ಬೆಂಗಳೂರು: ವೈದ್ಯರೊಬ್ಬರ ಖಾಸಗಿ ವಿಡಿಯೊ ಪ್ರಸಾರ ಮಾಡುವುದಾಗಿ ಬೆದರಿಸಿ ಹಣಕ್ಕೆ ಡಿಮ್ಯಾಂಡ್ ಮಾಡಿದ ಖಾಸಗಿ ವಾಹಿನಿಯ ಪತ್ರಕರ್ತನನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ನಡೆಸಿದ್ದಾರೆ.
ಇಬ್ಬರು ಪತ್ರಕರ್ತರು ವೈದ್ಯ ಡಾ.ರಮೇಶ್ ರಾವ್ ಅವರಿಗೆ ಕರೆ ಮಾಡಿ ನಿಮ್ಮ ವೈಯಕ್ತಿಕ ಸಿಡಿ ಇದೆ ಎಂದು ಹೇಳಿ 50 ಲಕ್ಷ ರೂಗೆ ಡಿಮ್ಯಾಂಡ್ ಮಾಡಿ 5 ಲಕ್ಷ ಹಣ ಪಡೆದಿದ್ದರು ಎನ್ನಲಾಗಿದೆ. ಈ ಸಂಬಂಧ ವೈದ್ಯರು ನೀಡಿದ ದೂರಿನ ಮೇರೆಗೆ ಇಬ್ಬರೂ ಪತ್ರಕರ್ತರನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
ವೈದ್ಯ ಡಾ.ರಮಣ್ ರಾಜ್ ಕುಮಾರ್ ಕೌಟುಂಬಿಕ ವೈದ್ಯರಾಗಿದ್ದು, ಸದಾಶಿವನಗರದಲ್ಲಿ ನರ್ಸಿಂಗ್ ಹೋಂ ಇದೆ. ಇವರ ಖಾಸಗಿ ವಿಡಿಯೊವೊಂದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದನ್ನು ಪ್ರಸಾರ ಮಾಡುವುದಾಗಿ ಇಬ್ಬರು ಪತ್ರಕರ್ತರು ಬೆದರಿಕೆಯೊಡ್ಡಿದ್ದರು ಎಂದು ತಿಳಿದು ಬಂದಿದೆ.
ವೈದ್ಯರು ನೀಡಿದ ದೂರನ್ನು ಪರಿಗಣಿಸಿದ ಕೇಂದ್ರ ವಿಭಾಗ ಡಿಸಿಪಿ ಸಿಸಿಟಿವಿ ದೃಶ್ಯ ಆಧರಿಸಿ ಒಬ್ಬ ಆರೋಪಿಗಳನ್ನು ಸಾಕ್ಷಿ ಸಮೇತ ಅರೆಸ್ಟ್ ಮಾಡಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಆತನಿಗಾಗಿ ಬಲೆ ಬೀಸಲಾಗಿದೆ.
ಈ ಸಂಬಂದ ಈಟಿವಿ ಭಾರತ್ ಜೊತೆ ಕೇಂದ್ರ ವಿಭಾಗ ಡಿಸಿಪಿ ದೇವರಾಜ್ ಮಾತಾನಾಡಿ ಸದ್ಯಕ್ಕೆ ಸಾಕ್ಷಿ ಸಮೇತ ಆರೋಪಿಯನ್ನ ಹಿಡಿದಿದ್ದೇವೆ. ಆತನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಬೇಕೋ ಅಥವಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕೋ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.