾಯ್ಕ್ ಅವರು ಕ್ರಿಮಿನಲ್​ ಪ್ರಕರಣವೊಂದರಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಬೆಳಗಾವಿಯ ಸವದತ್ತಿ ತಾಲೂಕು ಕಾಗದಾಳ್ ಗ್ರಾಮದ ಬಸವರೆಡ್ಡಿ ವೆಂಕರೆಡ್ಡಿ ಚುಳಕಿ ಎಂಬುವರಿಗೆ ಸುಳ್ಳು ಮಾಹಿತಿ ನೀಡಿ ಸಹಿ ಪಡೆದು ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಮಾಡಿಕೊಂಡಿದ್ದರು. ಬಳಿಕ ಚುಳಕಿ ಅವರ ಜಮೀನನ್ನು ಅಕ್ರಮವಾಗಿ ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾರೆ.

ಆ ಮೂಲಕ ವೃತ್ತಿ ದುರ್ನಡತೆ ತೋರಿದ್ದು, ಅವರ ವಿರುದ್ಧ ಸ್ವಯಂಪ್ರೇರಿತ ಕ್ರಮಕೈಗೊಳ್ಳಬೇಕು ಎಂದು ಕೋರಿ ಚುಳಕಿ ಅವರ ವಕೀಲರಾದ ಬಸವರಾಜ್ ಮುರಗೇಶ್ ಜರಳಿ ಅವರು ಕೆಎಸ್​ ಬಿಸಿಗೆ ದೂರು ನೀಡಿದ್ದರು. ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ಬಸವರಡ್ಡಿ ಚುಳಕಿ ಅವರು ತಮ್ಮ ಜಮೀನಿಗೆ ಭೇಟಿ ನೀಡಿದ್ದು, ಅದೇ ಜಮೀನನ್ನು ಜಗೀಶ್​ ಕೃಷ್ಣಪ್ಪ ಹಣಶಿ ಎಂಬುವರು ಉಳುಮೆ ಮಾಡುತ್ತಿದ್ದರು. ಇದನ್ನು ಪ್ರಶ್ನಿಸಿದಾಗ ವಕೀಲ ಕೆ ಬಿ ನಾಯ್ಕ್ ಅವರು ಜನರಲ್ ಪವರ್ ಆಫ್ ಅಟಾರ್ನಿ ಪಡೆದುಕೊಂಡು, ಚುಳಕಿ ಅವರಿಗೆ ತಿಳಿಯದಂತೆ ಆಸ್ತಿಯನ್ನು ಮಾರಾಟ ಮಾಡಿದ್ದಾರೆ ಎಂಬ ವಿಚಾರ ತಿಳಿದಿತ್ತು.

ಇದಾದ ನಂತರ ಕಾನೂನು ಬಾಹಿರವಾಗಿ ಕ್ರಯ ಮಾಡಲಾಗಿರುವುದನ್ನು ವಜಾ ಮಾಡುವಂತೆ ಕೋರಿ ಚುಳಕಿ ಅವರು ಸವದತ್ತಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ಮುಂದೆ ದಾವೆ ಹೂಡಿದ್ದರು. ಈ ದಾವೆ ವಿಚಾರಣೆ ನಡೆಸಿದ್ದ ನ್ಯಾಯಾಲಯ ಮಾರಾಟ ಮಾಡಿದ್ದ ಒಪ್ಪಂದವನ್ನು ರದ್ದು ಮಾಡಿತ್ತು. ಜತೆಗೆ, ಜಮೀನನ್ನು ಮಾಲೀಕರಾದ ಚುಳಕಿ ಅವರಿಗೆ ಹಿಂದಿರುಗಿಸಿತ್ತು.

ಇದನ್ನು ಪ್ರಶ್ನಿಸಿ ಜಗೀಶ್​ ಕೃಷ್ಣಪ್ಪ ಹಣಸಿ ಅವರು ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ಸದರಿ ನ್ಯಾಯಾಲಯವು ಪ್ರಕರಣವನ್ನು ಮತ್ತೆ ಅಧೀನ ನ್ಯಾಯಾಲಯಕ್ಕೆ ನಿರ್ಧರಿಸಲು ವರ್ಗಾಯಿಸಿತ್ತು. ಇಲ್ಲಿ ಕೆ ಬಿ ನಾಯ್ಕ್ ಅವರನ್ನು ನಾಲ್ಕನೇ ಪ್ರತಿವಾದಿಯಾಗಿಸಿ, ಅವರು ಎಸಗಿದ್ದ ಕೃತ್ಯಗಳನ್ನು ಪೀಠದ ಗಮನಕ್ಕೆ ತರಲಾಗಿತ್ತು. ಇದನ್ನು ಪರಿಗಣಿಸಿದ್ದ ನ್ಯಾಯಾಲಯವು 2019ರ ಏಪ್ರಿಲ್ 26ರಂದು ಚುಳಕಿ ಅವರ ಪರವಾಗಿ ಆದೇಶ ಮಾಡಿತ್ತು ಎಂದು ಭಾರತೀಯ ವಕೀಲರ ಪರಿಷತ್​ಗೆ ಸಲ್ಲಿಸಿದ್ದ ದೂರಿನಲ್ಲಿ ವಿವರಿಸಲಾಗಿತ್ತು.

ಈ ಅಂಶವನ್ನು ಪರಿಗಣಿಸಿ ಅರ್ಜಿಯ ವಿಚಾರಣೆ ಪೂರ್ಣಗೊಳ್ಳುವರೆಗೂ ವಕೀಲಿ ವೃತ್ತಿ ಮಾಡದಂತೆ ನಾಯ್ಕ್​ ಅವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ.

ಇದನ್ನೂ ಓದಿ : ಸುಪ್ರೀಂಕೋರ್ಟ್​ ಆದೇಶ ಪಾಲಿಸದ ಲೋಕಾಯುಕ್ತ: ಹೈಕೋರ್ಟ್​ ನೋಟಿಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.